Advertisement

ಐಸಿಸ್‌ ಕ್ರೌರ್ಯದ ಸಾಕ್ಷಿಗೆ ಶಾಂತಿಯ ಉಡುಗೊರೆ

06:00 AM Oct 08, 2018 | |

“ಇಂಥದ್ದೊಂದು ದುರಂತ ಕಥೆಗೆ ಸಾಕ್ಷಿಯಾದ ಜಗತ್ತಿನ ಕೊನೆಯ ಹುಡುಗಿ ನಾನಾಗಿರಲಿ…’
 26ನೆಯ ವಯಸ್ಸಿಗೇ ಪ್ರತಿಷ್ಠಿತ ನೊಬೆಲ್‌ ಶಾಂತಿ ಪ್ರಶಸ್ತಿಗೆ ಭಾಜನಳಾದ ಇರಾಕ್‌ನ ಯಾಜಿದಿ ಸಮುದಾಯದ ಯುವತಿ, “ದಿ ಲಾಸ್ಟ್‌ ಗರ್ಲ್’ ಕೃತಿಯ ಕರ್ತೃ ನಾದಿಯಾ ಮುರಾದ್‌ ಆಡುವ ಮಾತಿದು. ಐಸಿಸ್‌ ಕ್ರೌರ್ಯಕ್ಕೆ ಅಂತಾರಾಷ್ಟ್ರೀಯ ಸಾಕ್ಷಿಯಾಗಿ ನಿಲ್ಲುವ ನಾದಿಯಾ, “ಉಗ್ರ’ ಮನಸ್ಸುಗಳ ಚಿತ್ರಹಿಂಸೆಯನ್ನು ಕಂಡ ಯಾಜಿದಿ ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ಕಾಣುತ್ತಾಳೆ. ರಕ್ತಪಿಪಾಸುಗಳ ಅಟ್ಟಹಾಸದಿಂದ ನೊಂದು ಬೆಂದರೂ ಧೃತಿಗೆಡದೆ, ಲೈಂಗಿಕ ದೌರ್ಜನ್ಯವನ್ನು ಯುದ್ಧದ ಅಸ್ತ್ರವನ್ನಾಗಿ ಬಳಸುವುದರ ವಿರುದ್ಧ ಹೋರಾಡುತ್ತಿರುವ ದಿಟ್ಟೆ ಈಕೆ.

Advertisement

ಉಗ್ರರ ಗುಂಡಿಗೆ ಎದೆಯೊಡ್ಡಿದ್ದ ಪಾಕಿಸಾಾ¤ನದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್ಝಾಯ್‌ ಬಳಿಕ ಅಂಥದ್ದೇ ಮತ್ತೂಂದು ದುರಂತವನ್ನು ಎದುರುಗೊಂಡು, ಯಶ ಸಾಧಿಸಿರುವ ಇರಾಕ್‌ನ ನಾದಿಯಾ ಮುರಾದ್‌ ಹಾಗೂ ಯುದ್ಧ-ದ್ವೇಷಗಳ ನೆರಳಿನಲ್ಲಿ ನಡೆಯುವ ಮಹಿಳಾ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿರುವ ಕಾಂಗೋ ಗಣರಾಜ್ಯದ ವೈದ್ಯ ಡಾ. ಡೆನಿಸ್‌ ಮುಕೆೆÌಜ್‌ ಅವರಿಗೆ ಈ ಬಾರಿಯ ಶಾಂತಿ ನೊಬೆಲ್‌ ಸಂದಿರುವುದು ಪ್ರಶಸ್ತಿಯ ತೂಕವನ್ನು ಹೆಚ್ಚಿಸಿದೆ. ಮಾತ್ರವಲ್ಲ, ಭಯೋತ್ಪಾದನೆಯ ವಿರುದ್ಧ ಧ್ವನಿಯೆತ್ತಿರುವ ಎಲ್ಲರಿಗೂ ಸಂದ ಗೌರವ ಇದಾಗಿದೆ.

ಯಾವುದೇ ಯುದ್ಧವಿರಲಿ, ಸಂಘರ್ಷವಿರಲಿ, ಅದರ ಮೊದಲ ಬಲಿಪಶು ಹೆಣ್ಣೇ ಆಗಿರುತ್ತಾಳೆ. ಅಂಥದ್ದೊಂದು ಬಾಹ್ಯ ಹಾಗೂ ಅಂತರ್ಯದ ಯುದ್ಧದ ಕರಾಳತೆಯನ್ನು ಕಂಡವಳೇ ನಾದಿಯಾ.

