Advertisement
ಪ್ರಮುಖವಾಗಿ ಈಗಾಗಲೇ ನೋಕಿಯಾದ 3 ಸ್ಮಾರ್ಟ್ ಪೋನ್ ಗಳು ಬಿಡುಗಡೆಗೆ ಸಿದ್ದವಾಗಿದ್ದು,ಇದರಲ್ಲಿ ನೋಕಿಯಾದ 7.3 ಸ್ಮಾರ್ಟ್ ಪೋನ್ ನ ವಿಶೇಷತೆಗಳು ಆನ್ ಲೈನ್ ನಲ್ಲಿ ಸೋರಿಕೆಯಾಗಿದೆ. ಮಾಹಿತಿ ಪ್ರಕಾರ ನೋಕಿಯಾ 7.3 ಸ್ಮಾರ್ಟ್ ಫೋನ್ 5,050 mAh ಬ್ಯಾಟರಿ ಸಾಮಾರ್ಥ್ಯವನ್ನು ಹೊಂದಿದೆ. ಮಾತ್ರವಲ್ಲದೆ ಕ್ವಾಲ್ ಕಾಮ್ಸ್ ಸ್ನ್ಯಾಪ್ ಡ್ರ್ಯಾಗನ್ 690 ಪ್ರೊಸೆಸ್ಸರ್ ಹೊಂದಿದೆ.
Related Articles
Advertisement
ಇದರ ಹೊರತಾಗಿ ನೋಕಿಯಾ 10 ಕೂಡ ಬಿಡುಗಡೆಗೊಳ್ಳಲು ಸಿದ್ದವಾಗುತ್ತಿದೆ ಎಂದು ಹೇಳಲಾಗುತ್ತಿದ್ದು, 5G, 90Hz ಡಿಸ್ ಪ್ಲೇ, ಪೆಂಟಾ ಕ್ಯಾಮಾರ ಸೆಟಪ್, ಫ್ಲ್ಯಾಗ್ ಶಿಪ್ ಪ್ರೊಸೆಸ್ಸರ್ ಸೇರಿದಂತೆ ಅತೀ ಹೆಚ್ಚು ಸಾಮರ್ಥ್ಯದ ಫೀಚರ್ ಗಳನ್ನು ಒಳಗೊಂಡಿದೆ ಎಂದು ವರದಿಯಾಗಿದೆ.
2021 ರಲ್ಲಿ ಈ ಎಲ್ಲಾ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗಲಿವೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಉಡುಪಿ ಜಿಲ್ಲೆಯ ಬೀಚ್ ಗಳಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧ: ಜಿಲ್ಲಾಧಿಕಾರಿ