Advertisement
ರುಪ್ಸಾ ಅಧೀನದ ಕೆಲವೇ ಕೆಲವು ಶಾಲೆಗಳು ಮಾತ್ರ ಆನ್ ಲೈನ್ ತರಗತಿ ಬಂದ್ ಮಾಡಿವೆ. ಅದಕ್ಕೂ ಪಾಲಕರು ಆಕ್ರೋಶ ಹೊರ ಹಾಕಿದ್ದಾರೆ. ಶಾಲಾ ತರಗತಿ ನಡೆಯುತ್ತಿಲ್ಲ. ಅಲ್ಲದೆ, ಆನ್ ಲೈನ್ ತರಗತಿ ಕೂಡ ಸೀಮಿತವಾಗಿ ನಡೆಯುತ್ತಿರುವುದು, ಪರೀಕ್ಷೆಗಳು ಸಮೀಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಆನ್ ಲೈನ್ ಕ್ಲಾಸ್ ಬಂದ್ ಮಾಡಿರುವುದು ಸರಿಯಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆನ್ ಲೈನ್ ತರಗತಿ ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.
Related Articles
Advertisement
ಇನ್ನು ಕರ್ನಾಟಕ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್), ಕರ್ನಾಟಕ ಅನುದಾನ ರಹಿತ ಶಾಲಾಡಳಿತ ಮಂಡಳಿಗಳ ಸಂಘ (ಕುಸ್ಮಾ), ಕರ್ನಾಟಕ ಸ್ವತಂತ್ರ ಸಿಬಿಎಸ್ಇ ಆಡಳಿತ ಮಂಡಳಿಗಳ ಸಂಘ ಸೇರಿದಂತೆ ವಿವಿಧ ಖಾಸಗಿ ಶಾಲಾಡಳಿತ ಮಂಡಳಿಗಳು ಆನ್ ಲೈನ್ ತರಗತಿಗಳನ್ನು ಎಂದಿನಂತೆ ನಡೆಸುತ್ತಿವೆ. ಅಲ್ಲದೇ, ವಿದ್ಯಾರ್ಥಿಗಳ ಪಾಲಕ ಪೋಷಕರಿಗೆ ಸಂದೇಶ ರವಾನಿಸಿ, ಯಾವುದೇ ರೀತಿಯ ಬಂದ್ ಇರುವುದಿಲ್ಲ. ಎಂದಿನಂತೆ ಮಕ್ಕಳನ್ನು ಆನ್ಲೈನ್ ತರಗತಿಗೆ ಸಜ್ಜುಗೊಳಿಸುವಂತೆ ಮನವಿ ಮಾಡಿದೆ. ಅದರತೆ ರಾಜ್ಯದ ಬಹುತೇಕ ಖಾಸಗಿ ಶಾಲಾಡಳಿತ ಮಂಡಳಿಯಲ್ಲಿ ಆನ್ ಲೈನ್ ತರಗತಿ ನಡೆಯುತ್ತಿದೆ.
ನಮ್ಮ ಬೇಡಿಕೆಗಾಗಿ ಈಗಾಗಲೇ ಹೋರಾಟ ಮಾಡಿದ್ದೇವೆ. ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದೇವೆ. ಸರ್ಕಾರದಿಂದ ಸಮಸ್ಯೆ ಬಗೆಹರಿಸುವ ಭರವಸೆಯೂ ಸಿಕ್ಕಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಿಲ್ಲದೇ ಹೋರಾಟ ಮಾಡುತ್ತೇವೆ. ಆನ್ ಲೈನ್ ಹಾಗೂ ಆಫ್‌ಲೈನ್ ತರಗತಿಗಳು ಮಕ್ಕಳ ಹಿತದೃಷ್ಟಿಯಿಂದ ನಡೆಸುತ್ತಿದ್ದೇವೆ. ಶಾಲಾರಂಭದಿಂದ ಇಡೀ ಶಿಕ್ಷಣ ವ್ಯವಸ್ಥೆಗೆ ಧೈರ್ಯ ಬರಲಿದೆ. ಯಾವುದೇ ಬಂದ್ ಇಲ್ಲ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ತಿಳಿಸಿದರು