Advertisement

ಇನ್ನೂ ಪತ್ತೆಯಾಗದ ಡೇರಾ ಮುಖ್ಯಸ್ಥನ ದತ್ತು ಪುತ್ರಿ, ಆದಿತ್ಯ

03:30 PM Sep 06, 2017 | Team Udayavani |

ಚಂಡೀಗಢ : ಜೈಲುಪಾಲಾಗಿರುವ ಡೇರಾ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌ ನ ತಲೆಮರೆಸಿಕೊಂಡಿರುವ ದತ್ತು ಪುತ್ರಿ ಹನಿಪ್ರೀತ್‌ ಇನ್ಸಾನ್‌ ಮತ್ತು ಆದಿತ್ಯ ಇನ್ಸಾನ್‌ ಇನ್ನೂ ಪೊಲೀಸರಿಗೆ ಪತ್ತೆಯಾಗಿಲ್ಲ. 

Advertisement

ಇವರಿಬ್ಬರನ್ನು ಪತ್ತೆ ಹಚ್ಚಿ ಬಂಧಿಸುವ ಸಲುವಾಗಿ ಪೊಲೀಸರು ಮುಂಬಯಿ ಮತ್ತು ನೇಪಾಲ ಸಮಿಪದ ಪ್ರದೇಶಗಳಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ. 

“ಹನಿಪ್ರೀತ್‌ ಮತ್ತು ಆದಿತ್ಯಅವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ನಾವು ನೆರೆಯ ರಾಜ್ಯಗಳೊಂದಿಗೆ ಸಂಪರ್ಕದಲ್ಲಿದ್ದೇವೆ; ಬೇಗನೆ ಅವರನ್ನು ಸೆರೆ ಹಿಡಿಯುವ ವಿಶ್ವಾಸ ನಮಗಿದೆ’ ಎಂದು ಪೊಲೀಸ್‌ ಮಹಾ ನಿರ್ದೇಶಕ ಬಿ ಎಸ್‌ ಸಂಧು ಹೇಳಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next