ಈಕೆ ಇರಾಕ್‌ನ ಪುಟ್ಟ ಗ್ರಾಮ ಕೋಚೋದ ಅಲ್ಪಸಂಖ್ಯಾತ ಸಮುದಾಯವಾದ ಯಾಜಿದಿಯ ಬಡ ಕುಟುಂಬದಲ್ಲಿ ಹುಟ್ಟಿದ ಹೆಣ್ಣುಮಗಳು. ಐಸಿಸ್‌ ಎಂಬ ಮತಾಂಧರ ಗುಂಪು ಕೋಚೋಗೆ ಕಾಲಿಡುವವರೆಗೆ ಎಲ್ಲವೂ ಚೆನ್ನಾಗಿತ್ತು. ಎಲ್ಲರಂತೆ ಆಟ-ಪಾಠಗಳಲ್ಲಿ ತೊಡಗಿಕೊಂಡಿದ್ದ ನಾದಿಯಾ ಭವಿಷ್ಯದ ಬಗೆ ಸಾವಿರ ಕನಸುಗಳನ್ನು ಹೆಣೆದಿದ್ದಳು. ಬೆಳೆದು ದೊಡ್ಡವಳಾಗಿ ಶಾಲಾ ಶಿಕ್ಷಕಿಯಾಗಬೇಕು ಅಥವಾ ಬ್ಯೂಟಿ ಸೆಲೂನ್‌ ಇಡಬೇಕು ಎಂಬುದು ಅವಳ ಆಸೆಯಾಗಿತ್ತು. ಆಗ ಆಕೆಗೆ 21ರ ಹರೆಯ. ಗೆಳತಿಯರೊಂದಿಗೆ ಸೇರಿ ಮೇಕಪ್‌, ಹೇರ್‌ಸ್ಟೈಲ್‌ ಎಂದು ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದಳು.

ಅದೊಂದು ದಿನ, ಅವಳ ಆ ಸುಂದರ ಲೋಕಕೆೆR ರಾಕ್ಷಸರ ಪ್ರವೇಶವಾಯಿತು. ಅದು ಆಗಸ್ಟ್‌ 2014. ಕರಾಳತೆಯೇ ಮೈದಳೆದಂತೆ ಕಾಣುವ ಕಪುು³ ಧ್ವಜವನ್ನು ಹೊತ್ತಿದ್ದ ಟ್ರಕ್‌ಗಳು ಗ್ರಾಮದತ್ತ ತೂರಿಬಂದವು. ಏಕಾಏಕಿ ಕೋಚೋ ಮೇಲೆ ದಾಳಿ ನಡೆಸಿದ ಬಂಡುಕೋರರು, ಪುರುಷರು, ಮಹಿಳೆಯರು, ಮಕ್ಕಳು ಎಂಬುದನ್ನು ನೋಡದೇ ಸಿಕ್ಕಸಿಕ್ಕವರ ಮೇಲೆ ಗುಂಡಿನ ಮಳೆಗೆರೆಯುತ್ತಾ ಸಾಗಿದರು. ಹದಿಹರೆಯದ ಸಾವಿರಾರು ಹೆಣ್ಣುಮಕ್ಕಳನ್ನು ಬಲವಂತವಾಗಿ ಟ್ರಕ್‌ನೊಳಕ್ಕೆ ತುಂಬಿದರು. ಆ ಕರಾಳ ಕೂಪದೊಳಕೆೆR ತಳ್ಳಲ್ಪಟ್ಟ ಯಾಜಿದಿ ಹೆಣ್ಣುಮಕ್ಕಳಲ್ಲಿ ನಾದಿಯಾ ಕೂಡ ಒಬ್ಬಳು. ಅಲ್ಲಿಗೆ ಅವಳ ಜಗತ್ತು, ಅವಳ ಕುಟುಂಬ ಹಾಗೂ ಅವಳ ಕನಸುಗಳು ಛಿದ್ರ ಛಿದ್ರವಾದವು.

Advertisement

ಅಂದು ತನ್ನೂರು ಕೋಚೋವನ್ನು ಕೊನೆಯದಾಗಿ ಕಂಡಳು ನಾದಿಯಾ. ಎಲ್ಲೆಲ್ಲೂ ಶವಗಳ ರಾಶಿ, ನೆತ್ತರ ಹೊಳೆ, ಅರಚಾಟ, ಕಿರುಚಾಟ, ಆಕ್ರಂದನ, ಅಸಹಾಯಕ ಕಣ್ಣೀರು… ಟ್ರಕ್‌ ಮುಂದೆ ಮುಂದೆ ಸಾಗಿದಂತೆ ತಾನು ಆಡಿ ನಲಿದಿದ್ದ ಗ್ರಾಮ ಕಣ್ಣಿಂದ ಮರೆಯಾಗುತಾಾ¤ ಸಾಗಿತು. ತದನಂತರದ 3 ತಿಂಗಳು ಅಕ್ಷರಶಃ ನರಕ…

ಮೊದಲು ಕೇಳಿದ ಆ ಪದ: ಆ ಟ್ರಕ್‌ ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ಸ್ವಘೋಷಿತ ಕ್ಯಾಲಿಫೇಟ್‌ನ ರಾಜಧಾನಿ ಮೊಸೂಲ್‌ ತಲುಪಿತು. ಬಂದೂಕುಧಾರಿ ವ್ಯಕ್ತಿಯೊಬ್ಬ ಬಂದು, “ನೀವಿಲ್ಲಿ “ಸಬಾಯಾ’ಗಳಾಗಿ ಬಂದಿದ್ದೀರಿ. ನಾವೇನು ಹೇಳುತ್ತೇವೆಯೋ ಅದನ್ನು ಮಾಡಬೇಕು ಅಷೆೆr’ ಎಂದ. ಅಲ್ಲಿಯವರೆಗೂ ಆ ಯುವತಿಯರಿಗೆ “ಸಬಾಯಾ’ ಎಂದರೆ ಏನೆಂದೇ ಗೊತ್ತಿರಲಿಲ್ಲ. ಅಂದು ಗೊತ್ತಾಯ್ತು- ಸಬಾಯಾ ಎಂದರೆ “ಲೈಂಗಿಕ ಗುಲಾಮರು’ ಎಂದು.

