Advertisement

ಲಸಿಕೆ ಸುರಕ್ಷಿತ, ಸಂತಾನೋತ್ಪತ್ತಿಗೆ ಯಾವುದೇ ಸಮಸ್ಯೆ ಇಲ್ಲ : ಕೇಂದ್ರ ಆರೋಗ್ಯ ಸಚಿವಾಲಯ

09:00 PM Jun 30, 2021 | Team Udayavani |

ನವ ದೆಹಲಿ  : ಕೋವಿಡ್ ಲಸಿಕೆಯನ್ನು ಪಡೆದರೇ, ಸಂತಾನೋತ್ಪತ್ತಿಗೆ ಸಮಸ್ಯೆಯಾಗುತ್ತದೆ ಎಂಬ ಊಹಾಪೋಹಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲಎಂದು ಹೇಳಿದೆ.

Advertisement

ಲಸಿಕೆ ಪಡೆಯುವುದರಿಮದ ಯಾವುದೇ ರೀತಿಯಲ್ಲಿ ಸಮಸ್ಯೆಗಳು ಆಗುವುದಿಲ್ಲ. ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿವೆ ಎಂದು ಸ್ಪಷ್ಟಪಡಿಸಿದೆ.

ಇನ್ನು, ಎದೆ ಹಾಲುಣಿಸುವ ಮಹಿಳೆಯರೂ ಕೂಡ ಲಸಿಕೆಯನ್ನು ಯಾವುದೇ ಭೀತಿ ಇಲ್ಲದೇ ಪಡೆದುಕೊಳ್ಳಬಹುದೆಂದು ಕೋವಿಡ್‌–19 ಲಸಿಕೆಗೆ ಸಂಬಂಧಿಸಿದ ರಾಷ್ಟ್ರೀಯ ತಜ್ಞರ ತಂಡ (ಎನ್‌ ಇ ಜಿ ವಿ ಎ ಸಿ) ಶಿಫಾರಸು ಮಾಡಿದೆ.

ಇದನ್ನೂ ಓದಿ : 6 ತಿಂಗಳಲ್ಲಿ 1,242 ಸಹಾಯಕ ಪ್ರಾಧ್ಯಾಪಕರು, 310 ಪ್ರಾಂಶುಪಾಲರ ನೇರ ನೇಮಕ : ಅಶ್ವತ್ಥನಾರಾಯಣ

ಸಂತಾನೋತ್ಪತ್ತಿಗೆ ಸಮಸ್ಯೆಯಾಗುತ್ತದೆ ಎಂಬ ವರದಿಗಳು ಕೆಲವು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಿಗೆ ಆರೋಗ್ಯ ಸಚಿವಾಲಯ ಈ ಸ್ಪಷ್ಟಪಡಿಸಿದೆ.

Advertisement

ಇನ್ನು,  ಲಸಿಕೆ ಹಾಕಿಸಿಕೊಳ್ಳುವುದರಿಂದ ಸಂತಾನೋತ್ಪತ್ತಿಗೆ ಸಮಸ್ಯೆಗೆ ಕಾರಣವಾಗುತ್ತದೆ ಎನ್ನುವುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ ಎಂಬ ವಿಚಾರವನ್ನು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕೃತ ವೆಬ್‌ ಸೈಟ್‌ ನಲ್ಲಿನ ಪ್ರಶ್ನೋತ್ತರದಲ್ಲೂ ತಿಳಿಸಲಾಗಿದ್ದು, ಎಲ್ಲಾ ಕೋವಿಡ್ ಲಸಿಕೆಗಳನ್ನು ಮೊದಲು ಪ್ರಾಣಿಗಳ ಮೇಲೆ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಿದ ಮೇಲೆ ಮನುಷ್ಯರ ಮೇಲೆ ಪರೀಕ್ಷೆ ನಡೆಸಲಾಗಿದೆ. ಲಸಿಕೆಯಿಂದ ಯಾವುದಾದರೂ ಅಡ್ಡಪರಿಣಾಮಗಳು ಬೀರುತ್ತವೆಯೇ ಎನ್ನುವುದನ್ನು ಕೂಡ ಅಧ್ಯಯನ ಮಾಡಲಾಗಿದೆ. ಲಸಿಕೆ ಸುರಕ್ಷಿತವಾಗಿದೆ ಎನ್ನುವುದನ್ನು ಸಾಬೀತುಪಡಿಸಿದ ಬಳಿಕವೇ ಬಳಸಲು ಅಧಿಕೃತ ಒಪ್ಪಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ : ಮಂಡ್ಯ : ಕಟುಕರ ಕೈಯಿಂದ ರಕ್ಷಿಸಲ್ಪಟ್ಟ 11 ಒಂಟೆಗಳು ಮರಳಿ ರಾಜಸ್ಥಾನಕ್ಕೆ ವಾಪಾಸ್

Advertisement

Udayavani is now on Telegram. Click here to join our channel and stay updated with the latest news.

Next