Advertisement

ಪೆಟ್ರೋಲ್, ಡಿಸೇಲ್ : GST ವ್ಯಾಪ್ತಿಗೆ ಇಲ್ಲ : ನಿರ್ಮಲಾ ಸೀತಾರಾಮನ್

12:14 PM Mar 16, 2021 | Team Udayavani |

ನವ ದೆಹಲಿ : ಪೆಟ್ರೋಲ್, ಡಿಸೇಲ್ ಹಾಗೂ ಇಂಧನ ಬೆಲೆಗಳು ದಾಖಲೆಯ ಏರಿಕೆಯನ್ನು ಕಾಣುತ್ತಿರುವ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪೆಟ್ರೋಲ್, ಡಿಸೇಲ್, ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲ, ವಿಮಾನ ಇಂಧನಗಳನ್ನು ಜಿ ಎಸ್ ಟಿ ವ್ಯಾಪ್ತಿಗೆ ತರುವ ಯಾವುದೇ ಪ್ರಸ್ತಾಪವಿಲ್ಲವೆಂದು ಸೋಮವಾರ(ಮಾ.15)ದಂದು ಲೋಕಸಭೆಯಲ್ಲಿ ಲಿಖಿತ ರೂಪದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ.

Advertisement

2017, ಜುಲೈ 1 ರಂದು ಜಿ ಎಸ್ ಟಿಯನ್ನು ಜಾರಿಗೊಳಿಸಿದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದಾಯಗಳು ಪೆಟ್ರೋಲಿಯಂ ಕ್ಷೇತ್ರವನ್ನು ಅವಲಂಭಿಸಿರುವುದನ್ನು ಆಧರಿಸಿ ಪೆಟ್ರೋಲ್, ಡಿಸೇಲ್, ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲ, ವಿಮಾನ ಇಂಧನಗಳನ್ನು ಜಿ ಎಸ್ ಟಿ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು.

ಓದಿ : ಅಂಜನಾದ್ರಿ ಬೆಟ್ಟಕ್ಕೆ ಮಾಸ್ಟರ್ ಪ್ಲಾನ್: 50 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಅಭಿವೃದ್ಧಿ

ಇದು ಇಂಧನಗಳ ಮೇಲೆ ಕೇಂದ್ರ ಸರ್ಕಾರವು ಅಬಕಾರಿ ಶುಲ್ಕವನ್ನು ಹಾಗೂ ರಾಜ್ಯ ಸರ್ಕಾರವು ವ್ಯಾಟ್ ಹಾಕುವುದನ್ನು ಮುಂದುವರಿಸಲು ಅವಕಾಶವನ್ನು ಒದಗಿಸಿತ್ತು.

ತೆರಿಗೆಯ ಪ್ರಮಾಣ ಕಡಿಮೆಯಾಗುವುದಿಲ್ಲವೆಂದಾದರೇ, ಪೆಟ್ರೋಲ್ ಹಾಗೂ ಡಿಸೇಲ್ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿರುವ ಬೆನ್ನಲ್ಲೇ ಜಿ ಎಸ್ ಟಿ ವ್ಯಾಪ್ತಿಗೆ ಒಳಪಡಿಸಬೇಕೆಂಬ ಮಾತುಗಳು ಕೇಳಿಬಂದಿತ್ತು.

Advertisement

ಸದ್ಯ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಿನ್ನೆ(ಸೋಮವಾರ, ಮಾರ್ಚ್ 15) ಲೋಕಸಭೆಯಲ್ಲಿ ಪೆಟ್ರೋಲ್, ಡಿಸೇಲ್, ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲ, ವಿಮಾನ ಇಂಧನಗಳನ್ನು ಜಿ ಎಸ್ ಟಿ ವ್ಯಾಪ್ತಿಗೆ ತರುವ ಯಾವುದೇ ಪ್ರಸ್ತಾಪವಿಲ್ಲವೆಂದು ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.

ಇನ್ನು, ಕಾನೂನಿನನ್ವಯ ಜಿ ಎಸ್ ಟಿ ಮಂಡಳಿಯು ಪೆಟ್ರೋಲಿಯಂ ಕಚ್ಚಾ ತೈಲ, ನೈಸರ್ಗಿಕ ಇಂಧನ ಹಾಗೂ ಹೈಸ್ಪೀಡ್ ಡಿಸೇಲ್, ಪೆಟ್ರೋಲ್ ಗಳ ಮೇಲೆ ಜಿ ಎಸ್ ಟಿ ವಿಧಿಸುವ ದಿನಾಂಕವನ್ನು ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ನಿರ್ಮಲಾ ಹೇಳಿದ್ದಾರೆ.

ಓದಿ : ಏಪ್ರಿಲ್ ಅಂತ್ಯದಲ್ಲಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತಕ್ಕೆ ಭೇಟಿ

Advertisement

Udayavani is now on Telegram. Click here to join our channel and stay updated with the latest news.

Next