ಬೆಂಗಳೂರು: ಕೊರೊನಾ ಆರ್ಥಿಕ ಸಂಕಷ್ಟದಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ಸಂಬಳವಾಗಿಲ್ಲ.
ಎಲ್ಲ ಸಚಿವರ ಸುಮಾರು 300 ಆಪ್ತ ಸಹಾಯಕರುಹಾಗೂ ಸಚಿವರ ಕಚೇರಿಯ ಸಿಬ್ಬಂದಿಗೆ ಕಳೆದ ಅಕ್ಟೋಬರ್ ನಿಂದ ಸಂಬಳವಾಗಿಲ್ಲ. ಈ ಕುರಿತು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಬಳಿ ಕೇಳಿದರೂ, ಅವರು ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವರ ಕಚೇರಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಸಿಬ್ಬಂದಿ ಹಾಗೂ ಆಪ್ತ ಸಹಾಯಕರು ಸಂಬಳವನ್ನೇ ನೆಚ್ಚಿಕೊಂಡಿದ್ದು, ಸರ್ಕಾರದ ಡಿಪಿಎಆರ್ ಹಾಗೂ ಆರ್ಥಿಕ ಇಲಾಖೆಗಳ ನಡುವಿನ ನಡುವಿನ ಸಮನ್ವಯ ಕೊರತೆಯಿಂದ ತಾವು ಸಂಕಷ್ಟ ಅನುಭವಿಸುವಂತಾಗಿದೆ.
ಇದನ್ನೂ ಓದಿ:ಲಂಚಕ್ಕೆ ಬೇಡಿಕೆ: ಕಾನ್ಸ್ ಸ್ಟೇಬಲ್, ಆರ್.ಐ ಎಸಿಬಿ ವಶಕ್ಕೆ! ಇನ್ಸ್‌ಪೆಕ್ಟರ್ ಪರಾರಿ
ಕೊರೊನಾ ಸಂದರ್ಭದಲ್ಲಿ ಎಲ್ಲ ಕಡೆಯೂ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದ್ದು, ಸರ್ಕಾರ ಆದಷ್ಟು ಬೇಗ ತಮ್ಮ ಸಂಬಳವನ್ನು ಬಿಡುಗಡೆ ಮಾಡುವಂತೆ ಆಪ್ತ ಸಹಾಯಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಸಾಲಿಮಠ ಮನವಿ ಮಾಡಿದ್ದಾರೆ.