ಇಲ್ಲಿಂದ ಮುಂದೆ ನಡೆದ ಘಟನೆಗಳನ್ನು ನಾದಿಯಾಳ ಮಾತಿನಲ್ಲೇ ಕೇಳ್ಳೋಣ: ಮಾಳಿಗೆಯೊಂದರಲ್ಲಿ ನಮ್ಮನ್ನು ಕೂಡಿಹಾಕಿಡಲಾಗಿತ್ತು. ಅಲ್ಲಿ ಸೂರ್ಯ ಮುಳುಗುತ್ತಿದ್ದಂತೆ “ಸ್ಲೇವ್‌ ಮಾರ್ಕೆಟ್‌'(ಲೈಂಗಿಕ ಗುಲಾಮಗಿರಿಯ ಮಾರುಕಟ್ಟೆ) ಆರಂಭವಾಗುತ್ತದೆ. ಕೆಳಗೆ ಜನಸಂದಣಿ, ನೋಂದಣಿ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ಅಲ್ಲಿ ಉಗ್ರರ ಧ್ವನಿಗಳು ನಮ್ಮ ಕಿವಿಗಳಲ್ಲಿ ಅನುರಣಿಸುತ್ತಿತ್ತು. ಮೊದಲಿಗೆ ಒಬ್ಬ ನಮ್ಮ ಕೋಣೆಯನ್ನು ಪ್ರವೇಶಿಸಿದ. ಅಷ್ಟರಲ್ಲಿ ನಾವೆಲ್ಲರೂ ಕಿಟಾರನೆ ಕಿರುಚಿದೆವು. ಅದು ಬಾಂಬ್‌ ಸ್ಫೋಟಗೊಂಡಾಗ ಕೇಳುವ ಶಬ್ದದಂತಿತ್ತು. ಆದರೆ, ಅದ್ಯಾವುದಕ್ಕೂ ಆತ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ಅವನ ನಂತರ ಮತೆೆ¤ ಕೆಲವರ ಪ್ರವೇಶವಾಯಿತು. ಅವರು ಹಸಿದ ತೋಳಗಳಂತೆ ನಮ್ನನ್ನು ದುರುಗುಟ್ಟಿ ನೋಡುತಾಾ¤ ಕೋಣೆಯೊಳಗೆ ನುಗ್ಗಿದರು. ನಮ್ಮ ಕಿರುಚಾಟ, ಅಳು ಮುಂದುವರಿದಿತ್ತು. ನೋಡಲು ಸುಂದರವಾಗಿರುವ ಹುಡುಗಿಯರ ಬಳಿ ಮೊದಲು ಬಂದು “ನಿನಗೆ ವಯಸೆೆÕಷ್ಟು’ ಎಂದು ಕೇಳುತ್ತಿದ್ದªರು. ನಂತರ, “ಇವರೆಲ್ಲರೂ ಕನೆೆಯರು ಹೌದಲ್ಲವೇ’ ಎಂದು ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದರು. ಆತ ಮುಗುಳ್ನಕ್ಕು ವ್ಯಾಪಾರಿಯೊಬ್ಬ ತನ್ನ ಸರಕನ್ನು ಹೊಗಳುವಂತೆ “ಖಂಡಿತಾ’ ಎಂದು ಉತ್ತರಿಸುತ್ತಿದ್ದ. ನಂತರ ಆ ಉಗ್ರರು ನಮ್ಮ ದೇಹಗಳನ್ನು ತಮಗಿಷ್ಟ ಬಂದಂತೆ ಸ್ಪರ್ಶಿಸತೊಡಗಿದರು. ಅವರು ಗಡಸು ಕೈಗಳು ನಮ್ಮ ಕತ್ತು, ಎದೆಯ ಭಾಗ, ತೊಡೆಗಳು… ಹೀಗೆ ಎಲ್ಲೆಂದರಲ್ಲಿ ಚಲಿಸತೊಡಗಿತು. ನಾವು ಅಸಹನೆಯಿಂದ ಕಣ್ಣೀರು ಸುರಿಸುತ್ತಿ¨ªೆವು. ಕೆಲವರು, “ನಮ್ಮನ್ನು ಬಿಟ್ಟುಬಿಡಿ’ ಎಂದು ಗೋಗರೆಯುತ್ತಿದ್ದªರೆ, ಇನ್ನು ಕೆಲವರು ದೇಹವನ್ನು ಯಾರೂ ಮುಟ್ಟಬಾರದೆಂದು ಎಷ್ಟು ಸಾಧ್ಯವೋ ಅಷ್ಟು ಮುದುಡಿ ಮುದುಡಿ ಸೋಲುತ್ತಿದ್ದರು. “ಬಾಯಿ ಮುಚ್ಚಿ’ ಎಂದು ಅವರು ಗದರಿಸಿದಾಗ ನಮ್ಮ ಅಳು ಇನ್ನಷ್ಟು ಜೋರಾಗುತ್ತಿತ್ತು. ಅಷ್ಟರಲ್ಲಿ ಒಬ್ಬ ಆಜಾನುಬಾಹು ನಮ್ಮ ಮುಂದೆ ಬಂದು ನಿಂತುಕೊಂಡ. ಅವನ ಹೆಸರು ಸಲ್ವಾನ್‌. ಉಗ್ರಗಾಮಿಗಳ ಉನ್ನತ ಮಟ್ಟದ ನಾಯಕ. ಮತ್ತೂಬ್ಬ ಯಾಜಿದಿ ಹುಡುಗಿಯನ್ನು ತನಗೆ ಬೇಕಾದಂತೆ ಬಳಸಿಕೊಂಡು, ಅವಳನ್ನು ವಾಪಸ್‌ ಇಲ್ಲಿಗೆ ಬಿಟ್ಟು, ಇನ್ನೊಬ್ಬಳನ್ನು ಕರೆದೊಯ್ಯಲೆಂದು ಆತ ಬಂದಿದ್ದ. ಮುದುಡಿ ಕುಳಿತಿದ್ದ ನಾನು ತಲೆಬಗ್ಗಿಸಿ ಕುಳಿತಿದ್ದೆ. ಅವನ ಪಾದಗಳಷ್ಟೇ ಕಾಣುತ್ತಿತ್ತು. “ನಿಂತುಕೋ’ ಎಂದ. ನಾನು ನಿಲ್ಲಲಿಲ್ಲ. ಆಕ್ರೋಶಗೊಂಡು ಕಾಲಲ್ಲಿ ಒದ್ದುಬಿಟ್ಟ. “ನೀನೇ, ಗುಲಾಬಿ ಬಣ್ಣದ ಜಾಕೆಟ್‌ ಧರಿಸಿದವಳು, ನಿಂತುಕೊಳ್ಳುತ್ತೀಯೋ ಇಲ್ಲವೋ’ ಎಂದು ಗಟ್ಟಿ ಧ್ವನಿಯಲ್ಲಿ ಗದರಿದ. ನನಗೆ ನಡುಕ ಶುರುವಾಯಿತು. ಕಣ್ಣೆತ್ತಿ ನೋಡಿದೆ- ಆತ ಮನುಷ್ಯನಂತೆ ಕಾಣುತ್ತಿರಲಿಲ್ಲ- ಮೊದಲ ಬಾರಿಗೆ ದೈತ್ಯ ರಾಕ್ಷಸನನ್ನು ನೋಡಿದಂತಾಯಿತು. ಈತನ ಕೈಗೇನಾದರೂ ನಾನು ಸಿಕ್ಕಿದರೆ ನನ್ನನ್ನು ಹೇಳಹೆಸರಿಲ್ಲದಂತೆ ಚಿವುಟಿ ಹಾಕಿಬಿಡುತ್ತಾನೆ ಎಂದು ಅನಿಸಿತು. ಅವನು ಹತ್ತಿರ ನಿಂತಿದ್ದಾಗ ಕೊಳೆತ ಮೊಟ್ಟೆಯಂತೆ ವಾಸನೆ ಮೂಗಿಗೆ ಬಡಿಯುತ್ತಿತ್ತು.

