Advertisement

ಸ್ಟಾರ್‌ಗಳಿಲ್ಲ ನಿಮ್ದೇ ಎಲ್ಲಾ!

07:30 AM Mar 23, 2018 | |

ಸದ್ಯಕ್ಕೆ ಯಾವುದೇ ಸ್ಟಾರ್‌ ಸಿನಿಮಾಗಳು ಬಿಡುಗಡೆಯ ಹಂತದಲ್ಲಿಲ್ಲ. ಅದರಲ್ಲೂ ಏಪ್ರಿಲ್‌ನಲ್ಲಿ ಯಾವ ಸ್ಟಾರ್‌ ನಟರ ಸಿನಿಮಾಗಳು ಹೊಸಬರಿಗೆ ಭಯ ಹುಟ್ಟಿಸೋದಿಲ್ಲ. ಏಕೆಂದರೆ, ಬಹುತೇಕ ನಟರ ಸಿನಿಮಾಗಳು ಬಿಡುಗಡೆಯಾಗಿದ್ದು, ಇತರೆ ಚಿತ್ರಗಳು ಚಿತ್ರೀಕರಣ ಹಂತದಲ್ಲಿವೆ. ಇದರಿಂದ ಹೊಸಬರಿಗೆ ಲಾಭ. ಕೆಲವೊಮ್ಮೆ ಹೊಸಬರ ಸಿನಿಮಾ ಚೆನ್ನಾಗಿದ್ದರೆ ಪಕ್ಕದಲ್ಲಿ ಸ್ಟಾರ್‌ ಸಿನಿಮಾ ಇದ್ದರೆ ಮೊದಲ ಆದ್ಯತೆ ಸ್ಟಾರ್‌ ಸಿನಿಮಾಕ್ಕಿರುತ್ತದೆ. ಆದರೆ, ಈ ಬಾರಿ ಸ್ಟಾರ್‌ ಅಪ್ಶನ್‌ ಇಲ್ಲದಿರುವುದರಿಂದ ಹೊಸಬರಿಗೆ ಪ್ಲಸ್‌ ಆಗುವುದರಲ್ಲಿ ಎರಡು ಮಾತಿಲ್ಲ.

Advertisement

“ಸಾರ್‌, ನಮ್‌ ಸಿನಿಮಾ ತುಂಬಾ ಚೆನ್ನಾಗಿತ್ತು. ಆದ್ರೆ ಏನ್‌ ಮಾಡೋದು, ಸ್ಟಾರ್‌ ಸಿನಿಮಾ ಬಂದ್‌ಬಿಡು¤ ನೋಡಿ … ನಮ್ಗೆ ಸರಿಯಾಗಿ ಹೊಡೆತ ಬಿತ್ತು …’ – ವರ್ಷದಲ್ಲಿ ಅದೆಷ್ಟು ಬಾರಿ ಹೊಸಬರ ಬಾಯಿಂದ ಪತ್ರಿಕಾಗೋಷ್ಠಿಗಳಲ್ಲಿ ಈ ಮಾತು ಬರುತ್ತೋ ಲೆಕ್ಕವಿಲ್ಲ. ತಮ್ಮ ಸಿನಿಮಾ ಚೆನ್ನಾಗಿ ಹೋಗಿಲ್ಲ ಎಂದರೆ ಕ್ರಿಕೆಟ್‌, ಮಳೆ, ಪರಭಾಷಾ ಸಿನಿಮಾ, ಅಷ್ಟೇ ಏಕೆ ಕನ್ನಡದಲ್ಲಿ ಬರುವ ಸ್ಟಾರ್‌ ಸಿನಿಮಾಗಳ ಮುಂದಿಟ್ಟುಕೊಂಡು ಸಮಜಾಯಿಷಿ ನೀಡುವ ಸಾಕಷ್ಟು ನಿರ್ದೇಶಕರು ಗಾಂಧಿನಗರದಲ್ಲಿ ಇದ್ದಾರೆ. ಹಾಗಂತ ಅವರ ಮಾತನ್ನು ಏಕಾಏಕಿ ತೆಗೆದುಹಾಕುವಂತೆಯೂ ಇಲ್ಲ. ಮಳೆ, ಕ್ರಿಕೆಟ್‌ ಹಾಗೂ ಸ್ಟಾರ್‌ ಸಿನಿಮಾಗಳ ಹವಾದ ಮುಂದೆ ಕೆಲವೊಮ್ಮೆ ಹೊಸಬರ ಒಳ್ಳೆಯ ಸಿನಿಮಾಗಳು ಮಂಕಾದ ಉದಾಹರಣೆಗಳೂ ಇವೆ. ಆದರೆ, ಈಗ ಹೊಸಬರಿಗೊಂದು ಸುವರ್ಣಾವಕಾಶ ಸಿಕ್ಕಿದೆ. ಸಿನಿಮಾ ಚೆನ್ನಾಗಿದ್ದರೆ ಗೆದ್ದು ತೋರಿಸುವ ಸೂಪರ್‌ ಆಫ‌ರ್‌ ಎನ್ನಬಹುದು. ಸ್ಟಾರ್‌ಗಳ ಭಯ ಇಲ್ಲದೇ, ಥಿಯೇಟರ್‌ ಅನ್ನು ಎಳೆದುಕೊಳ್ಳುತ್ತಾರೆಂಬ ಚಿಂತೆ ಇಲ್ಲದೇ ಹೊಸಬರು ಸಿನಿಮಾ ಬಿಡುಗಡೆ ಮಾಡಬಹುದು. ಏಕೆಂದರೆ, ಮುಂದಿನ ಕೆಲವು ತಿಂಗಳಲ್ಲಿ ಯಾವುದೇ ಸ್ಟಾರ್‌ಗಳ ಸಿನಿಮಾಗಳು ಅಡ್ಡ ಬರೋದಿಲ್ಲ.

