Advertisement
“ಟಿವಿ ರೀಪ್ಲೇಗಳನ್ನು ನೋಡಿ ಹೇಳಿಕೆಗಳನ್ನು ನೀಡುವುದು ಸುಲಭ. ರೀಪ್ಲೇ ನೋಡಿದ ಬಳಿಕ ನನ್ನಿಂದ ತಪ್ಪಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಮೈದಾನದಲ್ಲಿ ನಮಗೆ ಟಿವಿ ನೋಡುವ ಸೌಲಭ್ಯ ಇರುವುದಿಲ್ಲ ಮತ್ತು ಈ ತೀರ್ಪಿಗಾಗಿ ನಾನು ವಿಷಾದಿಸುವುದಿಲ್ಲ. ಅಲ್ಲದೆ ಐಸಿಸಿಯೂ ನನ್ನ ನಿರ್ಧಾರವನ್ನು ಅಭಿನಂದಿಸಿದೆ’ ಎಂದಿದ್ದಾರೆ ಧರ್ಮಸೇನ.
“ತೀರ್ಪು ನೀಡುವ ಮೊದಲು ಸಂವಹನ ಉಪಕರಣದ ಮೂಲಕ ಲೆಗ್ ಅಂಪಾಯರ್ ಮರಾçಸ್ ಎರಸ್ಮಸ್ ಅವರನ್ನು ಸಂಪರ್ಕಿಸಿದ್ದೆ. ಮಾತ್ರವಲ್ಲದೆ ಈ ಸಂವಾದ ಕೇಳಿಸಿಕೊಂಡ ಇತರ ಅಂಪಾಯರ್‌ಗಳೂ ಆರು ರನ್ ನೀಡಲು ಒಪ್ಪಿದ್ದರು. ಯಾರೂ ಔಟಾಗದಿರುವುದರಿಂದ ಐಸಿಸಿ ನಿಯಮಾವಳಿಗಳಲ್ಲಿ ಈ ಸನ್ನಿವೇಶವನ್ನು ಮೂರನೇ ಅಂಪಾಯರ್ ಪರಿಶೀಲನೆಗೊಪ್ಪಿಸುವ ಆಯ್ಕೆ ಇರಲಿಲ್ಲ. ಹೀಗಾಗಿ ಲೆಗ್ ಅಂಪಾಯರ್ ಸಂಪರ್ಕಿಸಿ ನಿರ್ಧಾರ ಕೈಗೊಂಡೆ. ಟಿವಿ ರೀಪ್ಲೇ ನೋಡದ ಕಾರಣ ಬ್ಯಾಟ್ಸ್‌ಮನ್ ಎರಡನೇ ರನ್ ಪೂರ್ತಿ ಮಾಡಿದ್ದಾರೆಂದು ತೀರ್ಮಾನಿಸಿದೆವು’ ಎಂದು ಧರ್ಮಸೇನ ವಿವರಿಸಿದ್ದಾರೆ.