Advertisement

ನಗದುರಹಿತ ವ್ಯವಹಾರಕ್ಕೆ ಸನ್ನದ್ಧರಾಗಿ

01:22 PM Mar 18, 2017 | Team Udayavani |

ದಾವಣಗೆರೆ: ನೋಟು ಅಮಾನ್ಯದ ನಂತರ ಕೇಂದ್ರ ಸರ್ಕಾರ ನಗದುರಹಿತ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಸಹಕಾರ ಪತ್ತಿನ ಸಂಘಗಳು ಸಹ ನಗದುರಹಿತ ವ್ಯವಹಾರಕ್ಕೆ ಸನ್ನದ್ಧವಾಗಬೇಕು ಎಂದು ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತದ ಅಧ್ಯಕ್ಷ ಸಿ.ಎಂ. ಮಾರೇಗೌಡ ತಿಳಿಸಿದ್ದಾರೆ. 

Advertisement

ಶುಕ್ರವಾರ ಜನತಾ ಬಜಾರ್‌ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದಿಂದ ಆಯೋಜಿಸಲಾಗಿದ್ದ ದಾವಣಗೆರೆ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಸಹಕಾರ ಪತ್ತಿನ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಧಿಕಾರಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟನಾಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಹಕಾರ ಪತ್ತಿನ ಸಂಘಗಳು ನಗದುರಹಿತ ವ್ಯವಹಾರಕ್ಕೆ ಸಜ್ಜಾಗುವಂತೆ ಗ್ರಾಹಕರನ್ನೂ ಸಿದ್ಧಪಡಿಸಬೇಕು ಎಂದರು. 2016ರ ನ. 8ರ ಹಿಂದೆ ಆದಾಯ ತೆರಿಗೆ ಇಲಾಖೆಯ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿರಲಿಲ್ಲ. ಕೇಂದ್ರ ಸರ್ಕಾರ 500, 1 ಸಾವಿರ ನೋಟು ಅಮಾನ್ಯ ಮಾಡಿದ ನಂತರವಂತೂ ಐಟಿ ಇಲಾಖೆ ಹೆಸರು ಕೇಳಿದರೆ ಭಯಪಡುವ ಪರಿಸ್ಥಿತಿ ಎದುರಾಗಿದೆ.

ಆದರೆ, ಸಹಕಾರಿ ಸಂಘದ ಯಾವುದೇ ವ್ಯಕ್ತಿಗಳು ಈ ಬಗ್ಗೆ ಆತಂಕ ಪಡಬೇಕಿಲ್ಲ. ಆದಾಯ, ವೃತ್ತಿ, ಸೇವಾ ತೆರಿಗೆ ಸೇರಿದಂತೆ ಸಹಕಾರಿ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾನೂನು ಬಗ್ಗೆ ಪರಿಪೂರ್ಣವಾಗಿ ತಿಳಿದುಕೊಂಡಿದ್ದರೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.ದಾವಣಗೆರೆ-ಹರಿಹರ ಪಟ್ಟಣ ಸಹಕಾರ ಬ್ಯಾಂಕ್‌ ಅಧ್ಯಕ್ಷ ಎನ್‌.ಎಂ.ಜೆ.ಬಿ. ಆರಾಧ್ಯ ಮಾತನಾಡಿ,

ಯಾವುದೇ ಸಹಕಾರ ಸಂಘಗಳೇ ಆಗಲಿ ಶೋಷಿತರ ಆರ್ಥಿಕ ಸ್ಥಿತಿಗತಿಗಳನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಅವರ ಅಗತ್ಯಕ್ಕೆ ತಕ್ಕಂತೆ ಆರ್ಥಿಕ ಸಹಾಯ ಮಾಡಿ, ಪಾರದರ್ಶಕವಾಗಿ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ಮೂಲಕ ಹೆಮ್ಮರವಾಗಿ ಬೆಳೆಯಲು ಸಾಧ್ಯ ಎಂದು ತಿಳಿಸಿದರು. ಜನಸಾಮಾನ್ಯರ ಅಗತ್ಯತೆಗಳಿಗೆ ತಕ್ಕಂತೆ ಸಮಾಜದ ಕೆಳಸ್ತರದ ಜನರಿಗೆ ಆರ್ಥಿಕ ಸಹಾಯ ನೀಡಿ ಅವರನ್ನು ಮೇಲೆತ್ತಲು ಸಹಕಾರ ಸಂಘಗಳು ಸಹಾಯಕವಾಗುತ್ತವೆ. 

