Advertisement

ಏಕಿಲ್ಲ, ಅಕ್ರಮ ಕಟ್ಟಡ ಪ್ರಾಧಿಕಾರಕ್ಕೆ ಶಿಕ್ಷೆ?

09:52 AM Mar 20, 2020 | mahesh |

ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲು ಆದೇಶಿಸಿದಾಗ ಕಟ್ಟಡ ಮಾಲಿಕನನ್ನು ಮಾತ್ರ ಅಪರಾಧಿ ಎಂಬ ಹಾಗೆ ನೋಡಲಾಗುತ್ತದೆ. ಅಕ್ರಮ ಎಂದು ಹೇಳಲಾದ ಕಟ್ಟಡ ಒಬ್ಬ ವ್ಯಕ್ತಿಯ ಹೆಸರಿನಲ್ಲಿರಬಹುದು. ಮಾಲಕತ್ವ ಸ್ವಯಂ ಘೋಷಣೆಯಲ್ಲ. ಕಟ್ಟಡ ಯಾವ ಪ್ರದೇಶದಲ್ಲಿದೆಯೇ ಆ ಸ್ಥಳೀಯ ಪ್ರಾಧಿಕಾರ ಗುರುತಿಸಿ ದಾಖಲು ಮಾಡಿದಂತೆ ಮಾಲಕತ್ವ ಪ್ರಾಪ್ತವಾಗುತ್ತದೆ. ಆದರೆ ಕಟ್ಟಡ ರಚನೆಗೆ ಮುನ್ನ ಅನೇಕ ಕಾನೂನಾತ್ಮಕ ಅಂಶಗಳನ್ನು ಪರಿಗಣಿಸಲಾಗುತ್ತದೆ. ಭೂಮಿಯ ಒಡೆತನ, ಋಣಭಾರ, ಕಟ್ಟಲು ಉದ್ದೇಶಿಸಿದ ರಚನೆಯ ನಕ್ಷೆ, ಅಂದಾಜು ಪಟ್ಟಿ, ವಲಯ ಮತ್ತಿತರ ಅಂಶಗಳನ್ನು ಪರಿಗಣಿಸಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಲಾಗುತ್ತದೆ. ಅಲ್ಲದೆ ರಚನೆ ಅವಧಿಯುದ್ದಕ್ಕೂ ಆಗಾಗ ಪ್ರಾಧಿಕಾರದ ಅಧಿಕಾರಿಗಳು ಮುಖ್ಯವಾಗಿ ಇಂಜಿನಿಯರ್‌ಗಳು ತಪಾಸಣೆ ಮಾಡುತ್ತಿರಬೇಕೆಂಬ ನಿಯಮವಿದೆ. ಸಂಪೂರ್ಣ ರಚನೆಯಾದ ಬಳಿಕ ನಿಯಮಾವಳಿಗಳಿಗೆ ಒಳಪಟ್ಟಿದೆ ಎಂಬುದನ್ನು ಖಚಿತಪಡಿಸಿ ಕೊಂಡು ರಚನೆಯನ್ನು ಸಕ್ರಮಗೊಳಿಸಲಾಗುತ್ತದೆ.

Advertisement

ಇಲ್ಲಿಯ ತನಕದ ಕಟ್ಟಡ ಕಾಮಗಾರಿ ಸ್ಥಳೀಯ ಪ್ರಾಧಿಕಾರದ ಅಧಿಕಾರಿಗಳ ಕಣ್ಗಾಪಿನಲ್ಲಿ ನಡೆಯುತ್ತದೆ. ಹಾಗೆ ತಲೆ ಎತ್ತಿ ನಿಂತ ಕಟ್ಟಡ ಅದು ಅಕ್ರಮ ಎಂದು ನ್ಯಾಯಾಲಯ ಪರಿಗಣಿಸಿ ಸಾರ್ವಜನಿಕ ಹಿತಾಸಕ್ತಿಯಿಂದ ಅದನ್ನು ಮಾತ್ರ ನೆಲಸಮಗೊಳಿಸಲು ಆದೇಶಿಸುವುದಾದರೆ ಅಕ್ರಮ ಎಂದು ಹೇಳಲಾದ ಕಟ್ಟಡ ಮಾಲಿಕ ಮಾತ್ರ ಅಪರಾಧಿ ಎಂದು ತೀರ್ಮಾನಿಸಿದಂತಾದೀತು. ಇದರಲ್ಲಿ ಪ್ರಾಧಿಕಾರದ ಅದಕ್ಷತೆ, ನಿರ್ಲಕ್ಷ್ಯ ಇಲ್ಲವೇ? ನಿಜ ಹೇಳಬೇಕಾದರೆ ಪ್ರಾಧಿಕಾರದ ಅಧಿಕಾರಿಗಳು ಸಾರ್ವಜನಿಕ ಸೇವಕರು. ಅವರ ನಿರ್ಲಕ್ಷ್ಯ ಸಾರ್ವಜನಿಕರಿಗೆ ಎಸಗಿದ ದ್ರೋಹ., ಅಕ್ಷಮ್ಯ ಅಪರಾಧ. ಅವರಿಗೆ ತಕ್ಕ ಶಿಕ್ಷೆಯಾಗಲೇಬೇಕು. ಅಧಿಕಾರಿಗಳ ಕಣ್ಣು ತಪ್ಪಿಸಿ ಅಥವಾ ಪರವಾನಿಗೆ ಪಡೆಯದೆ ನಿಯಮಗಳನ್ನು ಉಲ್ಲಂ ಸಿ ರಚನೆ ಮಾಡಿದುದಾದರೂ ತಪ್ಪು ಅಧಿಕಾರಿಗಳದ್ದೇ. ಏಕೆಂದರೆ ಅವರು ಆಗಾಗ ಕ್ಲಪ್ತ ಕಾಲದಲ್ಲಿ ತಮ್ಮ ಕಣ್ಗಾಪುವಿನಲ್ಲಿ ಕಾರ್ಯ ನಿರ್ವಂಚನೆಯಿಂದ ಮಾಡುವುದಾದಲ್ಲಿ ಯಾವ ಅಕ್ರಮ ಕಟ್ಟಡವೂ ತಲೆಎತ್ತಿ ನಿಲ್ಲಲು ಸಾಧ್ಯವಿಲ್ಲ. ಹಾಗಾಗಿ ಯಾರು ಕಾನೂನಿನ ಕುಣಿಕೆಯಿಂದ ನುಣುಚಿಕೊಂಡರೂ ಅಧಿಕಾರಿಗಳಿಗೆ ನುಣುಚಿ ಕೊಳ್ಳಲು ಸಾಧ್ಯವಿಲ್ಲ.ಹಾಗಾಗಿ ಅವರಿಗೂ ಶಿಕ್ಷೆಯಾಗಬೇಕು.

