Advertisement

ಇನ್ನೆರಡು ತಿಂಗಳು ಮರಳುಗಾರಿಕೆ ಇಲ್ಲ

10:30 PM May 27, 2021 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಿಆರ್‌ಝಡ್‌ ಹಾಗೂ ನಾನ್‌ ಸಿಆರ್‌ಝಡ್‌ ವಲಯದಲ್ಲಿ ಜೂ. 1ರಿಂದ‌ ಜುಲೈ 31ರ ವರೆಗೆ ಮರಳುಗಾರಿಕೆ ನಿಷೇಧಗೊಳ್ಳಲಿದ್ದು, ಮರಳು ತೆಗೆಯುವ ಕಾರ್ಯ ಸಂಪೂರ್ಣ ಸ್ಥಗಿತಗೊಳ್ಳಲಿದೆ.

Advertisement

ಹಾಲಿ ಅವಧಿಯ ನವೆಂಬರ್‌ನಿಂದ ಮೇ 10ರ ವರೆಗೆ ಸಿಆರ್‌ಝಡ್‌ ಹಾಗೂ ನಾನ್‌ಸಿಆರ್‌ಝಡ್‌ ವಲಯಗಳಲ್ಲಿ ಒಟ್ಟು 3,93,539 ಮೆಟ್ರಿಕ್‌ ಟನ್‌ ಮರಳು ತೆರವುಗೊಳಿಸಲಾಗಿದೆ. ಉಡುಪಿ ಜಿಲ್ಲೆಯ ಸಿಆರ್‌ಝಡ್‌ ವಲಯದಲ್ಲಿ ಒಟ್ಟು 4.55 ಲ.ಮೆ.ಟನ್‌ ಮರಳು ತೆಗೆಯಲಾಗಿದೆ.

ಸಿಆರ್‌ಝಡ್‌ನ‌ಲ್ಲಿ ಮರಳು ತೆರವಿಗೆ ನೀಡಿರುವ ಪರವಾನಿಗೆ ಸೆಪ್ಟಂಬರ್‌ ವರೆಗೆ ಇರುವುದರಿಂದ ಆಗಸ್ಟ್‌ 1ರಿಂದ ಸೆಪ್ಟಂಬರ್‌ ಕೊನೆಯ ವರೆಗೆ ಮರಳು ತೆಗೆಯಬಹುದಾಗಿದೆ. ಬಳಿಕ ಹೊಸದಾಗಿ ಬೆಥಮೆಟ್ರಿಕ್‌ ಸರ್ವೇ, ಮರಳು ದಿಬ್ಬಗಳ ಗುರುತಿಸುವಿಕೆ, ಪರಿಸರ ಇಲಾಖೆಯ ಅನುಮತಿ ಇತ್ಯಾದಿ ಪ್ರಕ್ರಿಯೆಗಳು ನಡೆಯಬೇಕು.

ಮರಳು ತೆರವು :

ದ.ಕ. ಜಿಲ್ಲೆಯ ಸಿಆರ್‌ಝಡ್‌ನ‌ಲ್ಲಿ ಮೇ 10ರ ವರೆಗೆ 2,26,852 ಮೆಟ್ರಿಕ್‌ ಟನ್‌ ಮರಳು ತೆರವುಗೊಳಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ 4,55,000 ಮೆಟ್ರಿಕ್‌ ಟನ್‌ ಮರಳು ತೆರವುಗೊಳಿಸಲಾಗಿದೆ. 2019ರ ಡಿ. 26ಕ್ಕೆ ಕೊನೆಗೊಂಡಿದ್ದ ಮರಳುಗಾರಿಕೆ 11 ತಿಂಗಳುಗಳ ಬಳಿಕ 2020ರ ನವೆಂಬರ್‌ನಲ್ಲಿ ಮರು ಆರಂಭಗೊಂಡಿತ್ತು. ಸಿಆರ್‌ಝಡ್‌ನೊಳಗೆ ಬರುವ ನೇತ್ರಾವತಿ ನದಿಯಲ್ಲಿ 8, ಗುರುಪುರ ನದಿಯಲ್ಲಿ 4 ಹಾಗೂ ಶಾಂಭವಿ ನದಿಯಲ್ಲಿ 1 ಬ್ಲಾಕ್‌ ಸೇರಿದಂತೆ 13 ಬ್ಲಾಕ್‌ಗಳಲ್ಲಿ (ದಿಬ್ಬ) ಈ ಬಾರಿ ಮರಳು ತೆರವಿಗೆ ಪರಿಸರ ಇಲಾಖೆಯಿಂದ ಅನುಮತಿ ಲಭಿಸಿ ಎರಡು ಹಂತಗಳಲ್ಲಿ 105 ಮಂದಿ ಗುತ್ತಿಗೆದಾರರಿಗೆ ಮರಳು ತೆಗೆಯಲು ಪರವಾನಿಗೆ ನೀಡಲಾಗಿತ್ತು.

