Advertisement

ಕೋವಿಡ್ 19ದಲ್ಲೂ ರಾಜಕೀಯ ಸಲ್ಲ

04:37 PM Apr 28, 2020 | Suhan S |

ಬೀಳಗಿ: ಮನುಕುಲವನ್ನು ಕಾಡುತ್ತಿರುವ ಮಹಾಮಾರಿ  ಕೋವಿಡ್ 19 ವೈರಸ್‌ಗೆ ಜನರು ಭಯಭೀತರಾಗಿದ್ದಾರೆ. ಇಂಥಹ ಸಂದಿಗ್ಧ ಸ್ಥಿತಿಯಲ್ಲಿಯೂ ರಾಜಕಾರಣ ಮಾಡುವುದು ಸಲ್ಲದು ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದ್ದಾರೆ.

Advertisement

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ 19  ನಿಯಂತ್ರಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ದಿಟ್ಟ ಮತ್ತು ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವ ಮೂಲಕ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿವೆ. ಇಂತಹ ರಾಷ್ಟ್ರೀಯ ವಿಪತ್ತಿನಲ್ಲಿಯೂ ವಿರೋಧ ಪಕ್ಷಗಳು ಅನಾವಶ್ಯಕವಾಗಿ ರಾಜಕೀಯ ಬೆರೆಸಿ ವಿರೋಧ ಮಾಡುತ್ತಿವೆ. ಇದು ಸರಿಯಾದ ಕ್ರಮವಲ್ಲ ಎಂದರು.

ಕೋವಿಡ್‌-19ಕ್ಕೆ ಇಡೀ ಜಗತ್ತೆ ನಲುಗಿ ಹೋಗಿದೆ. ಭಾರತಕ್ಕೂ ಬಂದೊದಗಿರುವ ಈ ಗಂಡಾಂತರದಿಂದ ಎಲ್ಲ ಪಕ್ಷಗಳ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುವುದರೊಂದಿಗೆ ಜನರಿಗೆ ನೆರವಾಗಬೇಕಿರುವುದು ಅವಶ್ಯಕವಾಗಿದೆ. ಈ ಕಷ್ಟದ ದಿನಗಳು ಬೇಗನೆ ನಿವಾರಣೆಯಾಗಲಿದೆ. ಕೊರೊನಾಕ್ಕೂ ಔಷಧ ಶೋಧನೆಯ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿದೆ. ಕಾರಣ ಪಕ್ಷಭೇದ ಮರೆತು, ರಾಜಕಾರಣ ದೂರವಿಟ್ಟು ಮಾನವೀಯ ನೆಲೆಗಟ್ಟಿನ ಮೇಲೆ ಕೊರೊನಾ ಯುದ್ದವನ್ನು ಗೆಲ್ಲುವುದೊಂದೆ ಗುರಿಯಾಗಬೇಕು. ತೊಂದರೆಯಲ್ಲಿರುವ ಬಡ-ನಿರ್ಗತಿಕ ಕುಟುಂಬಗಳಿಗೆ ಉದಾರವಾಗಿ ಎಲ್ಲರೂ ನೆರವು ನೀಡಲು ಮುಂದಾಗುವ ಮೂಲಕ ಬಸವಣ್ಣನವರ ಜಯಂತಿಗೆ ನಿಜಾರ್ಥ ಕಲ್ಪಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next