Advertisement

ನೋಯ್ಡಾ, ಗ್ರೇಟರ್ ನೋಯ್ಡಾ ದೇಶದಲ್ಲಿಯೇ ಅತೀ ಹೆಚ್ಚು ಮಾಲಿನ್ಯ ನಗರ

12:32 PM Dec 28, 2020 | Nagendra Trasi |

ನವದೆಹಲಿ:ಉತ್ತರಪ್ರದೇಶದ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ದೇಶದಲ್ಲಿಯೇ ಅತೀ ಹೆಚ್ಚು ಮಾಲಿನ್ಯಗೊಂಡಿರುವ ನಗರಗಳಾಗಿರುವುದಾಗಿ ವರದಿ ತಿಳಿಸಿದೆ. ವಾಯು ಗುಣಮಟ್ಟದ ಸೂಚ್ಯಂಕದಂತೆ ನೋಯ್ಡಾ 405 ಹಾಗೂ ಗ್ರೇಟರ್ ನೋಯ್ಡಾ 418 ಎಕ್ಯೂಐಗೆ ತಲುಪಿರುವುದಾಗಿ ತಿಳಿಸಿದೆ.

Advertisement

ಗ್ರೇಟರ್ ನೋಯ್ಡಾ ದೇಶದ ಅತೀ ಹೆಚ್ಚು ಮಾಲಿನ್ಯ ನಗರವಾಗಿದ್ದು, ಗಾಜಿಯಾಬಾದ್ ಎರಡನೇ ಹಾಗೂ ಫರೀದಾಬಾದ್ ಮೂರನೇ ಸ್ಥಾನ ಪಡೆದಿದೆ. ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆಗೊಳಿಸಿದ ವಾಯುಗುಣ ಮಟ್ಟದ ಸೂಚ್ಯಂಕದ ಬುಲೆಟಿನ್ ಪ್ರಕಾರ, ಗಾಜಿಯಾಬಾದ್ ಎಕ್ಯೂಐ 407, ಗ್ರೇಟರ್ ನೋಯ್ಡಾ 418, ನೋಯ್ಡಾ 405 , ಫರಿದಾಬಾದ್ 404 ಹಾಗೂ ಗುರ್ಗಾಂವ್ 359 ಎಕ್ಯೂಐ ಮಟ್ಟಕ್ಕೆ ತಲುಪಿದೆ ಎಂದು ವಿವರಿಸಿದೆ.

ಸಿಪಿಸಿಬಿ ವರದಿ ಪ್ರಕಾರ, ದೇಶದ 108 ನಗರಗಳ ಪೈಕಿ, ಗಾಜಿಯಾಬಾದ್, ನೋಯ್ಡಾ, ಗ್ರೇಟರ್ ನೋಯ್ಡಾ, ಬುಲಂದ್ ಶಹರ್ ಮತ್ತು ಕಾನ್ಪುರ್ ಸೇರಿದಂತೆ ಕೇವಲ ಐದು ನಗರಗಳು ಮಾತ್ರ ಅತೀ ಹೆಚ್ಚು ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಸೇರಿರುವುದಾಗಿ ಹೇಳಿದೆ.

ಇದನ್ನೂ ಓದಿ:ಐಪಿಎಲ್‌: 10 ತಂಡಗಳ ಲೆಕ್ಕಾಚಾರ ಹೇಗಿದ್ದೀತು? ತಂಡಗಳು ಯಾರ ಪಾಲಿಗೆ?

Advertisement

Udayavani is now on Telegram. Click here to join our channel and stay updated with the latest news.

Next