Advertisement

ಸಾಲ ಸೌಲಭ್ಯ ಪಡೆಯಲು ಕೆಲವು ಬ್ಯಾಂಕುಗಳಲ್ಲಿ ಜನಸಾಮಾನ್ಯರು ಪರದಾಡುತ್ತಿಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಹಕಾರ ಸಂಘಗಳು ಉತ್ತಮರೀತಿಯಲ್ಲಿ ಗ್ರಾಹಕರಿಗೆ ಸ್ಪಂದಿಸುವ ಮೂಲಕ ಅವರ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು. ಸಹಕಾರಿ ಸಂಘಗಳಲ್ಲಿ ಖಾತೆ ತೆರೆಯುವ ಸಂದರ್ಭದಲ್ಲಿ ಸಿಬ್ಬಂದಿ ಗ್ರಾಹಕರಿಗೆ ಸೂಕ್ತ ಸಲಹೆ ನೀಡುವ ಮೂಲಕ ಸ್ಪಂದಿಸಬೇಕು.

ಆಡಳಿತ ಮಂಡಳಿಯವರು ಸಹ ಅಗತ್ಯ ಸಹಕಾರ ನೀಡಬೇಕು. ಸಹಕಾರಿ ಸಂಘಗಳ ಚುಕ್ಕಾಣಿ ಹಿಡಿಯುವರು ಎಲ್ಲಾ ಹಂತದಲ್ಲೂಶ್ರಮವಹಿಸಿ ದುಡಿದಾಗ ಮಾತ್ರ ಸಹಕಾರ ಸಂಘಗಳು ಸಹಕಾರ ಬ್ಯಾಂಕುಗಳಾಗಲು ಸಾಧ್ಯ. ಆ ನಿಟ್ಟಿನಲ್ಲಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು ಮತ್ತುಮುಖ್ಯ ಕಾರ್ಯ   ನಿರ್ವಹಣಾಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು. 

ಶೋಷಿತರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಪ್ರಥಮವಾಗಿ ಸಹಕಾರ ಸಂಘ ಪ್ರಾರಂಭವಾದವು. ಈಗ ದೇಶಾದಾದ್ಯಂತ ಸಹಕಾರಿಗಳು ಆರ್ಥಿಕವಾಗಿ ಹಿಂದುಳಿದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿವೆ. ಅಲ್ಲದೇ ಅವರು ಸ್ವಾವಲಂಬಿಗಳಾಗಲು ಸಹಕರಿಸುತ್ತಿವೆ ಎಂದು ಸ್ಮರಿಸಿದರು. 

ಮಹಾಮಂಡಳದ ರಾಜ್ಯ ಉಪಾಧ್ಯಕ್ಷ ಬಿ.ಡಿ. ಭೂಕಾಂತ್‌, ಜಿಲ್ಲಾ ಸಹಕಾರ ಯೂನಿಯನ್‌ಅಧ್ಯಕ್ಷ ಯು.ಜಿ. ಶಿವಕುಮಾರ್‌, ವ್ಯವಸ್ಥಾಪಕ ಕೆ.ಎಂ. ಜಗದೀಶ್‌, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ. ದಕ್ಷಿಣಮೂರ್ತಿ, ಜಿ. ಮಲ್ಲಿಕಾರ್ಜುನಯ್ಯ, ಜಿ. ವೀರಯ್ಯ, ಎಸ್‌ .ಜಿ. ಕುಲಕರ್ಣಿ, ಕಾಮತ್‌, ಗುರುಮೂರ್ತಿ, ಬಿ.ವಿ. ರವೀಂದ್ರನಾಥ್‌, ಭುಜಂಗಶೆಟ್ಟಿ, ಕೆ.ಎಸ್‌. ಗುರುಪ್ರಸಾದ್‌ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next