ಮಂಡ್ಯ: ರೈತರಿಗೆ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಪೂರೈಸಲಾಗುತ್ತಿದ್ದು ಯಾವುದೇ ಕೊರತೆ ಇಲ್ಲ ಎಂದು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಮದ್ದೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರಸಗೊಬ್ಬರ ತೊಂದರೆ ಇಲ್ಲ. ಈ ವಿಚಾರವಾಗಿ ಕೃಷಿ ಸಚಿವ ಬಿಸಿ ಪಾಟೀಲ್ ಗೆ ತಿಳಿಸಿದ್ದೇನೆ. ಎಲ್ಲ ಗೋಡನ್ ಗಳಲ್ಲಿ ರಸಗೊಬ್ಬರ ಸಂಗ್ರಹವಿದೆ. ಆದರೂ ಬ್ಲಾಕ್ ಮಾಡ್ತಿದ್ದಾರೆ. ಆದ್ದರಿಂದ ದಾಳಿ ಮಾಡಿ ಎಂದು ಕೃ಼ಷಿ ಸಚಿವರಿಗೆ ತಿಳಿಸಿದ್ದೇನೆ ಎಂದರು.
ಕರ್ನಾಟಕದಲ್ಲಿ ಸುಮಾರು 148 ಲೈಸನ್ಸ್ ರದ್ದು ಮಾಡಿದ್ದೇವೆ. ಗೋಡನ್ ಫುಲ್ ಇದ್ರೂ, ಹೊರಗಡೆ ನೋ ಸ್ಟಾಕ್ ಬೋರ್ಡ್ ಹಾಕುತ್ತಿದ್ದಾರೆ. ಅಧಿಕಾರಿಗಳು ಮತ್ತು ಮಾಲೀಕರು ಸೇರಿ ಈ ಅಕ್ರಮ ಮಾಡಿದ್ದಾರೆ. ಮೊನ್ನೆ ಎಲ್ಲಾ ಕ್ಲೀಯರ್ ಮಾಡಲಾಗಿದೆ ಎಂದರು.
ಇದನ್ನೂ ಓದಿ:ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ: ರೈತ ಸಂಪರ್ಕ ಕೇಂದ್ರದೆದುರು ಕಲ್ಲು ಹೊತ್ತು ಪ್ರತಿಭಟನೆ
ರಾಜ್ಯ ಸರ್ಕಾರ ಮಾಸ್ಕ್ ದಂಡದ ಧರ ಇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜನರ ನೀರಿಕ್ಷೇಗೆ ಅನುಗುಣವಾಗಿ ಆಡಳಿತ ಮಾಡಲಾಗುತ್ತಿದೆ. ನಾವೇ ನೆಡೆದಿದ್ದೇ ದಾರಿ ಅಂತ ನಮ್ಮ ಸರ್ಕಾರ ಆಲೋಚನೆ ಮಾಡಿಲ್ಲ. ಪ್ರಾಥಮಿಕ ಹಂತದಲ್ಲಿ ಕೊರೊನಾ ಸೋಂಕು ನಿಯಂತ್ರಣ ಮಾಡಲು ಸ್ವಲ್ಪ ಪ್ರಬಲವಾದ ಆಸ್ತ್ರ ಪ್ರಯೋಗ ಮಾಡಲು ಆಲೋಚನೆ ಮಾಡಲಾಗಿತ್ತು. ಜನರು ಹೇಳಿದ್ರು, ಇದು ಜಾಸ್ತಿ ಆಯ್ತು ಕಡಿಮೆ ಮಾಡಿ ಅಂತಾ. ಅದಕ್ಕೆ ಜನರ ಆದೇಶದ ಪ್ರಕಾರವೇ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ರಾಜರಾಜೇಶ್ವರಿ ನಗರ ಉಪಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿ, ಇಬ್ಬರ ಹೆಸರನ್ನ ಆಯ್ಕೆ ಮಾಡಿ ಹೈಕಮಾಂಡ್ ಗೆ ಕಳಿಸಿದ್ದೇವೆ. ಕೇಂದ್ರದವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.