ಮಾಸ್ಕೋ: ಉಕ್ರೇನ್ ನಗರಗಳ ಮೇಲೆ ರಷ್ಯಾ ಕಳೆದ ಕೆಲವು ದಿನಗಳಿಂದ ನಡೆಸುತ್ತಿರುವ ಯುದ್ಧವನ್ನು ವಿರೋಧಿಸಿ ರಷ್ಯಾ ಟಿವಿ ಚಾನೆಲ್ ಸಿಬಂದಿಗಳು ನೇರ ಸುದ್ದಿಪ್ರಸಾರದ ವೇಳೆಯೇ ಸಾಮೂಹಿಕವಾಗಿ ರಾಜೀನಾಮೆ ನೀಡಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಗಡಿಯಲ್ಲಿ ಶಂಕಿತ ಪಾಕಿಸ್ಥಾನಿ ಡ್ರೋನ್ ಮೇಲೆ ಗಡಿ ಭದ್ರತಾ ಪಡೆಯಿಂದ ಗುಂಡು
ರಷ್ಯಾದ ಟಿವಿ ರೇನ್ ಚಾನೆಲ್ ನ ಸಿಬಂದಿಗಳು ನೇರಪ್ರಸಾರದಲ್ಲಿಯೇ ಸಾಮೂಹಿಕ ರಾಜೀನಾಮೆ ನೀಡಿರುವ ನಿರ್ಧಾರ ತೆಗೆದುಕೊಂಡಿದ್ದು, ಇದರ ಪರಿಣಾಮ ರಷ್ಯಾದ ಅಧಿಕಾರಿಗಳು ಸುದ್ದಿ ಪ್ರಸಾರವನ್ನು ಸ್ಥಗಿತಗೊಳಿಸಿರುವುದಾಗಿ ವರದಿ ತಿಳಿಸಿದೆ.
ಚಾನೆಲ್ ನಲ್ಲಿ ಕೊನೆಯ ಬುಲೆಟಿನ್ ಪ್ರಸಾರ ಮಾಡಿ ಸ್ಟುಡಿಯೋದಿಂದ ಸಿಬಂದಿಗಳು ಹೊರ ಹೋಗುತ್ತಿದ್ದ ಸಂದರ್ಭದಲ್ಲಿ..ನಮಗೆ ಯುದ್ಧ ಬೇಡ ಎಂದು ಚಾನೆಲ್ ನ ಸಂಸ್ಥಾಪಕರಲ್ಲಿ ಒಬ್ಬರಾದ ನಟಾಲಿಯಾ ಸಿಂಡೆಯೇವಾ ತಿಳಿಸಿದ್ದಾರೆ.
ಈ ಘಟನೆ ನಂತರ ಅನಿರ್ದಿಷ್ಟಾವಧಿವರೆಗೆ ಸುದ್ದಿ ಪ್ರಸಾರ ಸ್ಥಗಿತಗೊಳಿಸಲಾಗಿದೆ ಎಂದು ರಷ್ಯಾದ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದರು. ನೇರಪ್ರಸಾರದಲ್ಲಿ ಟಿವಿ ಚಾನೆಲ್ ಸಿಬಂದಿಗಳು ರಾಜೀನಾಮೆ ನೀಡಿರುವ ವಿಡಿಯೋವನ್ನು ಲೇಖಕ ಡೇನಿಯಲ್ ಅಬ್ರಾಹಮ್ಸ್ ತಮ್ಮ ಲಿಂಕ್ಡ್ ಇನ್ ನಲ್ಲಿ ಶೇರ್ ಮಾಡಿರುವುದಾಗಿ ವರದಿ ತಿಳಿಸಿದೆ.