Advertisement

ಕೈದಿಗಳಿಗಿಲ್ಲ ಬಿಡುಗಡೆ ಭಾಗ್ಯ

02:03 AM Jan 26, 2019 | |

ಬೆಂಗಳೂರು: ಸನ್ನಡತೆ ಆಧಾರದಲ್ಲಿ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಬಿಡುಗಡೆಯಾಗುವ ಆಸೆಯಿಂದಿದ್ದ ನೂರಕ್ಕೂ ಹೆಚ್ಚು ಜೈಲು ಹಕ್ಕಿಗಳಿಗೆ ರಾಜ್ಯ ಸರ್ಕಾರ ಪುನಃ ನಿರಾಸೆ ಮೂಡಿಸಿದೆ. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಹಾಗೂ ರಾಜ್ಯದ 8 ಕೇಂದ್ರ ಕಾರಾಗೃಹಗಳಲ್ಲಿ ಸನ್ನಡತೆ ಆಧಾರದಲ್ಲಿ ಬಿಡುಗಡೆಯಾಗಲು ಅರ್ಹರಿದ್ದ 100ಕ್ಕೂ ಹೆಚ್ಚು ಕೈದಿಗಳ ಪಟ್ಟಿಯನ್ನು ಕಾರಾಗೃಹ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಆದರೆ, ರಾಜ್ಯ ಸರ್ಕಾರ ಈ ಪಟ್ಟಿಯನ್ನು ಸಚಿವ ಸಂಪುಟದ ಮುಂದೆ ಇರಿಸಿ ತೀರ್ಮಾನ ಕೈಗೊಂಡಿಲ್ಲ. ಹೀಗಾಗಿ, ಗಣರಾಜ್ಯೋತ್ಸವಕ್ಕೆ ಜೈಲುಹಕ್ಕಿಗಳಿಗೆ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.ಇಲಾಖಾ ವತಿಯಿಂದ ಕೈದಿಗಳ ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ. ಪಟ್ಟಿಯನ್ನು ಕ್ಯಾಬಿನೆಟ್‌ ಮುಂದಿಟ್ಟು ಬಳಿಕ ರಾಜ್ಯಪಾಲರಿಗೆ ಶಿಫಾರಸು ಮಾಡಬೇಕು. ಆದರೆ, ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿಯೇ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಂಡಿಲ್ಲ.

Advertisement

ಇದಲ್ಲದೆ, ರಾಜ್ಯಪಾಲರು ಈ ಹಿಂದೆ ವಾಪಸ್‌ ಕಳುಹಿಸಿದ್ದ 13 ಕೈದಿಗಳ ಕುರಿತು ಸಚಿವ ಸಂಪುಟ ಚರ್ಚೆ ನಡೆಸಿಲ್ಲ ಎಂದು ತಿಳಿದು ಬಂದಿದೆ. 2018ರ ಗಣರಾಜ್ಯೋತ್ಸವಕ್ಕೂ ಸನ್ನಡತೆ ಆಧಾರದಲ್ಲಿ ಕೈದಿಗಳ ಬಿಡುಗಡೆ ಸಾಧ್ಯವಾಗಿರಲಿಲ್ಲ. ರಾಜ್ಯ ಸರ್ಕಾರ ಕೈದಿಗಳ ಪಟ್ಟಿ ಕಳುಹಿಸಿಕೊಡಲು ವಿಳಂಬ ಮಾಡಿದ್ದ ರಿಂದ ರಾಜ್ಯಪಾಲರ ಅಂಕಿತ ಬಿದ್ದಿರಲಿಲ್ಲ. ಹೀಗಾಗಿ, ಗಣರಾ ಜ್ಯೋತ್ಸವಕ್ಕೆ ಯಾವುದೇ ಕೈದಿ ಬಿಡುಗಡೆಗೊಂಡಿರೆ 

Advertisement

Udayavani is now on Telegram. Click here to join our channel and stay updated with the latest news.

Next