Advertisement

Noida; ಕಾರ್‌ ಪಾರ್ಕಿಂಗ್‌ ವಿಚಾರಕ್ಕೆ ಎರಡು ಕುಟುಂಬಗಳ ಗಲಾಟೆ; 6 ಜನರ ಬಂಧನ

08:06 PM Aug 27, 2024 | Team Udayavani |

ನೋಯ್ಡಾ: ಪಾರ್ಕಿಂಗ್‌ ವಿಚಾರಕ್ಕೆ ನೆರೆಹೊರೆಯ ಎರಡು ಮನೆಯವರು ಹೊಡೆದಾಡಿಕೊಂಡ ಘಟನೆ ನೋಯ್ಡಾದ ಸೆಕ್ಟರ್‌ 72ರಲ್ಲಿ ನಡೆದಿದೆ. ಮಾತಿನ ಚಕಮಕಿಯು ಬೆಳೆದು ಹಿಂಸಾತ್ಮಕ ರೂಪ ತಾಳಿ ವಾಹನದ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಸೋಮವಾರ (ಆ.26) ಸಂಜೆ ಈ ಘಟನೆ ನಡೆದಿದ್ದು, ಇಬ್ಬರು ಮಹಿಳೆಯರು ಸೇರಿ ಆರು ಮಂದಿ ಪೊಲೀಸರ ಅತಿಥಿಯಾಗಿದ್ದಾರೆ.

ಎರಡು ಪಾರ್ಟಿಗಳ ನಡುವೆ ಪಾರ್ಕಿಂಗ್ ಜಾಗದ ಬಗ್ಗೆ ವಾದದಿಂದ ಗಲಾಟೆ ಪ್ರಾರಂಭವಾಗಿದೆ. ಇವರ ಗಲಾಟೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಒಂದು ಗುಂಪು ಕ್ರಿಕೆಟ್ ಬ್ಯಾಟ್‌ ಗಳು ಮತ್ತು ಕೋಲುಗಳನ್ನು ಹಿಡಿದು ಅಲ್ಲಿ ನಿಲ್ಲಿಸಿದ್ದ ಕೆಂಪು ಕಾರಿನ ಗಾಜುಗಳು ಮತ್ತು ಬಾಗಿಲುಗಳನ್ನು ಒಡೆದು ಹಾಕಿದೆ.

ಎರಡು ಗುಂಪಿನ ಮಹಿಳೆಯರು ಜೋರಾಗಿ ಗಲಾಟೆ ಮಾಡುತ್ತಿರುವುದನ್ನೂ ವಿಡಿಯೋದಲ್ಲಿ ಕಾಣಬಹುದು. ಘಟನೆಯ ಬಳಿಕ ಸೆಕ್ಟರ್‌ 113 ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಆ ಬಳಿಕ ಅಧಿಕಾರಿಗಳು ಗಲಾಟೆಯಲ್ಲಿ ಭಾಗಿಯಾಗಿರುವ ಎರಡೂ ಕಡೆಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next