Advertisement
ಕೃಷಿ ಪ್ರಧಾನವಾಗಿರುವ ಜಿಲ್ಲೆಯ ರೈತರು ದನಕರು ಗಳನ್ನು ಕಟ್ಟಿಕೊಂಡು ಕೃಷಿ ಚಟುವಟಿಕೆ ಈ ಹಿಂದಿ ನಿಂದಲೂ ಮಾಡಿಕೊಂಡು ಬರುತ್ತಿದ್ದು, ಇತ್ತೀಚಿನ ವೈಜ್ಞಾನಿಕತೆ ಬೆಳೆದಂತೆ ಹೆಚ್ಚು ಕೃಷಿ ಕೆಲಸದಲ್ಲಿ ತೊಡಗುತ್ತಿದ್ದ ಸ್ವದೇಶಿ ತಳಿಗಳಾದ ಅಮೃತ್ ಮಹಲ್, ಹಳ್ಳಿಕಾರ್ ತಳಿಗಳನ್ನು ಸಾಕಲಾರದೆ ದಿನೇ ದಿನೆ ಮಾರಾಟ ಮಾಡುತ್ತಿದ್ದಾರೆ. ಅಳಿದುಳಿದು ಇರುವ ದನಕರುಗಳನ್ನು ಉಳಿಸಿಕೊಂಡರೆ ಸಾಕಪ್ಪಾ ಎನ್ನುವುದು ರೈತರ ಮನದಾಳದ ಮಾತಾಗಿದೆ.
Related Articles
Advertisement
ಜಾನುವಾರಿಗೆ ಮೇವಿನ ಭೀಕರತೆ ಹೆಚ್ಚಲಿದೆ: ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಈ ವರ್ಷ ಮಳೆ ಇಲ್ಲದೇ ಯಾವ ರೈತರು ಬಣವೆಗಳನ್ನು ಒಟ್ಟಿ ಹುಲ್ಲು ಶೇಖರಣೆ ಮಾಡಿಕೊಂಡಿಲ್ಲ. ಅಲ್ಲಲ್ಲಿ ಅಲ್ಪ, ಸ್ವಲ್ಪ ಇದ್ದ ಮೇವನ್ನು ಮಾರ್ಚ್‌ವರೆಗೆ ಕೆಲ ತಾಲೂಕುಗಳಲ್ಲಿ ರೈತರು ಜಾನುವಾರುಗಳ ನಿಗಾ ವಹಿಸುವರು. ಆದರೆ, ಮೇ ಅಂತ್ಯಕ್ಕೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ಇನ್ನೂ ತೀವ್ರಗೊಳ್ಳಲಿದೆ. ಇಲಾಖೆ ಅಧಿಕಾರಿಗಳು ಹೇಳುವಂತೆ ಇನ್ನು 11 ವಾರಗಳು ಅಲ್ಲಲ್ಲಿ ಮೇವು ಲಭ್ಯವಾಗಲಿದೆ ಎನ್ನುತ್ತಾರೆ. 264519 ಟನ್ ಒಣ ಮೇವು ಇದೆ, 586771 ಟನ್ ಹಸಿ ಮೇವು ಉತ್ಪಾದನೆಯಾಗುತ್ತದೆ ಎಂದು ಹೇಳುತ್ತಾರೆ.
ಜಿಲ್ಲೆಯ ಮಧುಗಿರಿ, ಕೊರಟಗೆರೆ, ಪಾವಗಡ, ಚಿಕ್ಕನಾಯಕನಹಳ್ಳಿ, ಸಿರಾ ಮತ್ತು ತಿಪಟೂರು ತಾಲೂಕುಗಳಲ್ಲಿ 21 ಮೇವು ಬ್ಯಾಂಕ್‌ಗಳನ್ನು ತೆರೆಯ ಲಾಗಿದೆ. ಇನ್ನು 8 ಮೇವು ಬ್ಯಾಂಕ್ ತೆರೆಯಲು ಸ್ಥಳ ಗುರುತಿಸಲಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರನ ವ್ಯವಸ್ಥೆಗಾಗಿ ಜನವಸತಿ ಪ್ರದೇಶದಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ.
