Advertisement

Noida: ನಾಪತ್ತೆಯಾದ ಬೆಕ್ಕಿನ ಬಗ್ಗೆ ಮಾಹಿತಿ ಕೊಟ್ರೆ 1 ಲಕ್ಷ ರೂ. ಬಹುಮಾನ: ಪೋಸ್ಟರ್‌ ವೈರಲ್

06:00 PM Jan 08, 2024 | Team Udayavani |

ನವದೆಹಲಿ: ಕಳೆದು ಹೋದ ಪ್ರೀತಿಯ ಬೆಕ್ಕಿನ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ನೋಯ್ಡಾ ಮೂಲದ ವ್ಯಕ್ತಿಯೊಬ್ಬರು ಅಂಟಿಸಿರುವ ಪೋಸ್ಟರ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಇದನ್ನೂ ಓದಿ:Udupi Paryaya: ಮಾರ್ಗಸೂಚಿ ರೂಪಿಸಲು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ನಿಂದ ವಜಾ

ಯಾರೇ ಆಗಲಿ ತನ್ನ ಪ್ರೀತಿಯ ಬೆಕ್ಕಿನ ಕುರಿತು ಮಾಹಿತಿ ನೀಡಿದಲ್ಲಿ ಒಂದು ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ತಿಳಿಸಿದ್ದು, ಪೋಸ್ಟರ್‌ ನಲ್ಲಿ ಕಾಣೆಯಾದ ಬೆಕ್ಕಿನ ಫೋಟೋ ಹಾಕಲಾಗಿದೆ.

ಪೋಸ್ಟರ್‌ ನಲ್ಲಿ ಬೆಕ್ಕಿನ ಹೆಸರು ಚೀಕು(ಗಂಡು), ವಯಸ್ಸು 1.5, ಬಣ್ಣ: ಶುಂಠಿಯ ಬಣ್ಣ. ಕುತ್ತಿಗೆಯ ಭಾಗದಲ್ಲಿ ಬಿಳಿ ಕೂದಲು ಇದ್ದು, ಈ ಬೆಕ್ಕಿನ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೋಸ್ಟರ್‌ ನಲ್ಲಿ ತಿಳಿಸಲಾಗಿದೆ.

ಬೆಕ್ಕಿನ ಮಾಲೀಕ ಅಜಯ್‌ ಕುಮಾರ್‌ ಅವರು ಎಕ್ಸ್‌ ನಲ್ಲಿ ಶೇರ್‌ ಮಾಡಿರುವ ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಡಿಸೆಂಬರ್‌ 24ರಿಂದ ಬೆಕ್ಕು ಕಾಣೆಯಾಗಿದ್ದು, ಈ ಬಗ್ಗೆ ಮಾಹಿತಿ ಇದ್ದಲ್ಲಿ ತಿಳಿಸುವಂತೆ ಪೋಸ್ಟರ್‌ ನಲ್ಲಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next