ಸಾಮಾನ್ಯವಾಗಿ ಒಂದೆರಡು ತಿಂಗಳ ಗ್ಯಾಪ್‌ನಲ್ಲಿ ಸ್ಟಾರ್‌ಗಳ ಸಿನಿಮಾಗಳು ಬರುತ್ತವೆ. ಪ್ರತಿ ಸಿನಿಮಾ ಬಿಡುಗಡೆಯಾದಾಗಲೂ
ಥಿಯೇಟರ್‌ ಸಮಸ್ಯೆ ಜೊತೆಗೆ ಪ್ರೇಕ್ಷಕರ ಕೊರತೆ ಕೂಡಾ ಕಾಡುತ್ತದೆ. ಆದರೆ, ಸದ್ಯಕ್ಕೆ ಯಾವುದೇ ಸ್ಟಾರ್‌ ಸಿನಿಮಾಗಳು ಬಿಡುಗಡೆಯ ಹಂತದಲ್ಲಿಲ್ಲ. ಅದರಲ್ಲೂ ಏಪ್ರಿಲ್‌ ಯಾವ ಸ್ಟಾರ್‌ ನಟರ ಸಿನಿಮಾಗಳು ಹೊಸಬರಿಗೆ ಭಯ ಹುಟ್ಟಿಸೋದಿಲ್ಲ. ಏಕೆಂದರೆ,
ಬಹುತೇಕ ನಟರ ಸಿನಿಮಾಗಳು ಬಿಡುಗಡೆಯಾಗಿದ್ದು, ಇತರ ಚಿತ್ರಗಳು ಚಿತ್ರೀಕರಣ ಹಂತದಲ್ಲಿವೆ. ಮೊನ್ನೆವರೆಗೆ ಶಿವರಾಜಕುಮಾರ್‌
“ಟಗರು’ ಚಿತ್ರ ಬರುತ್ತದೆಂದು ಸಾಕಷ್ಟು ಹೊಸಬರ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದವು. ಆದರೆ ಈಗ ಸದ್ಯಕ್ಕೆ “ಸಿನಿರಸ್ತೆ’ ಸ್ಟಾರ್‌ಗಳಿಂದ ಮುಕ್ತವಾಗಿದೆ. ಇನ್ನೇನಿದ್ದರೂ ಹೊಸಬರ ಆಟ. ನೀವೇ ಸೂಕ್ಷ್ಮವಾಗಿ ಗಮನಿಸಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ ಗಳೆಂದು ಕರೆಸಿಕೊಳ್ಳುವ ಬಹುತೇಕ ನಟರ ಸಿನಿಮಾಗಳು ಈಗಾಗಲೇ ತೆರೆಕಂಡಿವೆ. ಪುನೀತ್‌ “ಅಂಜನಿಪುತ್ರ’, ಶಿವರಾಜಕುಮಾರ್‌ “ಟಗರು’, ಮುರಳಿ “ಮಫ್ತಿ’, ಗಣೇಶ್‌ “ಚಮಕ್‌’ … ಹೀಗೆ ಎಲ್ಲಾ ಚಿತ್ರಗಳು ಮೂರ್‍ನಾಲ್ಕು ತಿಂಗಳ ಹಿಂದೆಯೇ ಬಿಡುಗಡೆಯಾಗಿವೆ. ಮುಂದಿನ ವಾರ “ದುನಿಯಾ’ ವಿಜಯ್‌ ಅಭಿನಯದ “ಜಾನಿ ಜಾನಿ ಎಸ್‌ ಪಪ್ಪ’ ಚಿತ್ರವೊಂದು ಬಿಡುಗಡೆಯಾಗಬೇಕಿದೆ. ಅದು ಬಿಟ್ಟರೆ, ಸದ್ಯಕ್ಕೆ ಯಾವ ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯ ಹಂತಕ್ಕೆ ಬಾರದಿರುವುದರಿಂದ
ಹೊಸಬರದ್ದೇ ಘೋಡಾ, ಹೊಸಬರದ್ದೇ ಮೈದಾನ್‌ …

