ನೋಯ್ಡಾ: 22 ವರ್ಷದ ಯುವತಿಯೊಬ್ಬಳನ್ನು ಆಕೆಯ ಪ್ರಿಯಕರ ಕತ್ತು ಹಿಸುಕಿ ಕೊಂದು ಹಾಕಿದ್ದು, ಬಳಿಕ ಬ್ಲೇಡ್‌ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ.
42ರ ಹರೆಯದ ವ್ಯಕ್ತಿಯ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯನ್ನು ಸದ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ರಾತ್ರಿ 10 ಗಂಟೆಯ ಸುಮಾರಿಗೆ ಚಿಜಾರ್ಸಿ ಗ್ರಾಮದಲ್ಲಿ ನಡೆದ ಘಟನೆಯ ಬಗ್ಗೆ ಸ್ಥಳೀಯ ನಿವಾಸಿಗಳು ಸೆಕ್ಟರ್ 63 ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂದುಸೆಂಟ್ರಲ್ ನೋಯ್ಡಾದ ಹೆಚ್ಚುವರಿ ಡಿಸಿಪಿ ಹಿರ್ದೇಶ್ ಕಥೇರಿಯಾ ಹೇಳಿದ್ದಾರೆ.
“ಪೊಲೀಸ್ ತಂಡವು ಸ್ಥಳವನ್ನು ತಲುಪಿದಾಗ ಅವರು ಗಾಯಗೊಂಡ ಸ್ಥಿತಿಯಲ್ಲಿ ಇಬ್ಬರನ್ನೂ ಕಂಡು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ವೈದ್ಯರು ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು, ಆರೋಪಿಯನ್ನು ಗಂಟಲಿನ ಗಾಯಗಳಿಂದಾಗಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ” ಎಂದು ಕಥೇರಿಯಾ ಹೇಳಿದರು.
ದೆಹಲಿಯಲ್ಲಿ ನೆಲೆಸಿದ್ದ ಬಲ್ಲಿಯಾ ಜಿಲ್ಲೆಯ ನಿಶಾ ಎಂಬ ಮಹಿಳೆ ಮತ್ತು ನೋಯ್ಡಾದ ಛಿಜರ್ಸಿ ಗ್ರಾಮದಲ್ಲಿ ವಾಸವಿದ್ದ ಧನಜಯ್ ಕುಮಾರ್ ಎಂಬುವರು ಪ್ರೇಮ ಸಂಬಂಧ ಹೊಂದಿದ್ದರು ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಅಧಿಕಾರಿ ಹೇಳಿದರು.
ಅವರು ಸುಮಾರು ಒಂದು ವರ್ಷದಿಂದ ಸಂಬಂಧದಲ್ಲಿದ್ದರು. ಆದರೆ ಬುಧವಾರ, ಧನಂಜಯ್ ಅವರನ್ನು ಭೆಟಿಯಾಗಲು ನಿಶಾ ಅವರ ನಿವಾಸಕ್ಕೆ ಬಂದಿದ್ದರು. ಯಾವುದೋ ವಿಷಯದ ಬಗ್ಗೆ ಅವರ ನಡುವೆ ಜಗಳ ಉಂಟಾಯಿತು. ಅಲ್ಲಿ ಧನಂಜಯ್ ನಿಶಾಳನ್ನು ಕತ್ತು ಹಿಸುಕಿ ಸಾಯಿಸಿದನು ಎಂದು ಕಥೇರಿಯಾ ಹೇಳಿದರು.