Advertisement

ಸರ್ಕಾರಿ ಆಸ್ಪತ್ರೆ ಗುತ್ತಿಗೆ ನೌಕರರಿಗೆ ಸಿಗುತ್ತಿಲ್ಲ ಸಂಬಳ!

05:45 PM Sep 20, 2019 | Team Udayavani |

ಹುಳಿಯಾರು: ಹೋಬಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ತಾಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಸಿಬ್ಬಂದಿಗೆ ಏಳೆಂಟು ತಿಂಗಳಿಂದ ಸಂಬಳ ನೀಡದೇ ನಿರ್ಲಕ್ಷಿಸಲಾಗಿದೆ.

Advertisement

ಚಿಕ್ಕನಾಯಕನಹಳ್ಳಿ ಜನರಲ್‌ ಆಸ್ಪತ್ರೆ ಸೇರಿ ಜೆ.ಸಿ.ಪುರ, ಹುಳಿಯಾರು, ದಸೂಡಿ, ಯಳನಡು, ಹಂದನಕೆರೆ, ಮತಿಘಟ್ಟ, ಶೆಟ್ಟಿಕೆರೆ, ತೀರ್ಥ ಪುರ, ತಿಮ್ಮನಹಳ್ಳಿ, ಕಂದಿಕೆರೆ, ಗೋಡೆಕೆರೆ ಆಸ್ಪತ್ರೆಗಳಲ್ಲಿ ಗುತ್ತಿಗೆ ನೌಕರರು ಕೆಲಸ ನಿರ್ವ ಹಿಸುತ್ತಿದ್ದಾರೆ. ಚಿ.ನಾ.ಹಳ್ಳಿಯಲ್ಲಿ 6 ಹಾಗೂ ಹುಳಿಯಾರಿನಲ್ಲಿ 4 ಸಿಬ್ಬಂದಿ ಬಿಟ್ಟರೆ ಉಳಿದ ಆಸ್ಪತ್ರೆಯಲ್ಲಿ ಒಬ್ಬರು ಅಥವಾ ಇಬ್ಬರು ಕೆಲಸ ನಿರ್ವಹಿಸುತ್ತಿದ್ದು ಒಟ್ಟು 25 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

ಆರೋಗ್ಯ ಸೇವೆಯಲ್ಲಿ ವ್ಯತ್ಯಯ: ಕಳೆದ ವರ್ಷ ಟೋಟಲ್‌ ಸೆಲ್ಯೂಷನ್‌ನಿಂದ ತಾಲೂಕಿನ ಆಸ್ಪತ್ರೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೌಕರರ ನಿಯೋಜಿಸ ಲಾಗಿದ್ದು, ಜೂನ್‌ 2019ರಿಂದ ಕಿಯೋನಿಕ್ಸ್‌ ವತಿಯಿಂದ ಹೊರ ಗುತ್ತಿಗೆ ಆಧಾರದ ಮೇಲೆ ನೇಮಿಸಿ ಕೊಳ್ಳಲಾಗಿದೆ. ಇವರೆಲ್ಲರಿಗೂ ಕಿಯೋನಿಕ್ಸ್‌ 10ರಿಂದ 11 ಸಾವಿರ ರೂ. ಸಂಭಾವನೆ ಪ್ರತಿ ತಿಂಗಳ 5ನೇ ತಾರೀಕಿನೊಳಗೆ ಸಂಭಾವನೆ ಕೊಡುವುದಾಗಿಯೂ ಭರವಸೆ ನೀಡಿ ನೇಮಕ ಮಾಡಿಕೊಂಡಿದೆ. ಹಿಂದಿನ ಟೋಟಲ್‌ ಸೆಲ್ಯೂಷನ್‌ 5 ತಿಂಗಳು ವೇತನ ನೀಡದೆ ನಿರ್ಲಕ್ಷಿಸಿದ್ದರೆ, ಕಿಯೋನಿಕ್ಸ್‌ 3 ತಿಂಗಳಿಂದ ವೇತನ ನೀಡದೆ ಸತಾಯಿಸುತ್ತಿದೆ. ಹಾಗಾಗಿಯೇ ಕೆಲವರು ಕೆಲಸವನ್ನೇ ಬಿಟ್ಟಿದ್ದಾರೆ. ಇದರಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾದರೂ ಮೇಲಧಿ ಕಾರಿಗಳು, ಜನಪ್ರತಿನಿಧಿಗಳು ಕಂಡೂ ಕಾಣದಂತೆ

