Advertisement

ಹೆದ್ದಾರಿಯಲ್ಲಿ ರಸ್ತೆ ವಿಭಜಕವಿಲ್ಲದ್ದಕ್ಕೆ ಸಂಕಷ್ಟ

02:48 PM Jan 04, 2021 | Team Udayavani |

ಮುಳಬಾಗಿಲು: ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರಾಷ್ಟ್ರೀಯ ಹೆದ್ದಾರಿ 75ರ ಆಂಧ್ರದ ಗಡಿ ರೇಖೆಯಲ್ಲಿ ಹೆದ್ದಾರಿ ಅಧಿಕಾರಿಗಳು ರಸ್ತೆ ವಿಭಜಕ ನಿರ್ಮಾಣ ಮಾಡದೇ ಇರುವುದರಿಂದ ಗಡಿ ಭಾಗದ ಎರಡೂ ಬದಿಯಲ್ಲಿನ 35-40 ಹಳ್ಳಿಗಳ ಜನರು ರಸ್ತೆ ದಾಟಲು 2 ಕಿ.ಮೀ. ದೂರದ ಆಂಧ್ರದ ಹಾಲುಕುಪ್ಪಕ್ಕೆ ಹೋಗಿ ಸುತ್ತಿಕೊಂಡು ಬರ ಬೇಕಾಗಿದೆ.

Advertisement

ತಾಲೂಕಿನಲ್ಲಿ ಹಾದು ಹೋಗಿರುವ ಹೆದ್ದಾರಿಯನ್ನುಕೇಂದ್ರ ಸರ್ಕಾರ ಮೇಲ್ದರ್ಜೆಗೇರಿಸಲು ಉದ್ದೇಶಿಸಿಹೆದ್ದಾರಿ ಅಭಿವೃದ್ಧಿ ಅಧಿಕಾರಿಗಳು ಚುತುಷ್ಪಥ ರಸ್ತೆಯನ್ನಾಗಿ ನಿರ್ಮಿಸಲು ಕ್ರಮ ಕೈಗೊಂಡಿದ್ದರು.ಅದರಂತೆ 2013ರಲ್ಲಿ ಲ್ಯಾಂಕೋ ಕಂಪನಿಯು ಹೊಸ ಕೋಟೆಯಿಂದ ಮುಳಬಾಗಿಲು ನಗರದ ಮದರಸಾವರೆಗೂ ನಿರ್ಮಿಸಿ ಹೆದ್ದಾರಿ ಅಭಿವೃದ್ಧಿಗಾಗಿವ್ಯಯವಾಗಿರುವ ಹಣವನ್ನು ವಸೂಲಿ ಮಾಡಲು ದೇವರಾಯಸಮುದ್ರ ಬಳಿ ಟೋಲ್‌ ನಿರ್ಮಿಸಿದ್ದಾರೆ.

ಶುಲ್ಕ ವಸೂಲಿ: ಎರಡನೇ ಹಂತವಾಗಿ ರಸ್ತೆ ಸಾರಿಗೆಮತ್ತು ಹೆದ್ದಾರಿಗಳ ಸಚಿವಾಲಯ ಭಾರತ ಸರ್ಕಾರದ ಅನುಸಾರ ಜೆಎಸ್‌ಆರ್‌ ಟೋಲ್‌ವೇಸ್‌ ಪ್ರçವೇಟ್‌ಲಿಮಿಟೆಡ್‌ ಕಂಪನಿಯು ರಾ.ಹೆ.75ರ ಮುಳಬಾಗಿಲ  ನಗರದ ಮದರಸಾದಿಂದ ಕರ್ನಾಟಕ ಗಡಿ ಭಾಗದ ವರೆಗೆ 2015ರಲ್ಲಿ ಚುತುಷ್ಪಥ ರಸ್ತೆ ನಿರ್ಮಿಸಿದ್ದು, ಹೆದ್ದಾರಿಯ ಬಳಕೆಗಾಗಿ ಬಳಕೆದಾರ ಶುಲ್ಕ  ಸಂಗ್ರಹಿಸಲು ಗಡಿ ರೇಖೆಯಿಂದ 500 ಮೀ.ದೂರದ ಎನ್‌.ಯಲುವಹಳ್ಳಿ ಬಳಿ ಟೋಲ್‌ ಪ್ಲಾಜಾನಿರ್ಮಿಸಿಕೊಂಡು ಶುಲ್ಕ ವಸೂಲಿ ಮಾಡಲಾಗುತ್ತಿದೆ.

ಆಂಧ್ರದ ಹಾಲುಕುಪ್ಪದಲ್ಲಿ ರಸ್ತೆ ವಿಭಜಕ: ಆದರೆ ಗಡಿ ರೇಖೆಯಿಂದ ಆಂಧ್ರದಲ್ಲಿ ಹೆದ್ದಾರಿಯನಿರ್ಮಾಣ ಕಾರ್ಯವು ಹಲವಾರು ವರ್ಷಗಳಿಂದ ವಿಳಂಬವಾಗಿತ್ತು. ಆದರೆ ಕಳೆದ 10 ತಿಂಗಳ ಹಿಂದೆ ಆಂಧ್ರದಲ್ಲಿಯೂ ಹೆದ್ದಾರಿ ಅಭಿವೃದ್ಧಿ ಕಾಮಗಾರಿಪೂರ್ಣಗೊಂಡಿತ್ತು. ಆ ಸಂದರ್ಭದಲ್ಲಿ ಗಡಿ ರೇಖೆಯಬಳಿ ವಾಹನಗಳು ಒಂದು ಭಾಗದಿಂದ ಮತ್ತೂಂದುಭಾಗಕ್ಕೆ ತಿರುವು ಪಡೆದುಕೊಳ್ಳಲು ಅಗತ್ಯವುಳ್ಳ ರಸ್ತೆವಿಭಜಕವನ್ನು ಹೆದ್ದಾರಿ ಅಧಿಕಾರಿಗಳು ನಿರ್ಮಿಸದೇಇದೇ ರಸ್ತೆಗೆ ಸಂಯೋಜನೆ ಮಾಡಿಕೊಂಡೇಮುಂದುವರೆಸಿಕೊಂಡು ಹೋಗಿ ಗಡಿ ರೇಖೆಯಿಂದ ಆಂಧ್ರದ ಹಾಲುಕುಪ್ಪ ಗ್ರಾಮದಲ್ಲಿ ರಸ್ತೆ ವಿಭಜಕ ನಿರ್ಮಿಸಿರುತ್ತಾರೆ.

