Advertisement

ಜಾಧವ್‌ ವಿಚಾರದಲ್ಲಿ ಒಪ್ಪಂದ ಉಲ್ಲಂಘನೆ ಆಗಿಲ್ಲ: ಪಾಕ್‌

03:45 AM Apr 25, 2017 | |

ನವದೆಹಲಿ: ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ವಿಚಾರದಲ್ಲಿ ಒಪ್ಪಂದದ ಉಲ್ಲಂಘನೆಯಾಗಿಲ್ಲ ಎಂದು ಪಾಕ್‌ ಹೇಳಿದೆ.

Advertisement

ಜಾಧವ್‌ ಅವರಿಗೆ ಕನ್ಸುಲರ್‌ರನ್ನು ಭೇಟಿಯಾಗಲು ಅವಕಾಶ ನಿರಾಕರಿಸುವ ಮೂಲಕ ಪಾಕಿಸ್ತಾನವು ದ್ವಿಪಕ್ಷೀಯ ಒಪ್ಪಂದವನ್ನು ಉಲ್ಲಂ ಸಿದೆ ಎಂದು ಭಾರತ ಆರೋಪಿಸಿದ ಹಿನ್ನೆಲೆಯಲ್ಲಿ ಪಾಕ್‌ ಈ ಸ್ಪಷ್ಟನೆ ನೀಡಿದೆ. ಕನ್ಸುಲರ್‌ ಭೇಟಿಗೆ ಅವಕಾಶ ಕೋರಿ ಭಾರತವು ಈವರೆಗೆ 15 ಬಾರಿ ಪಾಕ್‌ಗೆ ಕೋರಿಕೆ ಸಲ್ಲಿಸಿದೆ. ಆದರೆ, ಪ್ರತಿ ಬಾರಿಯೂ ಪಾಕ್‌ ಅದನ್ನು ತಿರಸ್ಕರಿಸಿದೆ. 

ಸೋಮವಾರ ಈ ಕುರಿತು ಮಾತನಾಡಿದ ಪಾಕ್‌ ಹೈಕಮಿಷನರ್‌ ಅಬ್ದುಲ್‌ ಬಾಸಿತ್‌, “ಒಪ್ಪಂದದ ಪ್ರಕಾರ, ಕನ್ಸುಲರ್‌ ಭೇಟಿಗೆ ಅವಕಾಶ ಕಲ್ಪಿಸುವಾಗ ರಾಜಕೀಯ ಮತ್ತು ಭದ್ರತೆಗೆ ಸಂಬಂಧಿಸಿದ ಪ್ರಕರಣಗಳಿಗೆ ಆದ್ಯತೆ ನೀಡಲಾಗುತ್ತದೆ,’ ಎಂದಿದ್ದಾರೆ. ಜತೆಗೆ, ಜಾಧವ್‌ರನ್ನು ಬಂಧಿಸಿದ್ದು ಇರಾನ್‌ನಲ್ಲಿ ಅಲ್ಲ. ಬಲೂಚಿಸ್ತಾನದಲ್ಲಿ. ಅವರಿಂದ ವಶಕ್ಕೆ ಪಡೆಯಲಾದ 2 ಪಾನ್ಪೋರ್ಟ್‌ಗಳಲ್ಲಿ ಒಂದು ಭಾರತದ್ದು, ಮತ್ತೂಂದು ನಕಲಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next