ಟೋಕ್ಯೋ : “ಕಚೇರಿ ಕೆಲಸದಲ್ಲಿ ತೊಡಗಿದ್ದಾಗ ಯಾರೂ ಧೂಮಪಾನ ಮಾಡುವಂತಿಲ್ಲ. ಮನೆಯಿಂದಲೇ ಕೆಲಸ ಮಾಡುತ್ತಿದ್ದರೂ ಈ ನಿಯಮ ಅನ್ವಯ…’
ಹೀಗೆಂದು ತನ್ನ ನೌಕರರಿಗೆ ಜಪಾನ್‌ನ ನೊಮುರಾ ಹೋಲ್ಡಿಂಗ್ಸ್ ಕಂಪನಿಯು ಆದೇಶ ಹೊರಡಿಸಿದೆ. ಅಕ್ಟೋಬರ್‌ನಿಂದ ಈ ನಿಯಮ ಜಾರಿಯಾಗಲಿದೆ. ಡಿಸೆಂಬರ್ ಅಂತ್ಯದ ವೇಳೆಗೆ ನೊಮುರಾ ಗ್ರೂಪ್ ನಿರ್ವಹಿಸುತ್ತಿರುವ ಎಲ್ಲ ಸ್ಮೋಕಿಂಗ್ ರೂಂಗಳನ್ನು ಮುಚ್ಚಲು ಕಂಪನಿ ಮುಂದಾಗಿದೆ.
ಉತ್ತಮ ಕೆಲಸದ ವಾತಾವರಣ ನಿರ್ಮಾಣ, ಸೆಕೆಂಡ್‌ಹ್ಯಾಂಡ್ ಸ್ಮೋಕಿಂಗ್‌ಗೆ ಕಡಿವಾಣ ಹಾಕುವುದು ಮತ್ತು ಉದ್ಯೋಗಿಯ ಆರೋಗ್ಯ ರಕ್ಷಣೆಯೇ ನಮ್ಮ ಉದ್ದೇಶ ಎಂದು ಕಂಪನಿ ಹೇಳಿದೆ. ಹಾಗಂತ, ಮನೆಗಳಿಂದ ಕೆಲಸ ಮಾಡುತ್ತಿರುವ ನೌಕರರು ಈ ಮಾರ್ಗಸೂಚಿಯನ್ನು ಪಾಲಿಸುತ್ತಾರೋ, ಇಲ್ಲವೋ ಎಂಬುದನ್ನು ನಾವು ಪರೀಕ್ಷಿಸಲು ಹೋಗುವುದಿಲ್ಲ. ಬದಲಿಗೆ, ಈ ಎಲ್ಲ ನಿಯಮಗಳೂ ಪರಸ್ಪರ ವಿಶ್ವಾಸವನ್ನು ಆಧರಿಸಿದೆ ಎಂದು ಕಂಪನಿ ವಕ್ತಾರ ಯೋಶಿಟಾಕಾ ಒಟ್ಸು ಹೇಳಿದ್ದಾರೆ.
ಇದನ್ನೂ ಓದಿ :ರೈತರ ಆದಾಯ ಹೆಚ್ಚಳಕ್ಕಾಗಿ ಉದ್ದಿಮೆದಾರರ-ತಜ್ಞರ ಸಭೆ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಮನೆಗಳಲ್ಲಿ “ಧೂಮಪಾನ ನಿಷೇಧದ’ ನಿಯಮ ಇಲ್ಲದ ಕಾರಣ, ವರ್ಕ್ ಫ್ರಂ ಹೋಂ ವೇಳೆ ನಮ್ಮ ಧೂಮಪಾನದ ಚಟ ಹೆಚ್ಚಾಗಿದೆ ಎಂದು ಇತ್ತೀಚೆಗೆ ನಡೆದ ಸಮೀಕ್ಷೆ ವೇಳೆ ಜಪಾನ್‌ನ ಅನೇಕ ಉದ್ಯೋಗಿಗಳು ಹೇಳಿಕೊಂಡಿದ್ದರು.