2 ಕಿ.ಮೀ ದೂರ: ಇದರಿಂದ ರಸ್ತೆಯ ಇಕ್ಕಲಗಳಲ್ಲಿರುವ ಉಪ್ಪರಹಳ್ಳಿ, ಬ್ಯಾಟನೂರು,ನಗವಾರ, ಉಗಣಿ, ಗೋಣಿಕುಪ್ಪ, ಟಿ.ಕುರುಬರಹಳ್ಳಿ,  ಪ್ಪದೊಡ್ಡಿ, ಕುಕ್ಕಲದೊಡ್ಡಿ ಚಿನ್ನಬಾಲೇಪಲ್ಲಿ ಸೇರಿದಂತೆ ಆಂಧ್ರದ ಗಡಿ ಭಾಗದಲ್ಲಿನ ಕರ್ನಾಟಕಕ್ಕೆ ಸೇರಿದಹಲವಾರು ಉಪ್ಪರಹಳ್ಳಿ, ಬ್ಯಾಟನೂರು, ನಗವಾರಗ್ರಾಮಗಳ ಜನರು ಮುಳಬಾಗಿಲಿಗೆ ಅಥವಾಮತ್ತಿತರ ಗ್ರಾಮಗಳಿಗೆ ವಾಹನಗಳ ಮೂಲಕ ತೆರಳಿರಸ್ತೆ ದಾಟಬೇಕಾದರೆ 2 ಕಿ.ಮೀ. ದೂರದಲ್ಲಿರುವಹಾಲುಕುಪ್ಪ ಗ್ರಾಮಕ್ಕೆ ಹೋಗಿ ಬರ ಬೇಕಾಗಿರುತ್ತದೆ.ಇಲ್ಲದೇ ಮುಂದೆಯಿಂದ ಬರುವ ವಾಹನಗಳನ್ನುತಪ್ಪಿಸಿಕೊಂಡು 1.ಕಿ.ಮೀ ದೂರದಲ್ಲಿರುವ ಜೆಎಸ್‌ಆರ್‌ಟೋಲ್‌ಗೇಟ್‌ವರೆಗೂ ರಾಂಗ್‌ ರೋಡಲ್ಲಿವಾಹನಗಳಲ್ಲಿ ಚಲಿಸಿಕೊಂಡು ಮುಂದೆ ಹೋಗಿ ರಸ್ತೆದಾಟಬೇಕಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಹಲವು ಬಾರಿ ಅಪಘಾತಗಳು ಉಂಟಾಗುವ ಸಾಧ್ಯತೆ ಇರುತ್ತದೆ.

Advertisement

ರಸ್ತೆ ವಿಭಜಕ ನಿರ್ಮಿಸಲು ಆಗ್ರಹ ಕರ್ನಾಟಕ : ಗಡಿ ರೇಖೆಯಿಂದ 500 ಮೀ.ದೂರದ ಆಂಧ್ರದಲ್ಲಿ ಪೊಲೀಸ್‌ ಚೆಕ್‌ ಪೋಸ್ಟ್‌ ನಿರ್ಮಿಸಲಾಗಿರುವುದರಿಂದ ಉಪ್ಪರಹಳ್ಳಿ,ಬ್ಯಾಟನೂರು, ನಗವಾರ, ಉಗಣಿ, ಗೋಣಿಕುಪ್ಪ, ಟಿ.ಕುರುಬರಹಳ್ಳಿ, ತಿಪ್ಪದೊಡ್ಡಿ, ಕುಕ್ಕಲದೊಡ್ಡಿ ಚಿನ್ನಬಾಲೇಪಲ್ಲಿ ಮತ್ತಿತರ ಗ್ರಾಮಗಳ ಜನಸಾಮಾನ್ಯರ ಅನಾರೋಗ್ಯ ಹಾಗೂ ಅತ್ಯವಸರಸಂದರ್ಭಗಳಲ್ಲಿಯೂ ರಸ್ತೆ ದಾಟಲು 2+2ಕಿ.ಮೀ ಸುತ್ತಿಕೊಂಡು ಬರಬೇಕಾಗಿದೆ. ಶೀಘ್ರವಾಗಿ ಕರ್ನಾಟಕ-ಆಂಧ್ರದ ಪ್ರದೇಶ ಗಡಿ ರೇಖೆಯಲ್ಲಿರಸ್ತೆ ವಿಭಜಕವನ್ನು ನಿರ್ಮಿಸಬೇಕೆಂದುಉಪ್ಪರಹಳ್ಳಿ ಗ್ರಾಮದ ಮುಖಂಡ ಕಾಂತರಾಜ್‌ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಗುವುದು. ಎಸ್‌.ಮುನಿಸ್ವಾಮಿ, ಸಂಸದ

 

-ಎಂ.ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next