Advertisement

ಮಕ್ಕಳ ಅನ್ನಕ್ಕೂ ಮುಖ್ಯ ಶಿಕ್ಷಕನ ಕೊಕ್ಕೆ

04:40 PM Nov 22, 2020 | Suhan S |

ಕೊರಟಗೆರೆ: ಬಡವರ ಮಕ್ಕಳನ್ನು ಶಾಲೆಯತ್ತ ಕರೆತಂದು ವಿದ್ಯಾವಂತರನ್ನಾಗಿ ಮಾಡಲು ಸರ್ಕಾರ ಬಿಸಿಯೂಟದಂತಹ ಮಹತ್ತರ ಯೋಜನೆ ಜಾರಿಗೆ ತಂದಿದ್ದರೆ ಮಕ್ಕಳುತಿನ್ನುವಅನ್ನಕ್ಕೂಕೊಕ್ಕೆಇಡುವಂತಹ ಕೆಲಸ ಕೊರಟಗೆರೆ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿದೆ.

Advertisement

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಲಾಕ್‌ಡೌನಿನಲ್ಲಿ ಮಕ್ಕಳು ಶಾಲೆಗೆ ಬಾರದಿದ್ದರೂ ಮನೆಯಲ್ಲಿಯೇಕಲಿಕೆ ಮಾಡಿಕೊಂಡು ಅಕ್ಕಿ, ಗೋಧಿ, ಬೆಳೆ, ಎಣ್ಣೆ, ಹಾಲಿನಪೌಡರ್‌ ನಂತಹ ಪೌಷ್ಟಿಕ ಆಹಾರವನ್ನು ಸೇವಿಸಲಿ ಎಂದು ಸರ್ಕಾರ ದಿಂದಅಕ್ಷರದಾಸೋಹಯೋಜನೆಯಡಿ ಬಿಡುಗಡೆಯಾಗಿದ್ದ ದಾಸ್ತಾನು ವಿತರಿಸದೆ ವಂಚಿಸಿಲಾಗುತ್ತಿದೆ.

ಲಾಕ್‌ಡೌನ್‌ ಮೊದಲಹಂತದ 53 ದಿನಗಳಿಗೆ 8ನೇ ತರಗತಿ ವಿದ್ಯಾರ್ಥಿಗೆ ತಲಾ 6 ಕೆ.ಜಿ. 750ಗ್ರಾಂ ಅಕ್ಕಿ, 1ಕೆ.ಜಿ. 200ಗ್ರಾಂ ಗೋಧಿ ಹಾಗೂ ಪ್ರತಿ ಮಗುವಿಗೆ ನೀಡಲು ನಿಗದಿಯಾಗಿರುವ ಪರಿವರ್ತನ ವೆಚ್ಚವಾದ 395ರೂ.ಗಳ ಬದಲಾಗಿ 4ಕೆ.ಜಿ. 600 ಗ್ರಾಂ ತೊಗರಿಬೆಳೆಯನ್ನು ವಿತರಿಸಬೇಕಿತ್ತು. ಆದರೆ, ಅಕ್ಕಿಯನ್ನು ಮಾತ್ರ ಸಮಪ್ರಮಾಣದಲ್ಲಿ ವಿತರಿಸಿ 1ಕೆ.ಜಿ. 200 ಗ್ರಾಂ ಗೋಧಿಯ ಬದಲಾಗಿ ಹೆಚ್ಚುವರಿ 1ಕೆ.ಜಿ. ಅಕ್ಕಿಯನ್ನು ಮಾತ್ರ ನೀಡುತ್ತಿದ್ದಾರೆ. ತೊಗರಿಬೆಳೆ ನೀಡುವ ಪ್ರಮಾಣದಲ್ಲಿ ಕೇವಲ 600 ಗ್ರಾಂ ವಿತರಿಸಿ ಇನ್ನೂಳಿದ 4ಕೆ.ಜಿ. ಬೆಳೆಯನ್ನು ನೀಡದೆ ಮುಖ್ಯಶಿಕ್ಷಕ ನರಸಿಂಹಮೂರ್ತಿ ಯಾಮರಿಸಿದ್ದಾರೆ ಜತೆಗೆ ಅವಧಿ ಮೀರಿದ ಹಾಲಿನ ಪುಡಿ ನೀಡಿದ್ದಾರೆ ಎಂದು ಪೋಷಕರು ಆರೋಪಸಿದ್ದಾರೆ.

ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು, ಅಕ್ಷಕ ದಾಸೋಹ ಸಹಾಯಕ ನಿರ್ದೇಶಕರಿಗೆ ಪರಿ ಶೀಲಿಸಿವರದಿನೀಡುವಂತೆ ಸೂಚಿಸಿದ್ದೇನೆ. ವರದಿಆಧಾರದ ಮೇಲೆ ಮುಖ್ಯ ಶಿಕ್ಷಕರಿಗೆ ನೋಟಿಸ್‌ ಜಾರಿ ಮಾಡಲಾಗುವುದು. ಸುಧಾಕರ್‌. ಬಿಇಒ ಕೊರಟಗೆರೆ

ನನ್ನ ಮಗಳಿಗೆ ಆರೂವರೆ ಕೆ.ಜಿ. ಅಕ್ಕಿ, 600 ಗ್ರಾಂ ಬೆಳೆ, ಅವಧಿ ಮುಗಿದ ಒಂದು ಹಾಲಿನ ಪ್ಯಾಕೇಟ್‌ ನೀಡಿದ್ದಾರೆ. ಗೋಧಿ ಸೇರಿದಂತೆ ಸರ್ಕಾರದ ನಿಯಮ ಅನುಸಾರ ಸಮರ್ಪಕವಾಗಿ ಆಹಾರ ಪದಾರ್ಥ ವಿತರಿಸಿಲ್ಲ. ಡಿ.ಎಲ್‌ ಮಲ್ಲಯ್ಯ. ದೇವರಹಳ್ಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next