Advertisement
ರಾಜ್ಯ ಸರಕಾರ ಗ್ರಾಮೀಣ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸ್ವತ್ಛ ಭಾರತ್ ಮಿಷನ್ (ಗ್ರಾಮೀಣ)ಯಡಿ ದಹನ ಯಂತ್ರಗಳ ಅಳವಡಿಕೆಗೆ ಯೋಜನೆ ರೂಪಿಸಿದೆ.
Related Articles
Advertisement
ಲಕ್ಷ ರೂ.ಅನುದಾನ: ಗ್ರಾಪಂ ವ್ಯಾಪ್ತಿಯ ಘನತಾಜ್ಯ ನಿರ್ವಹಣಾ ಘಟಕಗಳಲ್ಲಿ ಈ ಯಂತ್ರಗಳನ್ನು ಅಳವಡಿಕೆ ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ಕಾರ್ಯಗತಕ್ಕಾಗಿಯೇ ಸ್ವಚ್ಛ ಭಾರತ್ ಮಿಷನ್ ಅಡಿ ಪ್ರತಿ ಗ್ರಾಮ ಪಂಚಾಯಿತಿಗೆ ಸ್ಯಾನಿಟರಿ ನ್ಯಾಪ್ಕಿನ್ ಇನ್ಸಿನರೇಟರ್ ಖರೀದಿಸಲು ಸಾವಿರಾರು ರೂ,ಗಳ ಅನುದಾನ ಬಿಡುಗಡೆಗೆ ಮಾಡಿದೆ. ಒಂದೊಂದು ಗ್ರಾಪಂಗಳಲ್ಲಿ ಸುಮಾರು 44 ಸಾವಿರ ರೂ,ಗಳ ವರಗೆ ಹಣ ಖರ್ಚು ಮಾಡಿದ್ದಾರೆ.
ತರಬೇತಿ ಮತ್ತು ಜಾಗೃತಿ: ಇನ್ಸಿನರೇಟರ್ ನಿರ್ವಹಿಸುವ ಸಿಬ್ಬಂದಿಗೆ ಆಯಾ ತಯಾರಿಕಾ ಸಂಸ್ಥೆಗಳಿಂದ ಅಗತ್ಯ ಎಸ್.ಒ.ಪಿ. ಹಾಗೂ ತರಬೇತಿಯನ್ನು ಒದಗಿಸಬೇಕು. ಯಂತ್ರದ ಖರೀದಿಗೆ ಹೆಚ್ಚಿನ ಅನುದಾನ ಬೇಕಾದರೆ, 15ನೇ ಹಣಕಾಸಿನ ಆಯೋಗದ ಅನುದಾನ ಮತ್ತು ಪಂಚಾಯಿತಿಯಲ್ಲಿ ಲಭ್ಯವಿರುವ ಅನುದಾನ ಬಳಸಿಕೊಳ್ಳಬೇಕು. ಈ ಯಂತ್ರಗಳ ಬಳಕೆ ಕುರಿತು ಮಹಿಳೆಯರಿಗೆ ಜಾಗೃತಿ ಮೂಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಈ ಸ್ಯಾನಿಟರಿ ನ್ಯಾಪ್ಕಿನ್ ಇನ್ಸಿನರೇಟರ್ ಯಂತ್ರವನ್ನು ಹೆಚ್ಚಾಗಿ ಮಹಿಳೆ ಇರುವ ಪ್ರದೇಶವಾದ ಶಾಲಾ, ಕಾಲೇಜು, ಮಹಿಳಾ ವಸತಿ ನಿಲಯಗಳಲ್ಲಿ ಅಳವಡಿಸಬೇಕು ಆದರೆ ಗ್ರಾಪಂನಗಳಲ್ಲಿ ಈ ಯಂತ್ರವನ್ನು ಅಳವಡಿಸಿರುವುದು ಕೇವಲ ಸರಕಾರದ ಹಣ ಖರ್ಚು ಮಾಡಲು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಯಂತ್ರ ಜನ ಉಪಯೋಗಕ್ಕೆ ಬರದಂತೆ ನೋಡಿಕೊಳ್ಳಬೇಕು. ಕೇಸೂರ ಗ್ರಾಪಂನಲ್ಲಿ ಅಳವಡಿಸಿದ ಸ್ಯಾನಿಟರಿ ನ್ಯಾಪ್ಕಿನ್ ಇನ್ಸಿನರೇಟರ್ ಯಂತ್ರವನ್ನು ಕಚೇರಿಯ ಪಕ್ಕದಲ್ಲಿ ಇರುವ ಕಸ್ತೂರಿಬಾ ವಸತಿ ನಿಲಯದಲ್ಲಿ ಹಾಗೂ ದೋಟಿಹಾಳ ಗ್ರಾಪಂನಲ್ಲಿ ಇರುವ ಇನ್ಸಿನರೇಟರ್ ಯಂತ್ರವನ್ನು ಕಾಲೇಜಿನಲ್ಲಿ ಅಳವಡಿಸಲು ಸೂಕ್ತ ಕ್ರಮಕೈಗೊಳ್ಳುತ್ತೇವೆ.–ಅಮೀನಸಾಬ್ ಅಲಂದಾರ, ಮುತ್ತಣ್ಣ ಛಲವಾದಿ ಕೇಸೂರ, ದೋಟಿಹಾಳ ಪಿಡಿಒ
-ವರದಿ: ಮಲ್ಲಿಕಾರ್ಜುನ ಮೆದಿಕೇರಿ