Advertisement
3 ಸೇತುವೆಗೆ 18 ಕೋ.ರೂ.ಈ ಸೌಡ – ಶಂಕರನಾರಾಯಣ, ಆಲೂರು ರಾಗಿ ಹಕ್ಲು ಬಳಿ ಹಾಗೂ ಕಬ್ಬಿನಾಲೆ ಬಳಿ ಚಕ್ರ ನದಿಗೆ ಸೇತುವೆ ಸೇರಿ ಒಟ್ಟು 3 ಕಡೆಗಳಲ್ಲಿ ಸೇತುವೆ ನಿರ್ಮಾಣಕ್ಕೆ 18 ಕೋ.ರೂ. ವೆಚ್ಚದ ಕಾಮಗಾರಿಗೆ ಆಗಿನ ಸಿಎಂ ಸಿದ್ದರಾಮಯ್ಯ ಅವರು ಕಳೆದ ವರ್ಷದ ಜ. 8 ರಂದು ಚಾಲನೆ ನೀಡಿದ್ದರು.
ಪ್ರತಿ ಚುನಾವಣೆ ಬಂದಾಗೊಮ್ಮೆ ಸೇತುವೆ ಬಗ್ಗೆ ವಿಚಾರ ಪ್ರಸ್ತಾಪವಾಗುತ್ತದೆ. ಆದರೆ ಬಳಿಕ ಆ ವಿಚಾರ ಅಲ್ಲಿಗೆ ಮುಗಿದು ಹೋಗುತ್ತದೆ. ಮತ್ತೆ ಜನಪ್ರತಿನಿಧಿಗಳಿಗೆ ನೆನಪಾಗೋದು ಇನ್ನೊಂದು ಚುನಾವಣೆ ಬಂದಾಗ ಎನ್ನುವುದು ಶಂಕರನಾರಾಯಣ ಹೋರಾಟ ಸಮಿತಿಯ ಚಿಟ್ಟೆ ರಾಜಗೋಪಾಲ್ ಹೆಗ್ಡೆಯವರ ಆರೋಪ. ಪ್ರಸ್ತಾವಿತ ಸೌಡ – ಶಂಕರನಾರಾಯಣ ಸೇತುವೆ ನಿರ್ಮಾಣ ಪ್ರದೇಶದಲ್ಲಿ ವಾರಾಹಿ ನದಿ ಪಾತ್ರದ ಒಂದು ದಡವು ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದರೆ, ಇನ್ನೊಂದು ತೀರವು ಉಡುಪಿ – ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿದೆ. ಟೆಂಡರ್‌ಗೆ ಕಳುಹಿಸಿದ್ದೇವೆ
ರಾಷ್ಟ್ರೀಯ ಹೆದ್ದಾರಿ ಶೃಂಗೇರಿ ಉಪ ವಿಭಾಗದಿಂದ ಮೇಲಧಿಕಾರಿಗಳಿಗೆ ಯೋಜನೆ ಅಂತಿಮಗೊಳಿಸಿ, ಕಳುಹಿಸಿಲಾಗಿದೆ. ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಟೆಂಡರ್ ಪ್ರಕ್ರಿಯೆ ಅಂತಿಮಗೊಂಡು ಕಾಮಗಾರಿ ಆರಂಭವಾಗುವಾಗ ಇನ್ನು ಸುಮಾರು 2 ತಿಂಗಳು ಆಗಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯ.
Related Articles
Advertisement
ಟೆಂಡರ್ ಅಂತಿಮಗೊಳಿಸಲಿಈ ಸೇತುವೆ ನಿರ್ಮಾಣ ಕುರಿತು ನಾನು ಮಾಹಿತಿ ಹಕ್ಕು ಕಾಯ್ದೆಯಡಿ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಶೃಂಗೇರಿ ಇಲ್ಲಿಗೆ ಮಾಹಿತಿ ಕೇಳಿದಾಗ, ಕೇಂದ್ರ ರಸ್ತೆ ನಿಧಿ ಯೋಜನೆ ಅಡಿ ಮಂಜೂರು ಆಗಿದ್ದು, ಆದರೆ ಟೆಂಡರ್ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ ಎನ್ನುವ ಸತ್ಯ ತಿಳಿಯಿತು. ಜನಪ್ರತಿನಿಧಿಗಳು ಇನ್ನಾದರೂ ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಟೆಂಡರ್ ಅಂತಿಮಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿ.
– ಬಿ.ಕೆ. ಶ್ರೀನಿವಾಸ ಸೌಡ, ಸ್ಥಳೀಯರು