ಈತನನ್ನು ಎದುರಿಸಿ ಒಂದು ಕ್ಷಣವೂ ಬದುಕುವುದು ಅಸಾಧ್ಯ ಎಂದು ನನಗೆ ಮನದಟ್ಟಾಯಿತು. ಕೆಂಡದಂತಾದ ಕಣ್ಣುಗಳಿಂದ ಸಲ್ವಾನ್‌ ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದ. ಏನು ಮಾಡಬೇಕೆಂದು ತೋಚದೆ, ಕಣ್ಣುಗಳನ್ನು ಅತ್ತಿತ್ತ ಹೊರಳಿಸತೊಡಗಿದೆ. ಆಗ ನನಗೆ ತೆಳ್ಳಗಿರುವ ವ್ಯಕ್ತಿಯ ಕಾಲೊಂದು ಕಂಡಿತು. ಆ ಕ್ಷಣಕ್ಕೆ ನಾನು ಏನು ಮಾಡುತ್ತಿದ್ದೇನೆ ಎಂದೂ ಯೋಚಿಸದೇ, ಪಟಕ್ಕನೆ ಆ ಕಾಲಿಗೆರಗಿದೆ. “ದಯವಿಟ್ಟು, ನನ್ನನ್ನು ನೀವೇ ಕರೆದುಕೊಂಡು ಹೋಗಿ’ ಎಂದು ಆ ಕಾಲನ್ನು ಹಿಡಿದು ಬೇಡತೊಡಗಿದೆ. “ನಿಮಗೆ ಬೇಕಿದ್ದನ್ನು ಮಾಡಿ, ಆದರೆ ಅವನೊಂದಿಗೆ ಮಾತ್ರ ಕಳುಹಿಸಬೇಡಿ’ ಎಂದು ಗೋಗರೆದೆ. ನನ್ನ ಬೇಡಿಕೆಯನ್ನು ಆ ತೆಳ್ಳಗಿನ ವ್ಯಕ್ತಿ ಯಾಕೆ ಒಪ್ಪಿದ ಎಂದು ಇಂದಿಗೂ ಗೊತ್ತಿಲ್ಲ. ಆತ ಸಲ್ವಾನ್‌ನತ್ತ ತಿರುಗಿ, “ಈಕೆ ನನ್ನವಳು’ ಎಂದ. ನಾನು ಆತನೊಂದಿಗೆ ಹೆಜ್ಜೆಹಾಕಿದೆ. “ನಿನ್ನ ಹೆಸರೇನು’ ಎಂದು ಕೇಳಿದ. ನಾದಿಯಾ ಅಂದೆ. ನೋಂದಣಿ ಮಾಡುವಾತನ ಬಳಿ ನನ್ನನ್ನು ಕರೆದೊಯ್ದ. ಆತನೋ ಪುಸ್ತಕದಲ್ಲಿ ಹೆಸರು ನೋಂದಾಯಿಸಿಕೊಳ್ಳುವಲ್ಲಿ ನಿರತನಾಗಿದ್ದ. ತಲೆಎತ್ತಿಯೂ ನೋಡದೆ, ನನ್ನ ಮತ್ತು ನನ್ನನ್ನು ಖರೀದಿಸಿದಾತನ ಹೆಸರು ಕೇಳಿದ. “ನಾದಿಯಾ, ಹಜ್ಜಿ ಸಲ್ಮಾನ್‌’ ಎಂಬ ಉತ್ತರ ಹೊರಬಂತು. “ಹಜ್ಜಿ ಸಲ್ಮಾನ್‌’ ಎಂಬ ಹೆಸರು ಕೇಳುತ್ತಿದ್ದಂತೆ ನೋಂದಣಿ ಮಾಡುತ್ತಿದ್ದವನ ಮುಖದಲ್ಲಿ ಸಣ್ಣಗೆ ಬೆವರಿಳಿದಿದ್ದು ಕಂಡುಬಂತು. ಆಗ ಗೊತ್ತಾಯಿತು, ನಾನು ಆತನ ಕಾಲಿಗೆರಗಿ ದೊಡ್ಡ ತಪ್ಪೇ ಮಾಡಿದೆ ಎಂದು.’

