Advertisement

ಸೆಕ್ಸ್‌ಗೆ ಒಲ್ಲೆ ಎಂದ 13ರ ಬಾಲಕನ ಗುಪ್ತಾಂಗವನ್ನೇ ಸುಟ್ಟ ವಿವಾಹಿತೆ!

10:21 AM Oct 10, 2018 | |

ನೋಯ್ಡಾ: ಲೈಂಗಿಕ ಕ್ರಿಯೆಗೆ  ನೀಡಿದ ಆಹ್ವಾನವನ್ನು ತಿರಸ್ಕರಿಸಿದಕ್ಕೆ ಆಕ್ರೋಶಗೊಂಡ ಮಹಿಳೆಯೊಬ್ಬಳು 13 ವರ್ಷ ಪ್ರಾಯದ ಬಾಲಕನ ಮರ್ಮಾಂಗವನ್ನು ಕಾದ ಇಕ್ಕುಳದಿಂದ ಸುಟ್ಟ ಹೇಯ ಘಟನೆ ಗ್ರೇಟರ್‌ ನೋಯ್ಡಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

ಬದಲ್‌ಪುರ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಚಪ್ರೌಲಾ ಎಂಬಲ್ಲಿ ಘಟನೆ ನಡೆದಿದ್ದು, 20 ರ ಹರೆಯದ ಮಹಿಳೆ ಮನೆಯಲ್ಲಿ  ಓರ್ವಳೆ ಇದ್ದ ವೇಳೆ ನೆರೆಮನೆಯ ಬಾಲಕನನ್ನು ಕರೆದು ಲೈಂಗಿಕ ಕ್ರಿಯೆಗೆ ಆಹ್ವಾನ ನೀಡಿದ್ದಾಳೆ. ಬಾಲಕ ತಿರಸ್ಕರಿಸಿದಾಗ ಕುಪಿತಳಾಗಿ ಕೃತ್ಯ ಎಸಗಿದ್ದಾಳೆ ಎಂದು ಸಂತ್ರಸ್ತನ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿಕೊಂಡಿದ್ದಾರೆ. 

ಮಹಿಳೆ ಸದ್ಯ ತಲೆ ಮರೆಸಿಕೊಂಡಿದ್ದು ಆಕೆಯ ವಿರುದ್ಧ ಪೋಕ್ಸೋ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next