ಹೊಸಬರಿಗೆ ಲಾಭ:
ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ಪ್ರತಿಭೆಗಳು ಬರುತ್ತಿವೆ. ಅದರಲ್ಲೂ ಬೇರೆ ಬೇರೆ ಕ್ಷೇತ್ರದ ಮಂದಿ ಬಂದು ಹೊಸ
ಪ್ರಯೋಗ ಮಾಡುತ್ತಿದ್ದಾರೆ. ಆದರೆ, ಅವರ ಪ್ರಯೋಗ, ಪ್ರತಿಭೆ ಪ್ರೇಕ್ಷಕರಿಗೆ ಸರಿಯಾಗಿ ತಲುಪುತ್ತಿಲ್ಲ. ಇದಕ್ಕೆ ಕಾರಣ ಪ್ರಮೋಶನ್‌
ಕೊರತೆಯ ಜೊತೆಗೆ ಥಿಯೇಟರ್‌ನಲ್ಲಿ ಹೆಚ್ಚು ದಿನ ಸಿನಿಮಾ ನಿಲ್ಲದೇ ಇರೋದು. ಸ್ಟಾರ್‌ಗಳ ಅಬ್ಬರದಲ್ಲಿ ಹೊಸಬರ
ಚಿತ್ರಮಂದಿರಗಳು ಕೂಡಾ ಕೊಚ್ಚಿಕೊಂಡು ಹೋಗುತ್ತವೆ. ಆದರೆ, ಸದ್ಯಕ್ಕೆ ಯಾವುದೇ ಸ್ಟಾರ್‌ ಸಿನಿಮಾ ಅಥವಾ ನಿರೀಕ್ಷೆ ಹುಟ್ಟಿಸಿರುವ
ಸಿನಿಮಾ ಇಲ್ಲದಿರುವುದರಿಂದ ಹೊಸಬರಿಗೆ ಲಾಭವಾಗಲಿದೆ. ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಬೇಕೆಂದು ಕನಸು ಕಂಡಿರುವ ಚಿತ್ರತಂಡಕ್ಕೆ ಥಿಯೇಟರ್‌ ಸಿಗುವ ಜೊತೆಗೆ ಸಿನಿಮಾ ಪಿಕ್‌ಅಪ್‌ ಆಗುವವರೆಗೆ ಥಿಯೇಟರ್‌ನಲ್ಲಿ ಉಳಿಸಿಕೊಳ್ಳಲು
ಅವಕಾಶವೂ ಸಿಗಬಹುದು. ಸಿನಿಮಾ ಒಂಚೂರು ಚೆನ್ನಾಗಿದೆ ಎಂಬ ಮಾತು ಕೇಳಿಬಂದರೆ ಪ್ರೇಕ್ಷಕ ಕೂಡಾ ಥಿಯೇಟರ್‌ನತ್ತ
ಬರಬಹುದು. ಏಕೆಂದರೆ ಕೆಲವೊಮ್ಮೆ ಹೊಸಬರ ಸಿನಿಮಾ ಚೆನ್ನಾಗಿದ್ದರೆ ಪಕ್ಕದಲ್ಲಿ ಸ್ಟಾರ್‌ ಸಿನಿಮಾ ಇದ್ದರೆ ಮೊದಲ ಆದ್ಯತೆ
ಸ್ಟಾರ್‌ ಸಿನಿಮಾಕ್ಕಿರುತ್ತದೆ. ಆದರೆ, ಈ ಬಾರಿ ಸ್ಟಾರ್‌ ಅಪ್ಶನ್‌ ಇಲ್ಲದಿರುವುದರಿಂದ ಹೊಸಬರಿಗೆ ಪ್ಲಸ್‌ ಆಗುವುದರಲ್ಲಿ ಎರಡು ಮಾತಿಲ್ಲ. ಈ ತರಹದ ಸುಗಮ ಹಾದಿ ಮುಂದೆ ಅನಿರೀಕ್ಷಿತ ಗೆಲುವಿಗೂ ಕಾರಣವಾಗಬಹುದು.