ಹೌದು, ಸಲ್ವಾನ್‌ನ ದೈತ್ಯ ದೇಹ ಕಂಡು ಹೆದರಿದ್ದ ನಾದಿಯಾ ಕೊನೆಗೂ ಬಿದ್ದಿದ್ದು ಸಲ್ಮಾನ್‌ ಎಂಬ ಗೋಮುಖ ವ್ಯಾಘ್ರದ ಬಲೆಗೆ. ಬರೋಬ್ಬರಿ ಮೂರು ತಿಂಗಳ ಕಾಲ ಸಲ್ಮಾನ್‌ ಎಂಬ ರಾಕ್ಷಸ ಒಂದು ಹೆಣ್ಣಿಗೆ ಯಾವ ರೀತಿಯೆಲ್ಲ ಚಿತ್ರಹಿಂಸೆ ನೀಡಲು ಸಾಧ್ಯವೋ, ಅದನ್ನೆಲ್ಲವನ್ನೂ ನೀಡಿದ. ಎಳ್ಳಷ್ಟೂ ಮಾನವೀಯತೆ ತೋರದೆ, ಆಕೆಯ ಮೇಲೆ ಸತತ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು, ಸಿಗರೇಟ್‌ನಿಂದ ಅಂಗಾಂಗಗಳನ್ನು ಸುಡಲಾಯಿತು, ಹೊಡೆದು, ಬಡಿದು ಚಿತ್ರಹಿಂಸೆ ನೀಡಲಾಯಿತು, ಒಬ್ಬರ ನಂತರ ಒಬ್ಬರಿಗೆ ಮಾರಾಟ ಮಾಡಲಾಯಿತು. ಉಗ್ರರ ಕ್ರೌರ್ಯದಿಂದ ತೀವ್ರವಾಗಿ ಘಾಸಿಗೊಂಡಿದ್ದ ನಾದಿಯಾ, ಇನ್ನು ಈ ಕತ್ತಲಲ್ಲೇ ನನ್ನ ಅಂತ್ಯ ಎಂದು ಭಾವಿಸಿದ್ದಳು. ಆದರೆ, ಅದೊಂದು ದಿನ ಬೆಳಕಿನ ಹಾದಿ ಆಕೆಗಾಗಿ ತೆರೆಯಿತು. ಕಟುಕರ ಕಪಿಮುಷ್ಟಿಯಿಂದ ಹೇಗೋ ತಪ್ಪಿಸಿಕೊಂಡು, ಹೊರಬಂದಳು.

