Advertisement
ಕೋಸ್ಟಲ್‌ವುಡ್‌ನಲ್ಲಿ ದಿನದಿಂದ ದಿನಕ್ಕೆ ತುಳು ಸಿನೆಮಾಗಳ ಸಂಖ್ಯೆ ಅಧಿಕಗೊಳ್ಳುತ್ತ ಕುಡ್ಲದ ಕಲಾವಿದರು ಕರಾವಳಿ ಭಾಗದಲ್ಲಿ ಸಖತ್ ಫೇಮಸ್ ಆಗುತ್ತಿದ್ದಾರೆ. ಅದರಲ್ಲಿಯೂ ಕುಡ್ಲದಲ್ಲಿ ಕಾಮಿಡಿ ಗೆಟಪ್‌ಗೆ ಜಾಸ್ತಿ ಒತ್ತು ನೀಡುವ ಕಾರಣದಿಂದ ಕಾಮಿಡಿ ಕಲಾವಿದರು ಕುಡ್ಲದ ಬಹುದೊಡ್ಡ ಆಸ್ತಿ.
Related Articles
“ರಾಜಕೀಯ ಎಲ್ಲ ನಮಗೆ ಆಗಿ ಬರಲ್ಲ’ ಎನ್ನುತ್ತ ರಾಜಕೀಯ ದಿಂದ ಅಂತರ ಕಾಯ್ದುಕೊಂಡೇ
ಇದ್ದಾರೆ.
Advertisement
ಹಾಗೆಂದು ಚುನಾವಣೆ ಪ್ರಕ್ರಿಯೆಯಿಂದ ಇವರು ದೂರ ನಿಂತಿಲ್ಲ. ಹೇಗೆಂದರೆ ಎ. 18ರಂದು ನಡೆಯುವ ಲೋಕಸಭಾ ಚುನಾವಣೆಗೆ ನಾವೆಲ್ಲ ಮತದಾನ ಮಾಡೋಣ ಎನ್ನುವ ಜಾಗೃತ ಹೋರಾಟದಲ್ಲಿ ಕೈಜೋಡಿಸಿದ್ದಾರೆ.
“ಮತದಾನ ಮಾಡಿ; ಭವ್ಯ ಭಾರತ ನಿರ್ಮಿಸಿ’ ಎಂಬ ಸಂಕಲ್ಪವನ್ನು ಉಲ್ಲೇಖೀಸಿ ಮತದಾನ ಮಾಡುವಂತೆ ಅವರು ಸಾಮಾಜಿಕ ಜಾಲತಾಣದ ಮುಖೇನ ಮನವಿ ಮಾಡುತ್ತಿದ್ದಾರೆ. ಈ ಮೂಲಕ ಪಕ್ಷಗಳ ಪರವಾಗಿ ಮತ ಕೇಳುವ ಬದಲು ಎಲ್ಲರೂ ಮತದಾನ ಮಾಡಿ ಎಂದು ಕರೆ ನೀಡುತ್ತಿದ್ದಾರೆ.
ಅಂದಹಾಗೆ, ಸಿನೆಮಾದವರು ಪ್ರಚಾರಕ್ಕೆ ಹೋಗಿಲ್ಲ ಎಂಬ ಸಂಗತಿ ಇದ್ದರೂ ಕುಡ್ಲ ಭಾಗದಲ್ಲಿದ್ದ ಹಲವು ರಾಜಕೀಯ ನೇತಾರರು ಸಿನೆಮಾದ ನೆರಳಿನಲ್ಲಿದ್ದರು ಎಂಬುದು ಕೂಡ ಉಲ್ಲೇಖನೀಯ.
ಕೆಲವರು ಸಿನೆಮಾ ಮಾಡಿದ ಅನಂತರ ರಾಜಕೀಯಕ್ಕೆ ಬಂದಿದ್ದರೆ, ಇನ್ನೂ ಕೆಲವರು ರಾಜಕೀಯದಲ್ಲಿದ್ದು ಸಿನೆಮಾ ಮಾಡಿದವರಿದ್ದಾರೆ ಎಂಬುದು ವಿಶೇಷ.
– ದಿನೇಶ್ ಇರಾ