Advertisement

ರಾಜಕೀಯ ನಿವೃತ್ತಿ ಇಲ್ಲ

11:44 AM Jun 22, 2018 | |

ಬೆಂಗಳೂರು: ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ವಿಧಾನ ಪರಿಷತ್‌ ಸದಸ್ಯತ್ವದಿಂದ ನಿವೃತ್ತಿಯಾಗಿದ್ದಾರೆ. ಆದರೆ, ರಾಜಕೀಯ ನಿವೃತ್ತಿ ಹೊಂದುವುದಿಲ್ಲ ಎಂದು ಅವರು ಘೋಷಿಸಿದ್ದಾರೆ. ಸಭಾಪತಿಯಾಗಿ ಕೊನೆಯ ದಿನವಾದ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಷತ್‌ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದ ಖುಷಿ ಇದೆ. ಸಿಹಿ ಕಹಿ ಅನೇಕ ಘಟನೆಗಳು ನಡೆದಿವೆ.

Advertisement

ನಾನು ಹುದ್ದೆಯಿಂದ ನಿವೃತ್ತಿಯಾಗುತ್ತಿದ್ದು, ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ. ರಾಜ್ಯಪಾಲರ ಹುದ್ದೆ ನೀಡುತ್ತೇನೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದರು. ಅದಕ್ಕೆ ಸಮ್ಮತಿ ಸೂಚಿಸಿದ್ದೆ. ಆದರೆ, ರಾಜ್ಯಪಾಲರ ಹುದ್ದೆ ಸಿಗಲಿಲ್ಲ. ಇದರಿಂದ ಯಾವುದೇ ಬೇಸರವಿಲ್ಲ. ಮುಂದಿನ ಅವಕಾಶಗಳ ಕುರಿತು ಇನ್ನೂ ಯಾವುದೇ ಮಾತುಕತೆಯಾಗಿಲ್ಲ ಎಂದು ಹೇಳಿದರು.

ಡಿ.ಎಚ್‌. ಶಂಕರ ಮೂರ್ತಿ ನೈರುತ್ಯ ಪದವಿಧರ ಕ್ಷೇತ್ರದಿಂದ 1988 ರಿಂದ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದು, 1994, 2000, 2006, 2012ರ ವರೆಗೂ ಸತತವಾಗಿ ಆಯ್ಕೆಯಾಗುತ್ತ ಬಂದಿದ್ದರು. 2006 ರಲ್ಲಿ ಜೆಡಿಎಸ್‌ ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈ ಬಾರಿ ಬಿಜೆಪಿ ನೈರುತ್ಯ  ಪದವಿಧರ ಕ್ಷೇತ್ರಕ್ಕೆ ಅವರ ಬದಲು ಆಯನೂರು ಮಂಜುನಾಥ ಅವರಿಗೆ ಟಿಕೆಟ್‌ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next