Advertisement
ಎರಡು ವಾರಗಳ ಹಿಂದೆ ಅಲ್ಪ ಏರಿಕೆ ಕಂಡಿದ್ದ ಅಡಿಕೆ ಬೆಲೆ ಈಗಲೂ ಅದೇ ದರದಲ್ಲಿ ಮುಂದುವರಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಆದರೆ ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಅಡಿಕೆಯನ್ನು ಮಾರಾಟಕ್ಕೆ ಬಿಡದೆ ತೆಗೆದಿರಿಸಿಕೊಂಡಿದ್ದ ಬೆಳೆಗಾರರಿಗೆ ನಿರೀಕ್ಷಿತ ಬೆಲೆ ಏರಿಕೆ ಆಗದೇ ಇರುವುದು ನಿರಾಶೆಯನ್ನುಂಟುಮಾಡಿದೆ.
ಕಾಳುಮೆಣಸು ಕೆಜಿಗೆ 310 ರೂ.ವರೆಗೆ ಧಾರಣೆ ಪಡೆದುಕೊಂಡಿದೆ. ಹಿಂದಿನ ವಾರ ಕೆ.ಜಿ.ಗೆ 310 ರೂ. ಇತ್ತು. ಕಳೆದ ಕೆಲ ಸಮಯಗಳ ಧಾರಣೆಯನ್ನೇ ಗಮನಿಸಿದರೆ ದೊಡ್ಡ ಮಟ್ಟಿನ ಧಾರಣೆ ಪಡೆದುಕೊಳ್ಳದೇ ಇರುವುದನ್ನು ಗಮನಿಸಬಹುದು. 2 ವರ್ಷಗಳಿಂದ ಇಳಿಕೆಯ ಧಾರಣೆ ಮುಂದುವರೆದಿದೆ.
Related Articles
ಎರಡು ವಾರದ ಹಿಂದೆ ಧಾರಣೆ ಏರಿಸಿಕೊಂಡು ಅಚ್ಚರಿ ಮೂಡಿಸಿದ್ದ ರಬ್ಬರ್, ಅನಂತರ ಏರಿಕೆ ಕಂಡಿಲ್ಲ. ಆರ್‌ಎಸ್‌ಎಸ್4 ದರ್ಜೆ 1.5 ರೂ. ಕುಸಿತ ಕಂಡು 124 ರೂ., ಆರ್‌ಎಸ್‌ಎಸ್5 ದರ್ಜೆ 1 ರೂ. ಕುಸಿತ ಕಂಡು 118 ರೂ., 50 ಪೈಸೆ ಕುಸಿದಿರುವ ಲಾಟ್ 113 ರೂ.ನಲ್ಲಿ ಖರೀದಿ ನಡೆಸಿದೆ. ತಲಾ 1 ರೂ. ಏರಿಸಿಕೊಂಡಿರುವ ಸ್ಕಾಪ್ 1 ದರ್ಜೆ 88 ರೂ. ಹಾಗೂ ಸ್ಕಾಪ್ 2 ದರ್ಜೆ 80 ರೂ.ನಲ್ಲಿ ಖರೀದಿ ನಡೆಸಿವೆ.
Advertisement
ಕೊಕ್ಕೋ ಸ್ಥಿರಕೊಕ್ಕೋ ಧಾರಣೆ ಇಳಿಕೆ ಕಂಡಿದೆ. ಕಳೆದ ಕೆಲ ಸಮಯಗಳಿಂದ ಕೊಕ್ಕೋ ಧಾರಣೆ ಸ್ಥಿರವಾಗಿ ಕ್ರಮಿಸುತ್ತಿತ್ತು. ಹಸಿ ಕೊಕ್ಕೋ ಕೆ.ಜಿ.ಗೆ 65 ರೂ., ಒಣ ಕೊಕ್ಕೋ ಕೆ.ಜಿ.ಗೆ 195 ರೂ.ನಲ್ಲಿ ಖರೀದಿ ನಡೆದಿತ್ತು. ಈ ವಾರದ ಹಸಿ ಕೊಕ್ಕೋ 60 ರೂ.ಗೆ ಇಳಿಕೆ ಕಂಡಿದೆ. ಕೃಷಿ ಉತ್ಪನ್ನಗಳ ಪೈಕಿ ಸ್ಥಿರತೆ ಸಾಧಿಸಿದ ಏಕೈಕ ಉತ್ಪನ್ನವೆಂದರೆ ಅದು ಕೊಕ್ಕೋ ಮಾತ್ರ ಎಂದೇ ಹೇಳಬಹುದು. ಕೆಲವು ವರ್ಷಗಳಿಂದ ಕೊಕ್ಕೋ ಬೆಳೆಯುವ ಪ್ರಮಾಣವೂ ಧಾರಣೆಯ ಸ್ಥಿರತೆಯ ಕಾರಣದಿಂದ ಹೆಚ್ಚಾಗಿದೆ. ತೆಂಗು ಧಾರಣೆ
ತೆಂಗಿಗೆ ಹಿಂದಿನ ವಾರದ ಧಾರಣೆಯೇ ಮುಂದುವರೆದಿದೆ. ಈ ವಾರ ತೆಂಗಿನಕಾಯಿ ಕೆ.ಜಿ.ಗೆ 32 ರೂ.ನಿಂದ 34 ರೂ.ವರೆಗೆ ವ್ಯವಹಾರ ಕುದುರಿಸಿದೆ. ಹಿಂದಿನ ವಾರ ಇದೇ ಧಾರಣೆ ಇತ್ತು. ಅದರ ಹಿಂದಿನ ವಾರ 1 ರೂ. ಏರಿಕೆ ಕಂಡಿತ್ತು. ಒಟ್ಟಿನಲ್ಲಿ ಉತ್ತಮವೆನಿಸುವ ಧಾರಣೆ ತೆಂಗಿಗೆ ಮುಂದುವರೆದಿದೆ. ಒಂದು ವರ್ಷದ ಅವಧಿಯಲ್ಲಿ ತೆಂಗಿಗೆ ಉತ್ತಮ ಧಾರಣೆ ಮುಂದುವರೆದಿದೆ. - ರಾಜೇಶ್ ಪಟ್ಟೆ