ಹೊಸಬರು ವರ್ಸಸ್‌ ಹೊಸಬರು: ಸ್ಟಾರ್‌ ಸಿನಿಮಾ ಇಲ್ಲದಿರುವುದು ಹೊಸಬರಿಗೆ ಹೇಗೆ ಲಾಭವೋ, ಅದೇ ರೀತಿ ಸಣ್ಣದೊಂದು
ಅಪಾಯವೂ ಇದೆ. ಅದು ಬಿಡುಗಡೆಯ ಭರಾಟೆ ಮತ್ತು ಸ್ಪರ್ಧೆ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಲು ಎಲ್ಲಾ ತಂಡಗಳು 
ಮುಂದಾಗುತ್ತವೆ. ಅದರ ಪರಿಣಾಮವಾಗಿ ವಾರ ವಾರ ಸಿನಿಮಾ ಬಿಡುಗಡೆ ಹೆಚ್ಚುತ್ತದೆ. ನೀವೇ ಗಮನಿಸಿದರೆ ವಾರವೊಂದಕ್ಕೆ ಏಳೆಂಟು ಸಿನಿಮಾಗಳು ಬಿಡುಗಡೆಯಾದ ಉದಾಹರಣೆ ಇವೆ. ಸ್ಟಾರ್‌ ಸಿನಿಮಾ ಇಲ್ಲದಿರುವುದರಿಂದ ಸಹಜವಾಗಿಯೇ ಹೊಸಬರ ಸಿನಿಮಾಗಳ ಬಿಡುಗಡೆ ಭರಾಟೆ ಜೋರಾಗುತ್ತದೆ. ಈ ಮೂಲಕ ಹೊಸಬರ ನಡುವೆಯೇ ಸ್ಪರ್ಧೆ ಏರ್ಪಡಬಹುದು. ವಾರಕ್ಕೆ ಐದಾರು
ಸಿನಿಮಾಗಳು ಬಿಡುಗಡೆಯಾದರೆ ಮತ್ತೆ ಅದರಿಂದ ನಷ್ಟ ಹೊಸಬರಿಗೆ ಹೊರತು ಇನ್ಯಾರಿಗೂ ಅಲ್ಲ. ಒಂದೊಂದು ವಾರದ ಮಟ್ಟಿಗೆ ಥಿಯೇಟರ್‌ ಸಿಗಬಹುದು. ಆಗ ಮತ್ತೆ “ಸಿನಿಮಾ ಚೆನ್ನಾಗಿತ್ತು, ಆದ್ರೆ ಥಿಯೇಟರ್‌ನಿಂದ ತೆಗೆದುಬಿಟ್ರಾ’ ಎಂದು ಗೋಳಾಡುವ ಸರದಿ ಹೊಸಬರದ್ದಾಗುತ್ತದೆ. 