13 ಲಕ್ಷ ಕುರಿ ಮೇಕೆಗಳು ಮೇವಿಗಾಗಿ ಪರದಾಟ: ರಾಜ್ಯದಲ್ಲಿಯೇ ಅತಿ ಹೆಚ್ಚು ಕುರಿಸಾಕಾಣಿಕೆ ಹೆಸರಾಗಿ ರುವ ತುಮಕೂರು ಜಿಲ್ಲೆಯಲ್ಲಿ ಕುರಿ ಸಾಕಾಣಿಕೆ ದಾರರು ಈಗ ಸಂಕಷ್ಟ ಪಡುವ ದಿನ ಎದುರಾರಿದೆ. ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 10.61.330 ಕುರಿಗಳಿದ್ದು, ಈಗ ಈ ಕುರಿಗಳ ಸಂಖ್ಯೆ ಇನ್ನು ಹೆಚ್ಚಾಗಿದೆ. ಜಿಲ್ಲೆಯ ಸಿರಾ, ಮಧುಗಿರಿ, ಚಿಕ್ಕನಾಯಕನ ಹಳ್ಳಿ, ಪಾವಗಡ ಸೇರಿದಂತೆ ವಿವಿಧ ಕಡೆಗಳಲ್ಲಿ ಹೆಚ್ಚು ಕುರಿ, ಮೇಕೆ, ಸಾಕಾಣಿಕೆಗಾರರು ಇದ್ದು, ತಮ್ಮ ಗ್ರಾಮ ದಲ್ಲಿ ಸಿಗುವ ಹಸಿಮೇವನ್ನು ತಿನ್ನಿಸಿ, ಸಾಕಿ ಸಲುಹಿ, ತಮ್ಮಗೆ ಹಣದ ಅವಶ್ಯಕತೆ ಇರುವಾಗ ಮಾರಾಟ ಮಾಡುತ್ತಿದ್ದರು. ಆದರೆ, ಈಗ ಬರದಿಂದ ಮೇವು ಸಿಗದಂತಾಗಿದೆ. ಕುರಿ ಹಿಂಡನ್ನು ಬೇರೆ ಬೇರೆ ಭಾಗ ಗಳಿಗೆ ಹೊಡೆದುಕೊಂಡು ಹೋಗಿ ಸಾಕುವ ಪರಿಸ್ಥಿತಿ ಬಂದಿದೆ. ನೂರಾರು ಕುರಿಗಳೊಂದಿಗೆ ಕುರಿಗಾಹಿಗಳು ಹುಲ್ಲು ಸಿಗುವ ಕಡೆಗಳಿಗೆ ಹೋಗುತ್ತಿರುವುದು, ಜಿಲ್ಲೆಯಲ್ಲಿ ಕಂಡುಬಂದಿದೆ.
ಇದಲ್ಲದೇ 3.26.890 ಮೇಕೆಗಳು ಜಿಲ್ಲೆಯಲ್ಲಿದ್ದು, ಈ ಮೇಕೆಗಳನ್ನು ಬೇರೆಕಡೆ ಹೊಡೆದುಕೊಂಡು ಹೋಗಲು ಸಾಧ್ಯವಾಗದೇ ಸ್ಥಳೀಯ ವಾಗಿಯೇ ಸಿಗುವ ಸೊಪ್ಪು ಸೆದೆಗಳನ್ನು ತಿಂದು ಬದುಕುತ್ತಿದ್ದವು. ಆದರೆ, ಈಗ ಈ ಮೇಕೆಗಳಿಗೂ ಸೊಪ್ಪು ಸಿಗದ ಸ್ಥಿತಿಯಾಗಿದೆ. ಆದರಿಂದ ಕುರಿ, ಮೇಕೆಗಳು ಮೇವು ಮತ್ತು ಕುಡಿಯುವ ನೀರಿಗಾಗಿ ಪರಿತಪ್ಪಿಸುತ್ತಿವೆ.
ಜಿಲ್ಲೆಯಲ್ಲಿ ಆವರಿಸಿದೆ ಭೀಕರ ಬರ: ಕಳೆದ 40 ವರ್ಷಗಳಲ್ಲಿ ಕಂಡಿರದಷ್ಟು ಭೀಕರ ಬರ ಜಿಲ್ಲೆಯನ್ನು ಆವರಿಸಿದ್ದು, 10 ತಾಲೂಕುಗಳಲ್ಲಿಯೂ ಬರ ಪೀಡಿತ ತಾಲೂಕುಗಳಾಗಿವೆ. ಜಾನುವಾರುಗಳಿಗೆ ನೀರು ಮೇವಿನ ಸಂಕಷ್ಟ ತೀವ್ರವಾಗಿದೆ. ಜಿಲ್ಲೆಯ 21 ಕಡೆಗಳಲ್ಲಿ ಆರಂಭ ಮಾಡಿರುವ ಮೇವು ಬ್ಯಾಂಕ್‌ಗಳು ಇನ್ನು ಹೆಚ್ಚು ಕಡೆಗಳಲ್ಲಿ ಪ್ರಾರಂಭ ಮಾಡಬೇಕು. ಅಗತ್ಯವಿರುವ ಕಡೆ ಗೋ ಶಾಲೆಗಳನ್ನು ಆರಂಭಿಸ ಬೇಕು. ಕುರಿಮೇಕೆಗಳಿಗೂ ನೀರು ಮತ್ತು ಮೇವಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಇನ್ನು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
● ಚಿ.ನಿ.ಪುರುಷೋತ್ತಮ್