Advertisement

ಲೀಗ್‌ ಪಂದ್ಯಗಳಿಗೆ ಮೀಸಲು ದಿನ ಅಸಾಧ್ಯ: ಐಸಿಸಿ

12:09 AM Jun 13, 2019 | Team Udayavani |

ಲಂಡನ್‌: ವಿಶ್ವಕಪ್‌ ಕೂಟದ 3 ಪಂದ್ಯಗಳು ಈಗಾಗಲೇ ಮಳೆಯಿಂದ ಕೊಚ್ಚಿ ಹೋಗಿವೆ. ಇಂಗ್ಲೆಂಡ್‌ನ‌ ವಾತಾವರಣ ನೋಡಿದರೆ ಮುಂದಿನ ಪಂದ್ಯಗಳ ಭವಿಷ್ಯವೂ ಅತಂತ್ರವಾಗುವ ಲಕ್ಷಣ ಕಾಣಿಸುತ್ತಿದೆ. ಆದರೆ ಮಳೆಯಿಂದ ಪಂದ್ಯ ರದ್ದಾದರೆ ತಾನೇನೂ ಮಾಡುವಂತಿಲ್ಲ ಎಂದು ಐಸಿಸಿ ಅಸಹಾಯಕತೆ ಪ್ರದರ್ಶಿಸಿದೆ. ಪ್ರತಿ ಪಂದ್ಯಕ್ಕೂ ಮೀಸಲು ದಿನಗಳನ್ನು ಇಟ್ಟರೆ ವಿಶ್ವಕಪ್‌ ಕೂಟ ಇನ್ನಷ್ಟು ದೀರ್ಘ‌ವಾಗಲಿದೆ.

Advertisement

ಪ್ರಾಯೋಗಿಕವಾಗಿ ಇದು ಅಸಾಧ್ಯ ಎಂದಿದ್ದಾರೆ ಐಸಿಸಿಯ ನಿರ್ಗಮನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೇವ್‌ ರಿಚರ್ಡ್‌ಸನ್‌. ಈ ವರ್ಷ ಲಂಡನ್‌ನಲ್ಲಿ ಅಕಾಲಿಕವಾಗಿ ಮಳೆಯಾಗುತ್ತಿರುವುದೇ ಇಷ್ಟೆಲ್ಲ ಅವಾಂತರಗಳಿಗೆ ಕಾರಣ. ಮಾಮೂಲಿಗಿಂತ ದುಪ್ಪಟ್ಟು ಮಳೆಯಾಗುತ್ತಿರುವುದರಿಂದ ಪಂದ್ಯಗಳೆಲ್ಲ ಅತಂತ್ರ ಸ್ಥಿತಿಯಲ್ಲಿವೆ ಎನ್ನುವುದು ಐಸಿಸಿ ಕೊಟ್ಟಿರುವ ವಿವರಣೆ. ಹೀಗೆ ಪಂದ್ಯಗಳು ರದ್ದಾದರೆ ಕೂಟದ ರೋಚಕತೆಯೇ ಹೊರಟು ಹೋಗುತ್ತದೆ. ಹೀಗಾಗಿ ಮೀಸಲು ದಿನಗಳನ್ನು ಇಡಬೇಕು ಎಂಬ ಬೇಡಿಕೆ ಕೇಳಿ ಬಂದಿತ್ತು. ಆದರೆ ಐಸಿಸಿ ಈ ಬೇಡಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next