Advertisement

ಪಡಿತರದಲ್ಲಿ ಬೇಳೆ ಕೊಟ್ಟಿಲ್ಲ!

05:50 AM Jul 08, 2020 | Lakshmi GovindaRaj |

ಯಳಂದೂರು: ಪಟ್ಟಣದ ಟಿಎಪಿಸಿ ಎಂಎಸ್‌ ನಿರ್ವಹಿಸುವ ನ್ಯಾಯಬೆಲೆ ಅಂಗಡಿ ಯಲ್ಲಿ ಜೂನ್‌ ತಿಂಗಳ ಪಡಿತರದಲ್ಲಿ 450ಕ್ಕೂ ಹೆಚ್ಚು ಕುಟುಂಬಗಳಿಗೆ ತೊಗರಿ ಬೇಳೆ ವಿತರಣೆ ಮಾಡಿಲ್ಲ ಎಂದು ಪಡಿತರದಾರರು ದೂರಿದ್ದಾರೆ. ಮೇಲ್ನೋಟಕ್ಕೆ ಈ ನ್ಯಾಯಬೆಲೆ ಅಂಗಡಿಯಲ್ಲಿ ಮಾತ್ರ ಬೇಳೆ ಕೊಟ್ಟಿಲ್ಲ. ತಾಲೂಕಾದ್ಯಂತ ಪಡಿತರದಲ್ಲಿ ವಿತರಣೆಯಾಗುವ ಬೇಳೆ ಕಳಪೆಯಿಂದ ಕೂಡಿರುತ್ತಿತ್ತು.

Advertisement

ಇದಕ್ಕೆ ಸಂಬಂಧಿಸಿದಂತೆ ಆಹಾರ ಸಚಿವರು ಹಾಗೂ ಜಿಲ್ಲಾ  ಉಸ್ತುವಾರಿ ಸಚಿವರು ಜಿಲ್ಲಾ ಕೇಂದ್ರದಲ್ಲಿ ಸಭೆ ನಡೆಸಿ ಗುಣಮಟ್ಟದ ಬೇಳೆ ವಿತರಣೆ ಮಾಡುವಂತೆ ಸೂಚನೆ ನೀಡಿದ್ದರು. ಆದರೆ ಇದಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇರಲಿಲ್ಲ. ಅಲ್ಲದೆ ಈ ತಿಂಗಳಲ್ಲಿ ಬೇಳೆಯನ್ನೇ ವಿತರಣೆ ಮಾಡದಿರುವುದು  ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕೋವಿಡ್‌-19ರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನವೆಂಬರ್‌ ತನಕ ಪಡಿತರ ಉಚಿತ ಪಡಿತರಕ್ಕೆ ಅವಕಾಶ ಮಾಡಿ  ಕೊಟ್ಟಿದೆ. ಈಗಾಗಲೇ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಲುಗಿರುವ ಬಡ ಜನತೆಗೆ ನೀಡುವ ದಿನಸಿ ಕಳಪೆ ಗುಣಮಟ್ಟದ್ದಾಗಿರುತ್ತದೆ. ಇದರೊಂದಿಗೆ ಈ ಬಾರಿ ಬೇಳೆ ವಿತರಣೆ ಮಾಡದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕು  ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.

ನಾನು ಈಗಷ್ಟೇ ತಹಶೀಲ್ದಾರ್‌ ಆಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಪಡಿತರ ವಿತರಣೆ ಯಲ್ಲಿ ಲೋಪವಾಗದಂತೆ ಕ್ರಮ ವಹಿಸುತ್ತೇನೆ.
-ಕುನಾಲ್‌, ಪ್ರಭಾರ ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next