Advertisement

ರಂಗ ಶಿಕ್ಷಣದಲ್ಲಿಲ್ಲ ಸಿದ್ಧ ಮಾದರಿ: ಡಾ|ಅನುರಾಧಾ

09:59 AM Mar 22, 2019 | |

ಸಾಗರ: ರಂಗಭೂಮಿಯಲ್ಲಿ ಕಲಿಕೆ ಎನ್ನುವುದಕ್ಕೆ ಸಿದ್ಧ ಮಾದರಿಗಳು ಇಲ್ಲ. ಈ ಕ್ಷೇತ್ರದಲ್ಲಿ ಕಲಿಕೆ ಅತ್ಯಂತ ವೈವಿಧ್ಯಮಯ ಹಾಗೂ ಸೃಜನಶೀಲ ಚಟುವಟಿಕೆಯಾಗಿದೆ. ಇದು ಸದಾ ಹೊಸ ಮಾದರಿಗಳಿಗೆ ತೆರೆದುಕೊಳ್ಳಬೇಕು ಎಂದು ಬಿ.ವಿ. ಕಾರಂತರು ಹೇಳುತ್ತಿದ್ದರು ಎಂದು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಮಾಜಿ ನಿರ್ದೇಶಕಿ ಡಾ| ಅನುರಾಧಾ ಕಪೂರ್‌ ಅನಿಸಿಕೆ ವ್ಯಕ್ತಪಡಿಸಿದರು.

Advertisement

ತಾಲೂಕಿನ ತುಮರಿ ಗ್ರಾಮದಲ್ಲಿ ಕಿನ್ನರಮೇಳ ಸಂಸ್ಥೆ ರಾಷ್ಟ್ರೀಯ ನಾಟಕ ಶಾಲೆಯ ಸಹಯೋಗದೊಂದಿಗೆ 21 ದಿನಗಳ ಕಾಲ “ಪ್ರಯೋಗ ಸಿದ್ಧತೆ’ ಬಗ್ಗೆ ಏರ್ಪಡಿಸಿದ್ದ ರಂಗ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ಆಧುನಿಕ ದಿನಗಳಲ್ಲಿ ಎಲ್ಲಾ ಕ್ಷೇತ್ರವು ವಾಣಿಜ್ಯೀಕರಣಗೊಳ್ಳುತ್ತಿದೆ. ಬದುಕು ಎಂದರೆ ಹಣವಷ್ಟೇ ಅಲ್ಲ, ಅದನ್ನು ಮೀರಿದ ಹಲವು ಸಂಗತಿಗಳಿವೆ ಎಂಬುದನ್ನು ತಿಳಿಸಿಕೊಡುವುದೇ ರಂಗಭೂಮಿಯಂತಹ ಕಲಾ ಪ್ರಕಾರದ ಪ್ರಮುಖ ಉದ್ದೇಶ. ಇಲ್ಲ. ನೈತಿಕ ಶಿಕ್ಷಣ ರಂಗ ಶಿಕ್ಷಣದ ಪ್ರಮುಖ ಭಾಗವಾಗಿರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ರಂಗ ನಿರ್ದೇಶಕ ಚಿದಂಬರರಾವ್‌ ಜಂಬೆ ಮಾತನಾಡಿ, ರಂಗಭೂಮಿಯಲ್ಲಿ ಕಲಿತು ಮುಗಿಯಿತು ಎನ್ನುವುದೇ ಇಲ್ಲ. ಕೆಲವೊಮ್ಮೆ ರಂಗ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳೇ ಶಿಬಿರಾರ್ಥಿಗಳಿಂದ ಕಲಿಯುವುದು ಇರುತ್ತದೆ. ಹೀಗಾಗಿ ರಂಗ ಶಿಕ್ಷಣ ಎಂಬುದು ಪರಸ್ಪರ ಕೊಟ್ಟು ತೆಗೆದುಕೊಳ್ಳುವ ಪ್ರಕ್ರಿಯೆ ಎಂದರು.

ಶಿಬಿರದ ನಿರ್ದೇಶಕ ಕಿನ್ನರ ಮೇಳ ಸಂಸ್ಥೆಯ ಕೆ.ಜಿ. ಕೃಷ್ಣಮೂರ್ತಿ, ದೇಶದ ವಿವಿಧ ಭಾಗಗಳಿಂದ ಶಿಬಿರಾರ್ಥಿಗಳು ಭಾಗವಹಿಸಿದ್ದರು. ರಂಗಕರ್ಮಿ ಕೆ.ಎಸ್‌. ರಾಜೇಂದ್ರನ್‌, ಗಿರೀಶ್‌ ಕಾಸರವಳ್ಳಿ, ಡಾ| ಅಜಯ್‌ ಜೋಷಿ, ಸುರೇಶ್‌ ಆನಗಳ್ಳಿ, ಸುರೇಶ್‌ ಶೆಟ್ಟಿ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಕಿನ್ನರ ಮೇಳ ಸಂಸ್ಥೆಯ ಸುಶೀಲಾ ಕೆಳಮನೆ, ಗಣೇಶ್‌, ಮೇದಿನಿ, ಭರತ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next