ದುರದೃಷ್ಟವೇನೆಂದರೆ ಅಧಿಕಾರಿಗಳ ಕರ್ತವ್ಯ ಲೋಪವನ್ನು ಖಚಿತಪಡಿಸಿ ಸೂಕ್ತ ಕ್ರಮ ಜರಗಿಸಲು ಸೇವಾ ನಿಯಮಾವಳಿಗಳಲ್ಲಿ ಅವಕಾಶ ಕಲ್ಪಿತವಾಗಿದ್ದರೂ ಅದು ತೃಪ್ತಿಕರವಾಗಿ ಪಾಲನೆ ಯಾಗು ತ್ತಿಲ್ಲ. ಕಟ್ಟಡ ಅಕ್ರಮವೆಂದು ನ್ಯಾಯಾಲಯ ಹೇಳಿದೊಡನೆಯೇ ಈ ಸ್ಥಳೀಯ ಪ್ರಾಧಿಕಾರಗಳು ಅಂಥ ಕಟ್ಟಡವನ್ನು ನೆಲಸಮ ಮಡುವುದರಲ್ಲೇ ನಿರತರಾಗುತ್ತಾರೆ. ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ಜರಗಿಸಲು ಕನಿಷ್ಟ ಆಸಕ್ತಿಯನ್ನು ತೋರಿಸುವುದಿಲ್ಲ. ಏಕೆಂದರೆ ಆ ಅಧಿಕಾರಿಗೆ ಸ್ಥಳೀಯ ಪ್ರಾಧಿಕಾರದ ಚುನಾಯಿತ ಪ್ರತಿನಿಧಿಯ ಕೃಪಾಕಟಾಕ್ಷ ಇರುತ್ತದೆ. ಸ್ಥಳೀಯ ಸಂಸ್ಥೆಗಳ ಸ್ಥಾಪನೆಗಾಂಧೀ ಜಿಯವರ ಕನಸುಗಳಲ್ಲೊಂದು.

ಖೇದದ ವಿಚಾರವೆಂದರೆ ಈ ಸ್ಥಳೀಯ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಅವ್ಯಾಹತವಾಗಿ ನಡೆಯುತ್ತಿದೆ. 73, 74ನೇ ಸಂವಿಧಾನ ತಿದ್ದುಪಡಿಯ ಮೂಲಕ ಈ ಸಂಸ್ಥೆಗಳ ಪುನಃಶ್ಚೇತನ ಕಾರ್ಯ ನಡೆಯಿತಾದರೂ ಇವುಗಳಲ್ಲಿ ತಾಂಡವಾಡುವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಇಲ್ಲಿ ನಾವು ನ್ಯಾಯಾಂಗದ ಕ್ರಿಯಾ ಶೀಲತೆಯನ್ನು ನಿರೀಕ್ಷಿಸುತ್ತಿದ್ದೇವೆ. ಅಕ್ರಮ ಕಟ್ಟಡವನ್ನು ನೆಲಸಮ ಮಾಡಲು ಆದೇಶಿಸಿದಂತೆ ಅದಕ್ಕೆ ಕಾರಣ ರಾದವರ ವಿರುದ್ಧ ಕ್ರಮಕ್ಕೂ ಸೂಚನೆ ನೀಡಬೇಕಾದ ಅನಿವಾರ್ಯತೆ ಇದೆ. ಅಧಿಕಾರಿಗಳ ವಿರುದ್ಧ ಮಾತ್ರವಲ್ಲ ಆ ಸ್ಥಳೀಯ ಪ್ರಾಧಿಕಾರವನ್ನೇ ಬರ್ಖಾಸ್ತ್ಗೊಳಿಸುವ ಉಗ್ರ ಕ್ರಮಕ್ಕೆ ಮುಂದಾಗುವುದಾದಲ್ಲಿ ಸ್ಥಳೀಯ ಸಂಸ್ಥೆಗಳು ಎಚ್ಚರದಿಂದ ಕಾರ್ಯವೆಸಗ ಲಾರಂಭಿ ಸಬಹುದು. ಇಲ್ಲವಾದಲ್ಲಿ ಸ್ಥಳೀಯ ಸಂಸ್ಥೆಗಳ ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯವೇ?

ಬೇಳೂರು ರಾಘವ ಶೆಟ್ಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next