Advertisement

ಬತ್ತಿದ ತುಂಗಭದ್ರಾ; ರೈತರಲ್ಲಿ ಆತಂಕ

07:12 AM May 27, 2019 | Suhan S |

ಕುರುಗೋಡು: ತುಂಗಭದ್ರಾ ನದಿ ಬತ್ತಿ ಹೋಗಿದ್ದು, ನದಿ ದಂಡೆಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

Advertisement

ನದಿ ದಂಡೆಯ ಮಣ್ಣೂರು, ಸೂಗೂರು, ಮಣ್ಣೂರು ಕ್ಯಾಂಪ್‌, ದೊಡ್ಡರಾಜ ಕ್ಯಾಂಪ್‌, ರುದ್ರಪಾದ,ನಡವಿ, ಮುದ್ದಟನೂರು, ಹಾವಿನಾಳ, ಸಿರಿಗೇರಿ, ಗುಂಡಿಗನೂರು ಗ್ರಾಮದ ರೈತರು ಈಗಾಗಲೇ ಅಲ್ಪ ಸ್ವಲ್ಪ ಭತ್ತದ ನಾಟಿ ಮಾಡಿದ್ದರು. ಸದ್ಯ ಮುಂಗಾರು ಹಂಗಾಮಿನ ಬೆಳೆ ಬೆಳೆಯಲು ಕಾಲುವೆಗಳಿಗೆ ಹಾಗೂ ತುಂಗಭದ್ರಾ ನದಿಯಲ್ಲಿ ನೀರು ಇಲ್ಲದೆ ಬತ್ತಿ ಹೋಗಿದೆ. ಇದರಿಂದ ಮುಂಗಾರು ಬೆಳೆ ಬೆಳೆಯಲು ರೈತರು ಭೂಮಿ ಹದಗೊಳಿಸಿದ್ದಾರೆ. ಇನ್ನೂ ಕಾಲುವೆಗಳಿಗೆ ಹಾಗೂ ನದಿಗೆ ನೀರು ಬಿಟ್ಟರೆ ಸಸಿ ಮಡಿಗಳನ್ನು ಹಾಕಲು ರೈತರು ಕಾಯುತ್ತಿದ್ದಾರೆ.

ಸದ್ಯ ಭತ್ತದ ಬೆಳೆಗಳನ್ನು ಕಟಾವು ಮಾಡಿರುವ ನದಿ ದಂಡೆಯ ರೈತರು ಮರು ಮುಂಗಾರು ಬೆಳೆ ಬೆಳೆಯಲು ಮೇ ತಿಂಗಳಲ್ಲಿ ಸೋನಾ, ನಲ್ಲೂರು ಸೋನಾ, ಗಂಗಾ ಕಾವೇರಿ ಸೇರಿ ವಿವಿಧ ರೀತಿಯ ಭತ್ತದ ಬೀಜಗಳನ್ನು ಹೊರ ತಾಲೂಕಿನಿಂದ ತಂದು ಸಸಿ ಮಡಿ ಹಾಕಿ ಜೂನ್‌ ತಿಂಗಳ‌ಲ್ಲಿ ಭತ್ತದ ಬೆಳೆಯನ್ನು ನಾಟಿ ಮಾಡುವ ಚಟುವಟಿಕೆಯಲ್ಲಿ ತೊಡಗಬೇಕಿದ್ದ ರೈತರು ನದಿಯಲ್ಲಿ ನೀರು ಇಲ್ಲದ ಪರಿಣಾಮ ಸಸಿ ಮಡಿ ಹಾಕಲು ಮುಂದಾಗದಿರುವುದು ಕೃಷಿ ಚಟುವಟಿಕೆಗೆ ಪೆಟ್ಟು ಬಿದ್ದಂತಾಗಿದೆ.

