Advertisement

ಕೊಡಗಹಳ್ಳಿಯಲ್ಲಿ ಆತಂಕ ಬೇಡ

05:07 AM May 09, 2020 | Suhan S |

ಮೇಲುಕೋಟೆ: ಕೋವಿಡ್ 19 ಸೋಂಕಿ ನಿಂದ ನಿರ್ಬಂಧಿತ ವಲಯವಾಗಿರುವ ಬಿ.ಕೊಡಗಹಳ್ಳಿ ಜನರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ಪುಟ್ಟರಾಜು ಹೇಳಿದರು.

Advertisement

ಹೋಬಳಿಯ ಬಿ.ಕೊಡಗಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ತರಕಾರಿ ಕಿಟ್‌ ವಿತರಿಸಿ ಮಾತನಾಡಿ, ಪಾಂಡವಪುರ ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕಿ ಸೌಮ್ಯ ಮತ್ತು ಸಿಬ್ಬಂದಿ 10 ತರಕಾರಿಗಳ 13 ಕೆ.ಜಿಯುಳ್ಳ ಕಿಟ್‌ನ್ನು ಕೊಡಗಳ್ಳಿಯ 70 ಕುಟುಂಬಳಿಗೂ ಸ್ವಂತ ಖರ್ಚಿನಿಂದ ನೀಡಿದ್ದಾರೆ. ಪ್ರತಿಮನೆ ಬಾಗಿಲಿಗೂ ತರಕಾರಿ ಕಿಟ್‌ ವಿತರಣೆ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಸಹಕಾರ ನೀಡುತ್ತಿರುವ ಇಸ್ಕಾನ್‌ ಆಹಾರ ಧಾನ್ಯಗಳ ಕಿಟ್‌ ನೀಡಿದೆ ಎಂದು ಹೇಳಿದರು.

ತಾಲೂಕಿನಲ್ಲಿ ಕೋವಿಡ್ 19 ತೊಂದರೆಯಿಲ್ಲ. ಆದರೆ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಿದೆ. ವೈರಸ್‌ ನಿಯಂತ್ರಣಕ್ಕೆ ಗ್ರಾಮಸ್ಥರು ಸ್ವಲ್ಪ ದಿನಗಳ ಮಟ್ಟಿಗೆ ತಾಳ್ಮೆ ವಹಿಸಿದರೆ ಎಂದಿನಂತೆ ಜೀವನ ಸಾಗಿಸಬಹುದು.ಗ್ರಾಮದ ಶಾಲಾ ಆವರಣದಲ್ಲಿ ತೆರೆದ ಕೋವಿಡ್‌ ಟೆಸ್ಟ್‌ ಬೂತ್‌ಗೆ ಪ್ರತಿಯೊಬ್ಬರೂ ಆಗಮಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ಮನ್‌ಮುಲ್‌ ನಿರ್ದೇಶಕ ರಾಮಚಂದ್ರು, ಉಪವಿಭಾಗಾಧಿಕಾರಿ ಶೈಲಜಾ, ತಾಪಂ ಇಒ ಮಹೇಶ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next