ಅಡ್ಮಿನ್: ಪ್ರಸನ್ನ
Advertisement
ನಾವೆಲ್ಲ ಓದಿದ್ದು, ಬೆಂಗಳೂರಿನ ಬಸವನಗುಡಿ ಹೈಸ್ಕೂಲ್‌ನಲ್ಲಿ. ಅಲ್ಲಿ ಓದಿದ್ದ, ಗೆಳೆಯರೆಲ್ಲ ಸೇರಿಕೊಂಡು, “ಬಸವನಗುಡಿ ಬುಲ್ಸ್’ ಎಂಬ ಗುಂಪನ್ನು ಮಾಡಿದ್ದೆವು. ಆಗ ವಿಧಾನಸೌಧ ಚುನಾವಣೆಯ ಕಾಲ. ಯಾರ ಬಾಯಲ್ಲಿ ನೋಡಿದ್ರೂ, ಎಲೆಕ್ಷನ್ ಬಗ್ಗೆಯೇ ಚರ್ಚೆ. ನಮ್ಮ ಗ್ರೂಪ್‌ನಲ್ಲಂತೂ ಎಲ್ಲರೂ ಮೋದಿಜೀ ಪರ ಪೋಸ್ಟ್ ಹಾಕ್ತಾ ಇದ್ರು. ಅವರ ಕೋಟ್ಸ್, ಭಾಷಣದ ತುಣುಕು, ಫೋಟೋ, ಮೀಮ್ಸ್‌ಗಳನ್ನು ನೋಡಿ ನೋಡಿ, ನಾನು ರಾಹುಲ್ ಗಾಂಧಿ ಪರ ಒಂದು ಪೋಸ್ಟ್ ಹಾಕಿದ್ದೆ. ತಕ್ಷಣವೇ ಪರವಿರೋಧ ವ್ಯಕ್ತವಾಯಿತು. ಎರಡು ಪಾರ್ಟಿಗಳ ಧ್ವನಿ ಮೊಳಗಿದವು. ಧರ್ಮದ ಮಾತುಗಳೂ ಬಂದವು. ಈ ಜಗಳ ತಾರಕಕ್ಕೇರಿತ್ತು. ಈಗ ನಾವೆಲ್ಲ ಬೇರೆ ಬೇರೆ ಆಗಿದ್ದೇವೆ. ವಾಟ್ಸಾಪ್‌ನಿಂದಾಗಿ ನಾನು ನನ್ನ ಗೆಳೆಯರನ್ನು ಕಳಕೊಂಡೆ. ಹಾಳಾದ ರಾಜಕೀಯ ನಮ್ಮನ್ನು ಬೇರೆ ಮಾಡಿತು.