Advertisement

ಸಾಲು ಸಾಲು ಸಿನಿಮಾಗಳು
ಹೊಸಬರ ಸಾಲು ಸಾಲು ಸಿನಿಮಾಗಳು ಬಿಡುಗಡೆಯ ಹಂತದಲ್ಲಿವೆ. ಒಂದಷ್ಟು ಸಿನಿಮಾಗಳು ಚಿತ್ರೀಕರಣ ಮುಗಿಸಿಕೊಂಡು ಕಾಯುತ್ತಿದ್ದರೆ, ಇನ್ನೊಂದಿಷ್ಟು ಚಿತ್ರಗಳು ವಿವಿಧ ಹಂತದಲ್ಲಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿವೆ. ಆರೋಹಣ, ಹನಿಗಳು, ಅಂಧಗಾರ, ಡೇಸ್‌ ಆಫ್ ಬೋರಾಪುರ, ಹೀಗೊಂದು ದಿನ, ಫೇಸ್‌ ಟು ಫೇಸ್‌, ಗೋಸಿಗ್ಯಾಂಗ್‌, ಗುಳುr, ಇರುವುದೆಲ್ಲವ ಬಿಟ್ಟು, ಜೀವಾತ್ಮ, ಲೌಡ್‌ ಸ್ಪೀಕರ್‌, ಮುಕ್ತಿ, ಮೈಲಾಪುರ, ನಾವೇ ಭಾಗ್ಯವಂತರು, ನೀನೇ ಸಾಕಿದ ಗಿಣಿ, ಎಡಕಲ್ಲು ಗುಡ್ಡದ ಮೇಲೆ, ಪ್ರಯಾಣಿಕರ ಗಮನಕ್ಕೆ, ಗಡ್ಡಪ್ಪನ್‌ ದುನಿಯಾ, ಘರ್ಜನೆ, ಜನ್‌ಧನ್‌, ವಜ್ರಮುಖೀ, ಹೌಲಾ ಹೌಲಾ, ಕಡೆಮನೆ ಸೇರಿದಂತೆ ಅನೇಕ
ಸಿನಿಮಾಗಳು ತಯಾರಾಗಿದ್ದು, ಬಿಡುಗಡೆಯ ಹಾದಿಯಲ್ಲಿವೆ. ಕುರುಕ್ಷೇತ್ರದತ್ತ ದೃಷ್ಟಿ ಸದ್ಯಕ್ಕೆ ಬಿಡುಗಡೆಗೆ ಸಿದ್ಧವಾಗಿರುವ ದೊಡ್ಡ ಚಿತ್ರವೆಂದು ಕಾಣುತ್ತಿರೋದು “ಕುರುಕ್ಷೇತ್ರ’ವೊಂದೇ. ಅದ್ದೂರಿ ಬಜೆಟ್‌ನ ಹಾಗೂ ಬಹುತಾರಾಗಣದ ಈ ಚಿತ್ರದಲ್ಲಿ ದರ್ಶನ್‌ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ನಟಿಸಿದ್ದಾರೆ. ಮುಹೂರ್ತ ದಿನ ನಿರ್ಮಾಪಕ ಮುನಿರತ್ನ ಅವರು ಹೇಳಿದಂತೆ ಚಿತ್ರವನ್ನು ಮಾರ್ಚ್‌ನಲ್ಲಿ ಬಿಡುಗಡೆ ಮಾಡಲು ಆಲೋಚಿಸಿದ್ದರು. ಆದರೆ, ಚಿತ್ರದ ಗ್ರಾಫಿಕ್‌ ಕೆಲಸ ಹೆಚ್ಚಿದ್ದರಿಂದ ಈಗ ಬಿಡುಗಡೆ ಮುಂದಕ್ಕೆ ಹೋಗಿದೆ. ಯಾವಾಗ ಬಿಡುಗಡೆಯಾಗುತ್ತದೆಂಬ ಬಗ್ಗೆ ಇನ್ನೂ ನಿಖರತೆಯಿಲ್ಲ. ಗಾಂಧಿನಗರದ ಮೂಲಗಳ ಪ್ರಕಾರ, 
ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಚಿತ್ರ ಬಿಡುಗಡೆಯಾಗಲಿದೆ.