ಮೌನಕ್ಕೆ ಶರಣಾಗಿದ್ದಾರೆ.

ಸಂಬಳವಿಲ್ಲದೆ ಶೋಚನೀಯ ಸ್ಥಿತಿ: ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ದಿನನಿತ್ಯ ಆಸ್ಪತ್ರೆ ಸ್ವತ್ಛತೆ, ವೈದ್ಯರಿಗೆ ಸಕಾಲಕ್ಕೆ ಟೀ, ಕಾಫಿ, ಬಿಸ್ಕೇಟ್‌, ರೋಗಿಗಳ ಬಗ್ಗೆ ಕಾಳಜಿ, ಲ್ಯಾಬೋ ರೇಟರಿಯಲ್ಲಿ ಉತ್ಪತ್ತಿಯಾದ ತ್ಯಾಜ್ಯ, ರಕ್ತ ಪರೀಕ್ಷೆ ಮಾಡುವ ಸ್ಲೆ çಡ್‌ ತೊಳೆಯುವುದು, ಆಸ್ಪತ್ರೆಯಲ್ಲಿನ ಬೆಡ್‌ ಸ್ವತ್ಛವಾಗಿಡುವುದು, ನೆಲ ಒರೆಸುವುದು ಸೇರಿ ಹತ್ತು ಹಲವಾರು ಕೆಲಸಗಳಲ್ಲಿ ತೊಡಗಿಕೊಂಡವರ ಸ್ಥಿತಿ ಸಂಬಳವಿಲ್ಲದೆ ಶೋಚನೀಯವಾಗಿದೆ.

Advertisement

ಸಾಲ ಪಡೆಯುವ ದುಸ್ಥಿತಿ: ಈ ಕೆಲಸವನ್ನೇ ನೆಚ್ಚಿಕೊಂಡಿರುವ ನೌಕರರ ಪಾಡು ಹೇಳತೀರದಾಗಿದೆ. ಮಕ್ಕಳ ಶಾಲೆಯ ಶುಲ್ಕ, ಪೋಷಕರ ಔಷಧೋಪಚಾರ ಹಾಗೂ ತಿಂಗಳ ರೇಷನ್‌ ತರುವುದಕ್ಕೂ ಕಷ್ಟವಾಗಿ ಮತ್ತೂಬ್ಬರ ಬಳಿ ಕೈಯೊಡ್ಡುವ ದುಸ್ಥಿತಿ ನಿರ್ಮಾಣ ವಾಗಿದೆ. ಐದಾರು ತಿಂಗಳಿಂದ ಸಾಲ ಮಾಡಿ ಸಂಸಾರ ತೂಗಿಸಿದ್ದು, ಈಗ ಕೆಲವರು ಸಾಲ ಹಿಂದಿರುಗಿಸು ವಂತೆಯೂ, ಹೊಸದಾಗಿ ಮತ್ಯಾರೂ ಸಾಲ ಕೊಡದಂತೆಯೂ ಆಗಿದ್ದು, ನಮ್ಮ ಬಗ್ಗೆ ತಲೆಕೆಡಿಸಿ ಕೊಳ್ಳುವವರೇ ಇಲ್ಲದಂತಾಗಿದೆ ಎಂದು ಕೆಲ ನೌಕರರು ಅಳಲು ತೋಡಿಕೊಂಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next