ತೀರ್ಥಹಳ್ಳಿ : ಮೂಲಭೂತ ಸೌಕರ್ಯ ಇಲ್ಲದೇ ಗ್ರಾಮಗಳಲ್ಲಿ ಜನರಿಗೆ ತೀವ್ರ ಸಂಕಷ್ಟ ಹಾಗೂ ಜನರಿಗೆ ಗೋಳು ತಪ್ಪದಿರುವ ಪರಿಸ್ಥಿತಿ ಮಾಜಿ ಗೃಹ ಸಚಿವರ ಕ್ಷೇತ್ರದಲ್ಲಿ ಆಗಿದೆ.
ತಾಲೂಕಿನ ಬೆಜ್ಜವಳ್ಳಿ ಗ್ರಾ.ಪಂ ವ್ಯಾಪ್ತಿಯ ಉದಯಪುರ, ಕಿಕ್ಕೇರಿ, ಅಮ್ತಿ, ಬಚ್ಚಿನಕೂಡುಗೆ ಮತ್ತು ಸುರಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ
ಕೆಸರುಗದ್ದೆ ರೀತಿ ಆಗಿದ್ದು ಎರಡೆರಡು ಬಾರಿ ಎಂಎಲ್ಎ ಆಗಿದ್ದರೂ ಕೂಡ ಈ ಗ್ರಾಮಗಳತ್ತ ಚಿತ್ತ ಹರಿಸಿಲ್ಲ ಎಂದು ಶಾಸಕರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಲುಮಹಿಷಿ ಗ್ರಾಮದಿಂದ ಮಜಿರೆ ಗ್ರಾಮಗಳಿಗೆ ಹೋಗುವ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಹಾಳಾದ ರಸ್ತೆಯಲ್ಲಿ ಸಂಚಾರ ಸಾಧ್ಯವಾಗದೇ ಶಾಲಾ ಮಕ್ಕಳು- ಜನರು ಪರದಾಟ ನೆಡೆಸುತ್ತಿದ್ದಾರೆ. ಗ್ರಾಮದಲ್ಲಿ ಯಾರಿಗಾದ್ರೂ ಆರೋಗ್ಯ ಹದಗೆಟ್ಟರೇ ಜೋಲಿ ಕಟ್ಟಿ ಹೊರಬೇಕಾದ ಸ್ಥಿತಿ ಇದ್ದು ಬೈಕ್, ಕಾರು ಇರಲಿ, ನಡೆದು ಹೋಗಲು ಆಗದ ದುಸ್ಥಿತಿಯಲ್ಲಿ ಈ ರಸ್ತೆ ಇದೆ.
ಕಳೆದ 20 ವರ್ಷದಿಂದ 4 ಕಿ.ಮೀ ಡಾಂಬರ್ ರಸ್ತೆ ನಿರ್ಮಿಸಲು ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಅಧಿಕಾರಿಗಳು ಕಣ್ಣ್ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ರಸ್ತೆ ನಿರ್ಮಿಸದಿದ್ದರೇ, ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.