 ಗೊತ್ತೇ ಇಲ್ಲದ ಊರಿನಲ್ಲಿ ತಪ್ಪಿಸಿಕೊಂಡು ಹೋಗುವುದಾದರೂ ಎಲ್ಲಿಗೆ ಎಂದು ಗೊತ್ತಾಗದಾದಾಗ ಸಿಕ್ಕಿದ್ದೇ ಆ ಮನೆ. ಅದ್ಯಾವ ಅದೃಷ್ಟ ಉಳಿದಿತ್ತೋ- ರಾತ್ರೋರಾತ್ರಿ ಹೋಗಿ ನಾದಿಯಾ ಒಂದೇ ಸಮನೆ ಮನೆಯೊಂದರ ಬಾಗಿಲು ಬಡಿದಳು.

ಕಗ್ಗತ್ತಲ ರಾತ್ರಿ… ಉಗ್ರರೇ ಬಂದು ಬಾಗಿಲು ಬಡಿಯುತ್ತಿದ್ದಾರೆ ಎಂದು ಆ ಕುಟುಂಬ ಸದಸ್ಯರು ಭಯಭೀತರಾಗಿ ಮೂಲೆ ಸೇರಿದ್ದರು. ಅಪ್ಪ-ಅಮ್ಮ, ಹೆಂಡತಿ, ಮಗುವಿಗೆ ಧೈರ್ಯ ಹೇಳಿ ಮೆಲ್ಲಗೆ ಬಾಗಿಲು ತೆರೆದಿದ್ದ ಜಬ್ಟಾರ್‌. ಬಾಗಿಲ ಮುಂದೆ ನಾದಿಯಾ ನಿಂತಿದ್ದಳು. “ನನ್ನನ್ನು ರಕ್ಷಿಸಿ, ಅವರು ನನ್ನನ್ನು ಅತ್ಯಾಚಾರ ಮಾಡಿ ಕೊಂದೇ ಬಿಡುತ್ತಾರೆ’ ಎಂದು ನಾದಿಯಾ ಒಂದೇ ಉಸಿರಿಗೆ ಹೇಳಿ ಮುಗಿಸುವ ಮುನ್ನ, ಜಬ್ಟಾರ್‌ ಆಕೆಯನ್ನು ಒಳಕ್ಕೆಳೆದುಕೊಂಡು ಬಾಗಿಲು ಹಾಕಿಕೊಂಡ. ಅಂದೇ ಜಬ್ಟಾರ್‌ ನಾದಿಯಾಗೆ ಆಪ್ತರಕ್ಷಕನಾದ. ಆಕೆಗೆ ನಕಲಿ ಗುರುತಿನ ಚೀಟಿ (ಯಾಜಿದಿ ಎಂದು ಗೊತ್ತಾಗದಂತೆ) ತಯಾರಿಸಿಕೊಟ್ಟು, ಬುರ್ಖಾ ತೊಡಿಸಿ, ತನ್ನ ಪತ್ನಿ ಎಂದು ಸುಳ್ಳು ಹೇಳಿ, ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಆಕೆಯನ್ನು ಮೊಸೂಲ್‌ ದಾಟಿಸಿ, ಇರಾಕ್‌ನ ಕುರ್ದಿಸ್ತಾನಕ್ಕೆ ತಲುಪಿಸಿದ ಜಬ್ಟಾರ್‌. ಮಾನವೀಯತೆಯ ಒರತೆ ಇನ್ನೂ ಇದೆ ಎಂದು ನಾದಿಯಾಗೆ ಅರಿವಾದದ್ದು ಜಬ್ಟಾರ್‌ನನ್ನು ನೋಡಿದ ಮೇಲೆ. 

ಉಗ್ರರ ಅಟ್ಟಹಾಸಕ್ಕೆ ಹೆದರಿ ವಲಸೆ ಹೋದ ಯಾಜಿದಿ ಕುಟುಂಬಗಳು ಕುರ್ದಿಸ್ತಾನದಲ್ಲಿ ನೆಲೆಯೂರಿದ್ದವು. ಅವರನ್ನು ಸೇರಿದ ಬಳಿಕವೇ ನಾದಿಯಾಗೆ ತನ್ನ ತಾಯಿ ಮತ್ತು 6 ಮಂದಿ ಸಹೋದರರನ್ನು ಉಗ್ರರು ಅಂದೇ ಕೊಂದು ಹಾಕಿದ್ದರು ಎಂಬ ವಿಷಯ ಗೊತ್ತಾಗಿದ್ದು. ನಂತರ ಆಕೆ ಸಂಘಟನೆಯೊಂದರ ಸಹಾಯದಿಂದ ಜರ್ಮನಿಯಲ್ಲಿರುವ ತನ್ನ ಸಹೋದರಿಯನ್ನು ಸೇರಿಕೊಂಡಳು.

