Advertisement

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ನಾಮನಿರ್ದೇಶನ

08:48 PM May 05, 2020 | Sriram |

ಹೊಸದಿಲ್ಲಿ: ಪ್ರತಿಷ್ಠಿತ ರಾಜೀವ್‌ ಗಾಂಧಿ ಖೇಲ್‌ ರತ್ನ ಸಹಿತ ವಿವಿಧ ಕ್ರೀಡಾ ಗೌರವಗಳಿಗಾಗಿ ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ಕ್ರೀಡಾ ಸಚಿವಾಲಯ ಆರಂಭಿಸಿದೆ.

Advertisement

ಕೋವಿಡ್-19ದಿಂದ ದೇಶ ದೆಲ್ಲೆಡೆ ಲಾಕ್‌ಡೌನ್‌ ಇರುವ ಕಾರಣ ಈ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಇ-ಮೇಲ್‌ ಮೂಲಕ ತಮ್ಮ ಹೆಸರನ್ನು ನಾಮನಿರ್ದೇಶನ ಮಾಡುವಂತೆ ಕ್ರೀಡಾ ಸಚಿವಾಲಯವು ಫೆಡರೇಶನ್‌ಗಳನ್ನು ಕೇಳಿಕೊಂಡಿದೆ.

ಜೂನ್‌ 3 ಅಂತಿಮ ದಿನ
ಲಾಕ್‌ಡೌನ್‌ ಕಾರಣ ನಾಮನಿರ್ದೇಶನದ ಮೂಲ ಪ್ರತಿಗಳನ್ನು ಕಳುಹಿಸುವ ಅಗತ್ಯವಿಲ್ಲ,. ಆದರೆ ಅರ್ಜಿದಾರ ಮತ್ತು ಶಿಫಾರಸು ಮಾಡಿರುವ ಸಂಬಂಧಪಟ್ಟ ಫೆಡರೇಶನ್‌ಗಳು ಸಹಿ ಮಾಡಿರುವ ನಾಮನಿರ್ದೇಶನದ ಸ್ಕ್ಯಾನ್‌ ಪ್ರತಿಗಳನ್ನು ಕೊನೆಯ ದಿನಾಂಕದ ಒಳಗೆ ಸಲ್ಲಿಸಬೇಕಾಗಿದೆ ಎಂದು ಸಚಿವಾಲಯದ ಪ್ರಕಟನೆ ತಿಳಿಸಿದೆ.

ಅರ್ಜಿದಾರರು ಭರ್ತಿ ಮಾಡಿದ ನಾಮ ನಿರ್ದೇಶನದ ಪ್ರತಿಯನ್ನು ಜೂನ್‌ 3ರ ಮೊದಲು ಸಲ್ಲಿಸಬೇಕಾಗಿದೆ. ಅನಂತರ ಬಂದವುಗಳನ್ನು ಪರಿಗಣಿಸಲಾಗುವುದಿಲ್ಲ. ಯಾವುದೇ ರೀತಿಯ ವಿಳಂಬಕ್ಕೆ ಸಚಿವಾಲಯ ಜವಾಬ್ದಾರವಾಗಿರದು ಎಂದು ಪ್ರಕಟನೆ ಹೇಳಿದೆ.

ಖೇಲ್‌ ರತ್ನ ಸಹಿತ ಅರ್ಜುನ ಪ್ರಶಸ್ತಿಯನ್ನು ಕ್ರೀಡಾಪಟುಗಳಿಗೆ ನೀಡಲಾಗುತ್ತದೆ. ಈ ವರ್ಷದ ಅರ್ಜುನ ಮತ್ತು ಖೇಲ್‌ ರತ್ನ ಪ್ರಶಸ್ತಿಗಳಿಗಾಗಿ 2016ರ ಜನವರಿಯಿಂದ 2019ರ ಡಿಸೆಂಬರ್‌ವರೆಗಿನ ಆಟಗಾರರ ಸಾಧನೆಯನ್ನು ಪರಿಗಣಿಸಲಾಗುತ್ತದೆ. ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಆಟಗಾರರನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next