Advertisement

Manipal; ಅಪಾರ್ಟ್ ಮೆಂಟ್ ನಲ್ಲಿ ವಿದ್ಯಾರ್ಥಿಗಳ ಲ್ಯಾಪ್‌ ಟಾಪ್‌ ಕದ್ದ ಇಬ್ಬರ ಬಂಧನ

06:16 PM Sep 02, 2024 | Team Udayavani |

ಉಡುಪಿ: ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಹಾಗೂ ಇತರ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪದ ಮೇಲೆ ಮಣಿಪಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿಗಳನ್ನು ತಮಿಳುನಾಡಿನ ತಿರುಪತ್ತೂರು ನಿವಾಸಿ ಬಾಲನ್ (34) ಮತ್ತು ಆಂಧ್ರಪ್ರದೇಶದ ಚಿತ್ತೂರು ನಿವಾಸಿ ಕಾರ್ತಿಕ್ (28) ಎಂದು ಗುರುತಿಸಲಾಗಿದೆ.

ಆಗಸ್ಟ್ 31 ರಂದು ಮಣಿಪಾಲ ಠಾಣಾ ವ್ಯಾಪ್ತಿಯ ವಿದ್ಯಾರತ್ನ ನಗರದಲ್ಲಿ ಇರುವ ಪ್ರಿನ್ಸೆಸ್ ಕೀರ್ತಿ ಅಪಾರ್ಟ್‌ ಮೆಂಟ್ ನಲ್ಲಿ ವಾಸವಿರುವ ಆಕಾಶ್ ಸಿ ಸೂರ್ಯ ವಂಶಿ ಎಂಬವರ ಕೊಠಡಿಯಲ್ಲಿ ಸುಮಾರು 4,00,000 ರೂ ಮೌಲ್ಯದ ಎರಡು ಲ್ಯಾಪ್ ಟಾಪ್ ಮತ್ತು ಒಂದು ಆಪಲ್ ಕಂಪನಿಯ ಐಪಾಡ್ ಕಳ್ಳತನವಾಗಿದ್ದು, ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಪತ್ತೆಗಾಗಿ ಮಣಿಪಾಲ ಪಿ.ಐ ಟಿ.ವಿ ದೇವರಾಜ್ ನೇತ್ರತ್ವದಲ್ಲಿ ಪಿ,ಎಸ್,ಐ ರಾಘವೇಂದ್ರ, ಪಿ,ಎಸ್,ಐ ಅಕ್ಷಯ ಕುಮಾರಿ, ಎ.ಎಸ್.ಐ ವಿವೇಕಾನಂದ , ಹೆಚ್.ಸಿ, ಇಮ್ರಾನ್, ಹೆಚ್.ಸಿ ಸುಕುಮಾರ್ ಶೆಟ್ಟಿ ಹಾಗೂ ಪಿ.ಸಿ ರಘು ನೇತ್ರತ್ವದ ತಂಡವನ್ನು ರಚಿಸಲಾಗಿತ್ತು. ಈ ತಂಡವು ಸಪ್ಟೆಂಬರ್ 2 ರಂದು ಕಳ್ಳತನ ಪ್ರಕರಣದ ಆರೋಪಿಗಳಾದ ಪಿ ಕಾರ್ತಿಕ್ ಮತ್ತು ಬಾಲನ್ ಗೋವಿಥಾನ್ ಇವರನ್ನು ಉಡುಪಿ ಜಿಲ್ಲೆಯ ಕಟಪಾಡಿ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡು, ಆರೋಪಿಗಳಿಂದ ವಸ್ತುಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿದ್ದಾರೆ.

ಮಣಿಪಾಲ ನಗರದಲ್ಲಿ ಅನೇಕ ಅಪಾರ್ಟಮೆಂಟ್ ಗಳು ಇದ್ದು, ಬಹುತೇಕ ವಿದ್ಯಾರ್ಥಿಗಳು ಅಪಾರ್ಟಮೆಂಟ್ ನಲ್ಲಿ ವಾಸವಿದ್ದು, ವಿದ್ಯಾರ್ಥಿಗಳು ಅವರು ಬಳಸುವ ಬೆಲೆಬಾಳುವ ಎಲೆಕ್ಟ್ರಾನಿಕ್ ಸಾಧನಗಳಾದ ಲ್ಯಾಪ್ ಟಾಪ್, ಮೊಬೈಲ್, ಐಪಾಡ್ ಗಳನ್ನು ರೂಮ್ ನಲ್ಲಿ ಇಟ್ಟು ಬಾಗಿಲು ಹಾಕದೆ ನಿರ್ಲಕ್ಷ ವಹಿಸುತ್ತಿದ್ದು ಆರೋಪಿಗಳು ಇದನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದಾರೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಜಾಗರೂಕತೆಯಿಂದ ಇರಬೇಕೆಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next