Advertisement

ಕೋವಿಡ್ ಪಾಸಿಟಿವ್ ಸಂಖ್ಯೆ ಹೆಚ್ಚಳ ಮಧ್ಯೆ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಜನಜಂಗುಳಿ!

09:45 AM May 04, 2021 | Team Udayavani |

ಗಂಗಾವತಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ನಿತ್ಯವೂ ಹೆಚ್ಚಾಗುತ್ತಿದ್ದರೂ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ನಿತ್ಯ ಬೆಳಗಿನ 6-10 ಗಂಟೆ ಸಮಯದಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಜನಜಂಗುಳಿ ಕಂಡು ಬರುತ್ತಿದೆ.

Advertisement

ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಜನರು ಅನಗತ್ಯವಾಗಿ ಅಲ್ಲಲ್ಲಿ ಕುಳಿತು ಕೊಳ್ಳುವುದು, ಮದುವೆ, ಹಬ್ಬ ಹರಿದಿನ ಎಂದು ಖರೀದಿಗೆ ನಗರಕ್ಕೆ ಆಗಮಿಸುತ್ತಿದ್ದಾರೆ. ಕೆಲವು ವ್ಯಾಪಾರಿಗಳು ಅಂಗಡಿಗಳ ಶಟರ್ ಹಾಕಿಕೊಂಡು ಭರ್ಜರಿ ವ್ಯಾಪಾರ ಮಾಡುತ್ತಿರುವುದು ಕಂಡು ಬರುತ್ತಿದೆ.

ಇದನ್ನೂ ಓದಿ:27 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ ಬಿಲ್ ಗೇಟ್ಸ್- ಮೆಲಿಂಡಾ ಗೇಟ್ಸ್

ಕೆಲ ವ್ಯಾಪಾರಿಗಳು ಮನೆಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ತರಕಾರಿ ಹಣ್ಣು ಹಂಪಲು ಮಾರಾಟಕ್ಕೆ ಅವಕಾಶ ನೀಡಿದ್ದರೂ ವ್ಯಾಪಾರಿಗಳು ಮನೆಮನೆಗೆ ತೆರಳಿ ವ್ಯಾಪಾರ ಮಾಡದೇ ಒಂದೇ ಕಡೆ‌‌ ನಿಲ್ಲುವುದರಿಂದ ಜನಜಂಗುಳಿ ಉಂಟಾಗುತ್ತಿದೆ.

Advertisement

ಸಾಮಾಜಿಕ ಅಂತರ‌ ಮರೆತ ಜನರು: ಕರ್ಪ್ಯೂ ಹಿನ್ನೆಲೆಯಲ್ಲಿ ಬೆಳ್ಳಿಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು ಜನರು ಮಾತ್ರ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸಿ,ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಮಾಸ್ಕ್ ಧರಿಸದೇ ನಗರದಲ್ಲಿ ಸಂಚಾರ ಮಾಡುತ್ತಿದ್ದಾರೆ. ಅಂಗಡಿಯವರು ನಾಮಕಾವಸ್ತೆಗಾಗಿ ಸ್ಯಾನಿಟೈಜರ್ ಇಟ್ಟಿದ್ದು ಹಚ್ಚಿಕೊಳ್ಳುವಂತೆ ಕಡ್ಡಾಯವಾಗಿ ಗ್ರಾಹಕರಿಗೆ ಹೇಳುತ್ತಿಲ್ಲ. ಮಾಸ್ಕ್ ಧರಿಸದೆ ಸಂಚಾರ ಮಾಡುವವರಿಗೆ‌ ನಗರಸಭೆ ಮತ್ತು ಪೊಲೀಸರು ದಂಡ ಹಾಕುತ್ತಿಲ್ಲ. ಬೈಕ್ ಸವಾರರನ್ನು ಮಾತ್ರ ಹಿಡಿದು ದಂಡ ಹಾಕುವ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಮೂಲಕ ಸೋಂಕು ಹರಡುವುದನ್ನು ತಡೆಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next