Advertisement
ಕಟ್ಟೆಮಕ್ಕಿಯಿಂದ ಹೊಗೆಮನೆಗೆ ಸುಮಾರು 1 ಕಿ.ಮೀ.ಗೂ ಹೆಚ್ಚು ದೂರದ ಈ ರಸ್ತೆಗೆ 2 ದಶಕಗಳಿಂದಲೂ ಡಾಮರೀಕರಣವಾಗಬೇಕು ಎನ್ನುವ ಈ ಭಾಗದ ಜನರ ಬೇಡಿಕೆಯಿದೆ. ಸುಮಾರು 25 ವರ್ಷಗಳಿಂದಲೂ ಮಣ್ಣಿನ ರಸ್ತೆಯಾಗಿಯೇ ಇದ್ದರೂ, ಇಲ್ಲಿನ ಜನರ ಬಹು ಕಾಲದ ಬೇಡಿಕೆಗೆ ಮಾತ್ರ ಈವರೆಗೆ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಮನ್ನಣೆಯೇ ನೀಡಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.
ಸಾರ್ವಜನಿಕ ಸಾರಿಗೆ ಸಂಪರ್ಕ ಇಲ್ಲದ ಕಾರಣ ಈ ಭಾಗದ ಜನರು, ಮಕ್ಕಳು ನಡೆದುಕೊಂಡೇ ಹೋಗುವುದು ಹೆಚ್ಚು. ಮಳೆಗಾಲದಲ್ಲಿ ಮಣ್ಣಿನ ರಸ್ತೆಯಿಂದಾಗಿ ಚರಂಡಿಯೂ ಇಲ್ಲದ ಕಾರಣ ರಸ್ತೆಯಲ್ಲಿಯೇ ನೀರು ಹರಿದು ಕೆಸರುಮಯವಾಗಿದ್ದರೆ, ಬೇಸಿಗೆ ಕಾಲದಲ್ಲಿ ಧೂಳುಮಯ ವಾಗಿರುವುದರಿಂದ ದ್ವಿಚಕ್ರ, ರಿಕ್ಷಾ ಸೇರಿ ದಂತೆ ವಾಹನ ಸವಾರರು, ಪಾದಚಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
Related Articles
ಕಳೆದ 5-6 ವರ್ಷಗಳಿಂದಲೂ ಜನಪ್ರತಿನಿಧಿಗಳು ಈ ರಸ್ತೆಗೆ ಡಾಮರೀಕರಣಕ್ಕೆ ಅನುದಾನ ಮೀಸಲಿರಿಸಲಾಗಿದೆ ಎನ್ನುತ್ತಾರೆ. ಆದರೆ ಇದು ಕೇವಲ ಭರವಸೆಯಾಗಿಯೇ ಇದೆ. ಇನ್ನೂ ಈಡೇರುವ ಲಕ್ಷಣ ಮಾತ್ರ ಕಂಡು ಬಂದಿಲ್ಲ. ಶಂಕರನಾರಾಯಣ ಗ್ರಾ.ಪಂ., ಪ್ರತಿ ಗ್ರಾಮಸಭೆಯಲ್ಲಿಯೂ ಈ ವಿಚಾರವನ್ನು ಪ್ರಸ್ತಾಪಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಸ್ಥಳೀಯರು.
Advertisement