Advertisement

ಉಗ್ರ ನಿಗ್ರಹ ವರೆಗೆ ಪಾಕ್‌ ಜತೆ ಮಾತುಕತೆ ಇಲ್ಲ: ಭಾರತ ಪುನರುಚ್ಚಾರ

05:50 AM Mar 02, 2019 | Team Udayavani |

ಹೊಸದಿಲ್ಲಿ : ಪಾಕಿಸ್ಥಾನ ತನ್ನ  ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಸಮೂಹಗಳ ವಿರುದ್ಧ ಕಣ್ಣಿಗೆ ಕಾಣುವ ರೀತಿಯಲ್ಲಿ ವಿಶ್ವಾಸಾರ್ಹ ಕ್ರಮಗಳನ್ನು ತೆಗೆದುಕೊಂಡ ಬಳಿಕವೇ ಪಾಕ್‌ ಜತೆ ಮಾತುಕತೆ ಸಾಧ್ಯ ಎಂದು ಭಾರತ ತನ್ನ ನಿಲುವನ್ನು ಇಂದು ಶನಿವಾರ ಪುನರುಚ್ಚರಿಸಿದೆ. 

Advertisement

40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಲಾ ಉಗ್ರ ದಾಳಿಯ ಬಗ್ಗೆ ಭಾರತ ಅನೇಕ ಸಾಕ್ಷ್ಯಗಳನ್ನು ಒಳಗೊಂಡ ಕಡತವನ್ನು ಪಾಕಿಸ್ಥಾನಕ್ಕೆ ನೀಡಿದೆ. ಈ ದಾಳಿಯನ್ನು ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯೇ ನಡೆಸಿದೆ ಎಂಬ ಸಾಕ್ಷ್ಯ ಕೂಡ ಇದರಲ್ಲಿದೆ. ಇದರ ಆಧಾರದಲ್ಲಿ ಪಾಕಿಸ್ಥಾನ ಕೂಡಲೇ ಆ ಉಗ್ರ ಸಂಘಟನೆ ವಿರುದ್ಧ ಕಣ್ಣಿಗೆ ಕಾಣುವ ರೀತಿಯಲ್ಲಿ ವಿಶ್ವಾಸಾರ್ಹ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಭಾರತ ಹೇಳಿದೆ. 

ಪುಲ್ವಾಮಾ ದಾಳಿ ನಡೆದಾಕ್ಷಣವೇ ಜೈಶ್‌ ಸಂಘಟನೆ ಈ ಉಗ್ರ ದಾಳಿಗೆ ಹೊಣೆ ಹೊತ್ತು ಇದು ತನ್ನದೇ ಕೃತ್ಯ ಎಂದು ಪ್ರಕಟಿಸಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಪಾಕ್‌ ವಿದೇಶ ಸಚಿವ ಶಾ ಮಹಮೂದ್‌ ಕುರೇಶಿ ಅವರು ಜೆಇಎಂ ಸಂಘಟನೆಯನ್ನು ಸಮರ್ಥಿಸಿಕೊಳ್ಳುತ್ತಾ, ಪುಲ್ವಾಮಾ ದಾಳಿಗೂ ಜೆಇಎಂ ಗೂ ಯಾವುದೇ ಸಂಬಂಧವಿಲ್ಲ; ಮೇಲಾಗಿ ಜೈಶ್‌ ನ ಪಾತ್ರ ಈ ದಾಳಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next