ಬದುಕಿನಲ್ಲಿ ಕಾಣಬಾರದ್ದನ್ನೆಲ್ಲ ಕಂಡು, ಅನುಭವಿಸಬಾರದ್ದನ್ನೆಲ್ಲ ಚಿಕ್ಕ ವಯಸ್ಸಿನಲ್ಲೇ ಅನುಭವಿಸಿದ ನಾದಿಯಾ, ಅಲ್ಲಿಗೇ ಕುಗ್ಗಿ ಹೋಗಲಿಲ್ಲ. ಮೆದು ಮಾತಿನ, ನಾಚಿಕೆ ಸ್ವಭಾವದ ನಾದಿಯಾ ಜಾಗತಿಕ ಧ್ವನಿಯಾಗಿ ಹೊರಹೊಮ್ಮಿದಳು. ತನ್ನ ಜನರಿಗೆ ನ್ಯಾಯ ಒದಗಿಸುವ,  ಚದುರಿಹೋಗಿರುವ ಯಾಜಿದಿ ಸಮುದಾಯವನ್ನು ಬೆಸೆಯುವ, ಜಿಹಾದಿಗಳು ತನ್ನ ಸಮುದಾಯಕ್ಕೆ ಮಾಡಿದ ಘೋರ ಅನ್ಯಾಯಗಳನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಅಭಿಯಾನ ಆರಂಭಿಸಿದಳು. ಮಾನವ ಕಳ್ಳಸಾಗಣೆಯ ವಿರುದ್ಧ ಜಾಗೃತಿ ಮೂಡಿಸಿದಳು. “ನನ್ನ ಕಥೆಯೇ ನನ್ನಲ್ಲಿರುವ ಅಸ್ತ್ರ’ ಎಂದಳು. 2017ರಲ್ಲಿ ನಾದಿಯಾ ಬರೆದಿರುವ ದಿ ಲಾಸ್ಟ್‌ ಗರ್ಲ್’ ಕೃತಿಯೂ ಬಿಡುಗಡೆಯಾಯಿತು. ಅದೇ ವರ್ಷ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಐಸಿಸ್‌ನ ಕ್ರೌರ್ಯಗಳ ಕುರಿತು ಸಾಕ್ಷ್ಯ ಸಂಗ್ರಹಕೆ ಬದ್ಧ ಎಂದು ಘೋಷಿಸಿತು.

ಈಗ ನಾದಿಯಾಗೆ ನೊಬೆಲ್‌ ಶಾಂತಿ ಪ್ರಶಸ್ತಿ ಬಂದಿದೆ. ಘೋರ ಅನ್ಯಾಯಗಳನ್ನು ಅನುಭವಿಸಿಯೂ ಜೀವನೋತ್ಸಾಹ ಕಳೆದುಕೊಳ್ಳದೇ, ತನ್ನ ಜನಾಂಗಕ್ಕೆ ನ್ಯಾಯ ಕೊಡಿಸುವ ಅಚಲ ಧ್ಯೇಯವಿಟ್ಟುಕೊಂಡ ಈಕೆಗೆ ಈ ಪ್ರಶಸ್ತಿ ಸಲ್ಲದೆ, ಮತ್ಯಾರಿಗೆ ಸಲ್ಲಬೇಕು ಹೇಳಿ.