ಮೊದಲೇ ಹೇಳಿದಂತೆ ಸ್ಟಾರ್‌ ನಟರೆನಿಸಿಕೊಂಡಿರುವವರ ಸಿನಿಮಾಗಳು ಸದ್ಯ ಚಿತ್ರೀಕರಣ ಹಂತದಲ್ಲಿವೆ. ಚಿತ್ರೀಕರಣ ಹಾಗೂ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಮುಗಿಸಿ ಬಿಡುಗಡೆಯಾಗಲು ಇನ್ನೂ ಸಾಕಷ್ಟು ತಿಂಗಳುಗಳು ಬೇಕು. ಯಾವ್ಯಾವ ನಟರ
ಸಿನಿಮಾಗಳು ಯಾವ್ಯಾವ ಹಂತದಲ್ಲಿವೆ ಎಂದು ನೋಡುವುದಾದರೆ …

ಪುನೀತ್‌:
ಒಪ್ಪಿಕೊಂಡಿರುವ ಮೂರು ಚಿತ್ರಗಳ ಪೈಕಿ “ನಟ ಸಾರ್ವಭೌಮ’ನ ಚಿತ್ರೀಕರಣ ಈಗಷ್ಟೇ ಶುರುವಾಗಿದೆ.
ಸುದೀಪ್‌: ಸುದೀಪ್‌ ಅಭಿನಯದ ಎರಡು ಚಿತ್ರಗಳು  ಮುಹೂರ್ತವಾಗಿದ್ದು, “ದಿ ವಿಲನ್‌’ ಹಾಗೂ “ಅಂಬಿ ನಿಂಗೆ ವಯಸ್ಸಾಯೊ¤à’ ಚಿತ್ರೀಕರಣ ಹಂತದಲ್ಲಿವೆ.
ದರ್ಶನ್‌: ದರ್ಶನ್‌ ಅವರ “ಕುರುಕ್ಷೇತ್ರ’ ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿದ್ದು, ಮತ್ತೂಂದು ಚಿತ್ರ “ಯಜಮಾನ’
ಚಿತ್ರೀಕರಣದಲ್ಲಿದೆ.
ಯಶ್‌: ಯಶ್‌ “ಕೆಜಿಎಫ್’ ಚಿತ್ರದ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದೆ. 
ಶಿವರಾಜಕುಮಾರ್‌: ಶಿವರಾಜಕುಮಾರ್‌ ಅವರ “ದಿ ವಿಲನ್‌’ ಮತ್ತು “ಕವಚ’ ಚಿತ್ರೀಕರಣದಲ್ಲಿದ್ದು, ಅವರು ಒಪ್ಪಿಕೊಂಡುರುವ ಇತರ ಚಿತ್ರಗಳು ಇನ್ನಷ್ಟೇ ಶುರುವಾಗಬೇಕಿದೆ.
ಮುರಳಿ: ಮುರುಳಿ ಯುಗಾದಿಗೆ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದು, ಚಿತ್ರೀಕರಣ ಶುರುವಾಗಬೇಕಿದೆ.
ಗಣೇಶ್‌: ಗಣೇಶ್‌ ನಟನೆಯ “ಆರೆಂಜ್‌’ ಚಿತ್ರೀಕರಣದಲ್ಲಿದೆ. 
ಮುರಳಿ: ಮುರುಳಿ ಯುಗಾದಿಗೆ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದು, ಚಿತ್ರೀಕರಣ ಶುರುವಾಗಬೇಕಿದೆ.
ಗಣೇಶ್‌: ಗಣೇಶ್‌ ನಟನೆಯ “ಆರೆಂಜ್‌’ ಚಿತ್ರೀಕರಣದಲ್ಲಿದೆ. 
ರಕ್ಷಿತ್‌ ಶೆಟ್ಟಿ: ರಕ್ಷಿತ್‌ ಶೆಟ್ಟಿ ಅವರ “ಅವನೇ ಶ್ರೀಮನ್ನಾರಾಯಣ’  ಚಿತ್ರೀಕರಣ ಈಗಷ್ಟೇ ಪ್ರಾರಂಭವಾಗಿದೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next