Advertisement
2.3 ನೋಕಿಯಾ ಕೈರೋಕಳೆದ ವಾರ ಈಜಿಫ್ಟ್ ನಲ್ಲಿ ಬಿಡುಗಡೆಯಾಗಿರುವ ನೋಕಿಯಾದ ಬಜೆಟ್ ಮೊಬೈಲ್ 2.3, ಕೈರೋ ಸ್ಮಾರ್ಟ್ ಪೋನ್ ಅನ್ನು ಶೀಘ್ರದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಗುತ್ತದೆ ಎಂದು ಕಂಪನಿ ಟ್ವಿಟರ್ ಮೂಲಕ ತಿಳಿಸಿದ್ದು, ನೋಕಿಯಾ ಸ್ಮಾರ್ಟ್‌ಫೋನ್ ವೈಶಿಷ್ಟಗಳಿಗೆ ಸಂಬಂಧ ಪಟ್ಟಂತೆ ಎರಡು ತುಣಕುಗಳ ವಿಡಿಯೋ ಹಂಚಿಕೊಂಡಿದೆ. ಮೊದಲ ಟೀಸರ್‌ನಲ್ಲಿ ನೋಕಿಯಾ 2.3ನ ಬ್ಯಾಟರಿ ಸಾಮರ್ಥ್ಯ ಹಾಗೂ ಎರಡನೇ ಟೀಸರ್‌ನಲ್ಲಿ ಮೊಬೈಲ್ ಫೀಚರ್ ಬಗ್ಗೆ ಮಾಹಿತಿ ನೀಡಲಾಗಿದೆ.
ನೋಕಿಯಾ 2.3 ಸ್ಮಾರ್ಟ್ಫೋನ್ 6.2 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಜತೆಗೆ ಎಚ್‌ಡಿ 720/1520 ಪಿಕ್ಸೆಲ್ ರೆಸಲ್ಯೂಷನ್ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ವಾಟರ್‌ಡ್ರಾಪ್ ಶೇಪ್ ಡಿಸ್‌ಪ್ಲೇ ವಿನ್ಯಾಸವನ್ನು ಒಳಗೊಂಡಿದ್ದು, ಮೀಡಿಯಾ ಟೆಕ್ ಹಿಲಿಯೊ ಎ22 ಕ್ವಾಡ್ ಕೋರ್ ಪೊ›ಸೆಸರ್ ಸಾಮರ್ಥ್ಯವಿದೆ. 2ಜಿಬಿ ರ್ಯಾಮ್
ಆ್ಯಂಡ್ರಾಯ್ಡ್ 9 ಪೈ ಒಎಸ್ ಸಿಸ್ಟಮ್‌ವಿರುವ ಈ ಮೊಬೈಲ್ ಅಲ್ಲಿ 2ಜಿಬಿ ರ‍್ಯಾಮ್ ಮತ್ತು 32ಜಿಬಿ ಇಂಟರ್‌ನಲ್ ಮೆಮೊರಿ ಕೆಪಾಸಿಟಿ ಇದ್ದು, ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಮುಖ್ಯ ರಿರ್ಯ ಕ್ಯಾಮೆರಾ 2.2 ಅಪರ್‌ಚರ್‌ನೊಂದಿಗೆ 13ಎಂಪಿ ಸೆನ್ಸಾರ್ ಅನ್ನು ಹೊಂದಿದೆ. ಜತೆಗೆ ಸೆಕಂಡರಿ ಕ್ಯಾಮೆರಾದಲ್ಲಿ 2ಎಂಪಿ ಸೆನ್ಸಾರ್ ಮತ್ತು ಸೆಲ್ಫಿಗಾಗಿ ಮುಂಭಾಗದಲ್ಲಿ 5ಎಂಪಿ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದೆ.
Related Articles
ಈ ಮೊಬೈಲ್ ವಿಶಿಷ್ಟವೆಂದರೆ ಒಮ್ಮೆ ಮೊಬೈಲ್ ಅನ್ನು ಚಾರ್ಜ್ ಮಾಡಿದ್ದರೆ ಎರಡು ದಿನಗಳವರೆಗೆ ಬಾಳಿಕೆ ಬರುತ್ತದೆ ಎನ್ನಲಾಗುತ್ತಿದ್ದು, 4,000ಎಂಹೆಚ್ ಸಾಮರ್ಥ್ಯದ ಬ್ಯಾಟರಿಯನ್ನು ನೋಕಿಯಾ 2.3 ಕೈರೋ ಹೊಂದಿದೆ.
Advertisement