ಸಂತ್ರಸ್ತೆಯರ ಪಾಲಿನ ಆಶಾಕಿರಣ ಡೆನಿಸ್‌ ಮುಕ್ವೆಜ್‌
ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮತ್ತೂಬ್ಬ ಸಾಧಕನೆಂದರೆ ಕಾಂಗೋ ಗಣರಾಜ್ಯದ ಬಕಾವು ನಗರದ ಸ್ತ್ರೀರೋಗ ತಜ್ಞ ಡೆನಿಸ್‌ ಮುಕ್ವೆಜ್‌. ಅತ್ಯಾಚಾರವನ್ನು ಯುದ್ಧದ ಅಸ್ತ್ರವನ್ನಾಗಿ ಬಳಸುವುದರ ವಿರುದ್ಧ ಧ್ವನಿಯೆತ್ತಿದ್ದಷ್ಟೇ ಅಲ್ಲದೆ, 50 ಸಾವಿರಕ್ಕೂ ಅಧಿಕ ಮಂದಿ ಲೈಂಗಿಕ ಕಿರುಕುಳದ ಸಂತ್ರಸ್ತರಿಗೆ ಶಸ್ತ್ರಚಿಕಿತ್ಸೆ ಮಾಡುವುದರ ಜೊತೆಗೆ, ಅವರನ್ನು ಮಾನಸಿಕ ಆಘಾತದಿಂದ ಹೊರತಂದ ಕೀರ್ತಿ ಇವರದ್ದು. 2 ದಶಕಗಳಿಂದಲೂ ಸಂಘರ್ಷದ ಭೂಮಿಯಾಗಿ ಕುದಿಯು ತ್ತಿರುವ ಕಾಂಗೋ ಗಣರಾಜ್ಯದ ಪೂರ್ವ ಭಾಗದ ಮೇಲೆ, ಹೇರಳ ಚಿನ್ನ ಮತ್ತಿತರ ಅಮೂಲ್ಯ ಖನಿಜ ಸಂಪತ್ತಿಗಾಗಿ ಹಲವು ಬಂಡುಕೋರರ ಗುಂಪು ದಾಳಿ ನಡೆಸುತ್ತಲೇ ಬಂದಿದೆ. ಸಂಘರ್ಷಪೀಡಿತ ಪ್ರದೇಶದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಲೇ ಇದೆ. “ಜಗತ್ತಿನ ಅತ್ಯಾಚಾರ ರಾಜಧಾನಿ’ ಎಂಬ ಕುಖ್ಯಾತಿಗೂ ಡಿಆರ್‌ ಕಾಂಗೋ ಪಾತ್ರವಾಗಿದೆ. ಇಂಥ ಸಂದರ್ಭದಲ್ಲಿ ನೊಂದ ಮಹಿಳೆಯರ ಬೆನ್ನಿಗೆ ನಿಂತವರು ಡೆನಿಸ್‌. ಯುದ್ಧಪೀಡಿತ ಕಾಂಗೋ ಗಣರಾಜ್ಯದಲ್ಲಿ ಮಹಿಳೆಯರು, ಹೆಣ್ಣುಮಕ್ಕಳು, ಶಿಶುಗಳ ಮೇಲೆ ನಡೆಯುತ್ತಿರುವ  ಯುದ್ಧಾಪರಾಧಗಳನ್ನು ಕಣ್ಣಾರೆ ಕಂಡು, 20 ವರ್ಷಗಳಿಂದಲೂ ಅವರ ಸೇವೆ ಮಾಡುತ್ತಿದ್ದಾರೆ. “ಒಂದು ಬಾರಿ ಒಬ್ಬ ಹೆಣ್ಣುಮಗಳನ್ನು ನನ್ನ ಬಳಿ ಕರೆತರಲಾಯಿತು. ಬಂಡುಕೋರರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು ಮಾತ್ರವಲ್ಲ, ಅವಳ ಗುಪ್ತಾಂಗದೊಳಕ್ಕೆ ಬುಲೆಟ್‌ಗಳ ಮಳೆಯನ್ನೇ ಸುರಿಸಿದ್ದರು. ಆ ಘೋರ ದೃಶ್ಯವನ್ನು ನೋಡಿದಂದೇ ನಾನು ಇವರ ಸೇವೆಗೆ ನನ್ನ ಜೀವನ ಮುಡಿಪಾಗಿಡಬೇಕೆಂದು ನಿರ್ಧರಿಸಿದೆ. ನಂತರ ಒಂದು ಟೆಂಟ್‌ ಸ್ಥಾಪಿಸಿ, ಅಲ್ಲೇ ಚಿಕಿತ್ಸೆ ನೀಡಲಾರಂಭಿಸಿದೆ. ಅಂದು ಟೆಂಟ್‌ನಲ್ಲಿ ಶುರುವಾಗಿದ್ದ ಪಾಂಝಿ ಆಸ್ಪತ್ರೆ ಈಗ ದೊಡ್ಡದಾಗಿ ಬೆಳೆದಿದೆ, 350 ವೈದ್ಯರು ಇಲ್ಲಿ ಸೇವೆ ಸಲ್ಲಿಸುತ್ತಿ¨ªಾರೆ. ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಿಗೆ ಶಸ್ತ್ರ ಚಿಕಿತ್ಸೆ ಮಾಡಿ, ಅವರ ದೇಹದ ಮೇಲಾದ ಹಾನಿಯನ್ನಷ್ಟೇ ಅಲ್ಲದೆ, ಮಾನಸಿಕ ಆಘಾತದಿಂದಲೂ ಅವರನ್ನು ಹೊರತರುವ ಕೆಲಸ ಮಾಡುತ್ತಿದ್ದೇವೆ. ಒಂದು ಬಾರಿ ನನ್ನ ಕೊಲೆ ಯತ್ನವೂ ನಡೆದಿತ್ತು. ಆಗ ಈ ದೇಶ ಬಿಟ್ಟು ಹೋಗಿದ್ದೆ. ಆದರೆ, ಸಂತ್ರಸ್ತರು ನನ್ನ ಮೇಲಿಟ್ಟಿರುವ ಪ್ರೀತಿ, ನಂಬಿಕೆ ನನ್ನನ್ನು ಮತ್ತೆ ಇಲ್ಲಿಗೆ ಕರೆಯಿಸಿತು’ ಎನ್ನುತ್ತಾರೆ ಸ್ತ್ರೀಯರ ಪಾಲಿಗೆ ಪವಾಡವೇ ಆಗಿರುವ ಡಾಕ್ಟರ್‌ ಮಿರಾಕಲ್‌ ಖ್ಯಾತಿಯ ಡೆನಿಸ್‌. ವಿಶೇಷ ವೆಂದರೆ, ನೊಬೆಲ್‌ ಶಾಂತಿ ಪುರಸ್ಕಾರ ಸಂದಿರುವ ವಿಷಯ ತಿಳಿಸಲು ಅಕಾಡೆಮಿ ಸದಸ್ಯರು ಕರೆ ಮಾಡಿದಾಗಲೂ, ಡಾಕ್ಟರ್‌ ಡೆನಿಸ್‌ ಹೆಣ್ಣುಮಗಳೊಬ್ಬಳ ಶಸ್ತ್ರಚಿಕಿತ್ಸೆಯಲ್ಲಿ ನಿರತರಾಗಿದ್ದರಂತೆ.

ಹಲೀಮತ್‌ ಸಅದಿಯಾ

Advertisement

Udayavani is now on Telegram. Click here to join our channel and stay updated with the latest news.

Next