Advertisement

ಇಬ್ಬರು ಬಿಜೆಪಿ ಶಾಸಕರ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿ

04:23 PM Aug 19, 2017 | udayavani editorial |

ಮುಜಫ‌ರನಗರ : ಐದು ವರ್ಷಗಳ ಹಿಂದೆ ರೈಲು ಸೇವೆಗಳನ್ನು ತಡೆದ ಪ್ರಕರಣಕ್ಕೆ ಸಂಬಂಧಿಸಿದ ಕೇಸಿನಲ್ಲಿ ಕೋರ್ಟಿಗೆ ಹಾಜರಾಗದ ಇಬ್ಬರು ಬಿಜೆಪಿ ಶಾಸಕರ ವಿರುದ್ಧ ಇಲ್ಲಿನ ಸ್ಥಳೀಯ ನ್ಯಾಯಾಲಯ ಜಾಮೀನು ರಹಿತ ಅರೆಸ್ಟ್‌ ವಾರಂಟ್‌ ಜಾರಿ ಮಾಡಿದೆ. 

Advertisement

ಪ್ರಾಸಿಕ್ಯೂಶನ್‌ ನೀಡಿರುವ ಮಾಹಿತಿಯ ಪ್ರಕಾರ ಮುಖ್ಯ ನ್ಯಾಯಾಂಗ  ಮ್ಯಾಜಿಸ್ಟ್ರೇಟ್‌ ಗೋಪಾಲ್‌ ತಿವಾರಿ ಅವರು ಇಬ್ಬರು ಬಿಜೆಪಿ ಶಾಸಕರಾಗಿರುವ ಕಪಿಲ್‌ ಅಗ್ರವಾಲ್‌ (ಮುಜಫ‌ರನಗರ ಕ್ಷೇತ್ರ) ಮತ್ತು ಉಮೇಶ್‌ ಮಲಿಕ್‌ (ಬುಢಾನಾ ಕ್ಷೇತ್ರ) ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿ ಮಾಡಿದ್ದಾರೆ. 

ಕೇಸಿಗೆ ಸಂಬಂಧಿಸಿದಂತೆ ಈ ಇಬ್ಬರು ಶಾಸಕರನ್ನು ಸೆ.30ರಂದು ಕೋರ್ಟಿನಲ್ಲಿ ಹಾಜರುಪಡಿಸುವಂತೆ ನ್ಯಾಯಾಧೀಶರು ಪೊಲೀಸರಿಗೆ ಆದೇಶಿಸಿದ್ದಾರೆ. 

2012ರ ಎಪ್ರಿಲ್‌ 3ರಂದು ರೈಲು ಸೇವೆ ತಡೆದ ಪ್ರಕರಣಕ್ಕೆ ಸಂಬಂಧಿಸಿ ರೈಲ್ವೇ ಪೊಲೀಸರು ಈ ಇಬ್ಬರು ಶಾಸಕರ ಸಹಿತ ಹಲವಾರು ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next