ವಾಷಿಂಗ್ಟನ್ : ನೋಕಿಯಾ ಬ್ರಾಂಡೆಡ್ ಪೋನ್ ಗಳ ತಯಾರಿ ಮತ್ತು ಮಾರಾಟ ಮಾಡುತ್ತಿರುವ ಹೆಚ್ಎಂಡಿ ಗ್ಲೋಬಲ್, ಮುಂದಿನ ವರ್ಷ ಕೈಗೆಟುಕುವ ದರದಲ್ಲಿ “ನೋಕಿಯಾ 5ಜಿ” ಸ್ಮಾರ್ಟ್ ಪೋನ್ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ಅಮೇರಿಕಾದಲ್ಲಿ ಈಗೀರುವ ನೋಕಿಯಾ ಪೋನ್ ಗಳ ದರಕ್ಕಿಂತ ಅರ್ಧದಷ್ಟು ಬೆಲೆಯಲ್ಲಿ 5ಜಿ ಫೋನ್ ಗಳನ್ನು ಬಿಡುಗಡೆ ಮಾಡುವ ಚಿಂತನೆಯಲ್ಲಿದೆ.
5ಜಿ ಸ್ಮಾರ್ಟ್ ಪೋನ್ ನನ್ನು ಕೈಗೆಟುಕುವ ದರದಲ್ಲಿ ಮಾರುಕಟ್ಟೆಗೆ ತರಲು ಒಂದು ಉತ್ತಮ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇವೆ. ಅತೀ ಕಡಿಮೆ ದರದಲ್ಲಿ ಮಾರುಕಟ್ಟೆಗೆ ಉತ್ಪನ್ನಗಳನ್ನು ಒದಗಿಸುವುದು ನಮ್ಮ ಉದ್ಧೇಶ ಎಂದು ಹೆಚ್ಎಂಡಿ ಗ್ಲೋಬಲ್ ನ ಚೀಫ್ ಪ್ರೊಡಕ್ಟ್ ಆಫಿಸರ್ ಜೂಹೋ ಸರ್ ವಿಕಾಸ್ ತಿಳಿಸಿದ್ದಾರೆ.
ಹೆಚ್ಎಂಡಿ ಗ್ಲೋಬಲ್ ಈ ವರ್ಷಾಂತ್ಯದಲ್ಲಿ ಎರಡು 5ಜಿ ಸ್ಮಾರ್ಟ್ ಪೋನ್ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ . ಒಂದು ಸ್ಮಾರ್ಟ್ ಫೋನ್ ನಲ್ಲಿ, 5 ಜಿ ಸೇವೆಯನ್ನು ಸಕ್ರಿಯಗೊಳಿಸಲು ಸ್ನ್ಯಾಪ್ ಡ್ರ್ಯಾಗನ್ 855 SoC ಜೊತೆಗೆ X ಮೋಡೆಮ್ ಅನ್ನು ವಿಲೀನಗೊಳಿಸಲಾಗಿದೆ. ಮತ್ತೊಂದರಲ್ಲಿ ಹೆಚ್ಚು ಮಧ್ಯಮ ಶ್ರೇಣಿಯ ಸ್ನ್ಯಾಪ್ ಡ್ರ್ಯಾಗನ್ 700 ಸೀರಿಸ್ ನ ಚಿಪ್ ಅನ್ನು ಅಳವಡಿಸಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಭಾರತದಲ್ಲಿ ಮುಂದಿನ ವರ್ಷದಿಂದ 5ಜಿ ಸೇವೆ ಆರಂಭ ವಾಗುವ ನಿರೀಕ್ಷೆ ಇದೆ. ಅದರ ಜೊತೆಗೆ ನೋಕಿಯಾ 5ಜಿ ಸ್ಮಾರ್ಟ್ ಪೋನ್ ಗಳು ಕೂಡ ಮಾರುಕಟ್ಟಗೆ ಲಗ್ಗೆಯಿಡುವ ಸಾಧ್ಯತೆ ಇವೆ.