Advertisement

ನಾನ್‌ ಸಿಆರ್‌ಝಡ್‌ನ‌ಲ್ಲಿ ಇ-ಟೆಂಡರ್‌ ಮೂಲಕ 16 ಬ್ಲಾಕ್‌ಗಳ ಗುತ್ತಿಗೆ ಮಂಜೂರು ಮಾಡಲಾಗಿದ್ದು, 1,66,684 ಮೆ.ಟನ್‌ ಮರಳು ತೆರವುಗೊಳಿಸಲಾಗಿದೆ.

ಕಾರ್ಮಿಕರ ಕೊರತೆ :

ಕೊರೊನಾ 2ನೇ ಅಲೆ ಮತ್ತು ಲಾಕ್‌ಡೌನ್‌ ಕಾರಣದಿಂದ ಕಾರ್ಮಿಕರ ಕೊರತೆ ಎದುರಾದ್ದರಿಂದ ಮರಳುಗಾರಿಕೆ ನಿರತ ಬಹುತೇಕ ದೋಣಿಗಳು ಈಗಾಗಲೇ ದಡಸೇರಿವೆ. ಕಾರ್ಮಿಕರಲ್ಲಿ ಬಹುಪಾಲು ಮಂದಿ ಬಿಹಾರ, ಝಾರ್ಖಂಡ್‌, ಉತ್ತರ ಪ್ರದೇಶ, ಒಡಿಶಾ ಹಾಗೂ ಪಶ್ಚಿಮ ಬಂಗಾಲ ಸೇರಿದಂತೆ ಉತ್ತರ ಭಾರತದವರಾಗಿದ್ದು ಊರಿಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಿರ್ಮಾಣ ಚಟುವಟಿಕೆಗಳು ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಮರಳು ಸಮಸ್ಯೆ ಉಂಟಾಗಿಲ್ಲ.

ಕರಾವಳಿಯಲ್ಲಿ ಮಳೆಗಾಲ ಹಾಗೂ ಮೀನುಗಳ ಸಂತಾನೋತ್ಪತ್ತಿ ಹಿನ್ನೆಲೆಯಲ್ಲಿ ಎರಡು ತಿಂಗಳು ಮರಳುಗಾರಿಕೆಗೆ ನಿಷೇಧವಿರುತ್ತದೆ. ಸಿಆರ್‌ಝಡ್‌ನ‌ಲ್ಲಿ ಆಗಸ್ಟ್‌ನಿಂದ ಮರಳಿ ಪ್ರಾರಂಭವಾಗಲಿದ್ದು ಪರವಾನಿಗೆ ಮುಕ್ತಾಯದ ವರೆಗೆ ಚಾಲನೆಯಲ್ಲಿರುತ್ತದೆ.ನಿರಂಜನ್‌, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು, ದ.ಕ,-ಸಂದೀಪ್‌, ಹಿರಿಯ ಭೂ ವಿಜ್ಞಾನಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next