ಇದರ ಸಮಸ್ಯೆ ಅರಿತಿರುವ ಕೆಲ ರೈತರು ಈಗಾಗಲೇ ನದಿಯಲ್ಲಿರುವ ಬಸಿ ನೀರಿಗೆ ಸಸಿ ಮಡಿಗಳನ್ನು ಹಾಕಿ ಸರಿಯಾದ ಸಮಯಕ್ಕೆ ಭತ್ತದ ಬೆಳೆ ನಾಟಿ ಮಾಡಲು ಹರಸಾಹಸ ಪಡುತ್ತಿದ್ದಾರೆ. ಆದರೂ ಹಾಕಿರುವ ಸಸಿ ಮಡಿಗಳು ರೈತರ ಕೈ ಸೇರದೆ ಭತ್ತದ ಬೆಳೆ ಬೆಳೆಯಲು ಕಷ್ಟಕರವಾಗಿದೆ. ಇದರಿಂದ ಹಲವು ರೈತರು ತಮ್ಮ ಜಮೀನುಗಳನ್ನು ಹದಗೊಳಿಸಿ ಹಾಗೆ ಬಿಟ್ಟು ಕಾಲುವೆಗಳಿಗೆ ಮತ್ತು ನದಿಗೆ ನೀರು ಹರಿಸಿದ ಮೇಲೆ ಬೆಳೆಗಳನ್ನು ನಾಟಿ ಮಾಡಿದ್ರೆ ಆಯ್ತು ಅಂತಹ ಭೂಮಿಗಳನ್ನು ಹಾಗೆ ಬಿಟ್ಟಿದ್ದಾರೆ.

ಜನ ಜಾನುವಾರುಗಳಿಗೆ ತೊಂದರೆ: ತುಂಗಭದ್ರಾ ನದಿಯಿಂದ ಗ್ರಾಮದಲ್ಲಿರುವ ಕುಡಿಯುವ ನೀರಿನ ಟ್ಯಾಂಕರ್‌ಗಳಿಗೆ ನೀರಿನ ಸಂಪರ್ಕ ಹೊಂದಿದ್ದು, ಟ್ಯಾಂಕರ್‌ನಿಂದ ಗ್ರಾಮದ ಸಾರ್ವಜನಿಕ ನಲ್ಲಿಗಳಿಗೆ ನೀರು ಸರಬರಾಜು ಆಗುತ್ತಿದ್ದು, ನದಿಯಲ್ಲಿ ನೀರು ಬತ್ತಿ ಹೋಗಿದ್ದು, ನೀರಿನ ಬವಣೆ ಜನ, ಜಾನುವಾರುಗಳಿಗೆ ಕಾಡುವ ಸ್ಥಿತಿ ಸಮಿಪಿಸುತ್ತಿದೆ.

ಸರಿಯಾಗಿ ಮಳೆ ಆಗದ ಕಾರಣ ತುಂಗಭದ್ರಾ ಡ್ಯಾಂನಲ್ಲಿ ನೀರು ಕಡಿಮೆ ಇದೆ. ಹಾಗಾಗಿ ನದಿಗಳಿಗೆ ಹಾಗೂ ಕಾಲುವೆಗಳಿಗೆ ಅಧಿಕಾರಿಗಳು ನೀರು ಬಿಡುತ್ತಿಲ್ಲ. ನೀರಾವರಿ ಸಚಿವರು ಗಮನಹರಿಸಿದರೆ ರೈತರಿಗೆ ನೀರು ಒದಗಿಸಬಹುದು. ಆದರೂ ಅವರು ಇದರ ಬಗ್ಗೆ ಗಮನ ಕೊಡುತ್ತಿಲ್ಲ. ನಾನು ಅಧಿಕಾರಿಗಳಿಗೆ ಭದ್ರಾ ಜಲಾಶಯದಲ್ಲಿ ಹೆಚ್ಚು ನೀರು ಇದೆ. ಅಲ್ಲಿಂದ 5 ಟಿಎಂಸಿ ನೀರು ಬಿಡಿಸಿ ಎಲ್ಲ ಭಾಗದ ರೈತರಿಗೆ ನೀರು ಒದಗಿಸುವಂತೆ ಮನವಿ ಮಾಡುತ್ತೇನೆ. •ದರೂರು ಪುರುಷೋತ್ತಮ ಗೌಡ, ತುಂಗಭದ್ರಾ ರೈತ ಸಂಘದ ಜಿಲ್ಲಾಧ್ಯಕ್ಷ.
Advertisement
Advertisement

Udayavani is now on Telegram. Click here to join our channel and stay updated with the latest news.

Next