Advertisement

200 ಯೂನಿಟ್ ಒಳಗಡೆ ವಿದ್ಯುತ್ ಬಳಕೆಗೆ ಶುಲ್ಕವಿಲ್ಲ ; ಕೇಜ್ರಿವಾಲ್ ಕೊಡುಗೆ

09:28 AM Aug 02, 2019 | Hari Prasad |

ನವದೆಹಲಿ: ನೀವು ತಿಂಗಳಿಗೆ 200 ಯೂನಿಟ್ ವಿದ್ಯುತ್ ಬಳಸುತ್ತಿದ್ದಲ್ಲಿ ನೀವಿನ್ನು ವಿದ್ಯುತ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇದು ದೆಹಲಿ ನಾಗರಿಕರಿಗೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಹೊಸ ಕೊಡುಗೆ.

Advertisement

ದೆಹಲಿ ನಾಗರಿಕರಲ್ಲಿ ಮಿತ ವಿದ್ಯುತ್‌ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ವಿನೂತನ ಹೊಸ ಕ್ರಮವನ್ನು ದಿಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿದೆ. ಗುರುವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರು ಈ ವಿನೂತನ ಯೋಜನೆಯನ್ನು ಪ್ರಕಟಿಸಿದ್ದಾರೆ.

200 ಯೂನಿಟ್‌ ಬಳಸುವವರಿಗೆ ಉಚಿತ ವಿದ್ಯುತ್‌ ಲಭಿಸಲಿದೆ. 201ರಿಂದ 400 ಯೂನಿಟ್‌ ಬಳಸುವವರ ಬಿಲ್‌ನಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಲಾಗಿದೆ.

ಈ ಯೋಜನೆಯಿಂದ ದಿಲ್ಲಿ ನಗರವೊಂದರಲ್ಲೇ ಶೇ. 33ರಷ್ಟು ಮಂದಿ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ದಿಲ್ಲಿಯಲ್ಲಿ ವಿದ್ಯುತ್‌ ದರ ಏರಿಕೆ ಮಾಡಿರಲಿಲ್ಲ. ಈ ಮೂಲಕ ಇದೀಗ ದೇಶದಲ್ಲಿ ಅತಿ ಕಡಿಮೆ ದರದಲ್ಲಿ ವಿದ್ಯುತ್‌ ನೀಡುವ ರಾಜ್ಯ ದಿಲ್ಲಿಯಾಗರಲಿದೆ. ಕೇಜ್ರಿವಾಲ್ ಸರಕಾರದ ಈ ವಿನೂತನ ಯೋಜನೆಯನ್ನು ಹಲವರು ಪ್ರಶಂಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next