ಹೊಸದಿಲ್ಲಿ : 500 ರೂ. ಹಾಗೂ 1,000 ರೂ. ಕರೆನ್ಸಿ ನೋಟುಗಳನ್ನು ನಿಷೇಧಿಸಿದ ಬಳಿಕ ಕೇಂದ್ರ ಸರಕಾರ 500 ರೂ.ಗಳ ಹೊಸ ನೋಟುಗಳನ್ನು ಚಲಾವಣೆಗೆ ತಂದಿತ್ತು. ಈಗೆರಡು ದಿನಗಳ ಹಿಂದೆ ಸರಕಾರ 1,000 ರೂ.ಗಳ ಹೊಸ ನೋಟನ್ನು ಕೂಡ ಚಲಾವಣೆಗೆ ತರಲಿದೆ; ನೋಟುಗಳು ಈಗಾಗಲೇ ಮುದ್ರಣ ಹಂತದಲ್ಲಿವೆ ಎಂದೆಲ್ಲ ಸುದ್ದಿಗಳು ಹರಿದಾಡಿದ್ದವು.
ಈ ಹಿನ್ನೆಲೆಯಲ್ಲಿ ಇದೀಗ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಶಿಕಾಂತ ದಾಸ್ ಅವರು ಇಂದು ಹೇಳಿಕೆಯೊಂದನ್ನು ನೀಡಿದ್ದಾರೆ :
1,000 ರೂ. ಹೊಸ ನೋಟುಗಳನ್ನು ಪರಿಚಯಿಸುವ ಯಾವುದೇ ಯೋಜನೆ ಸರಕಾರದ ಮುಂದಿಲ್ಲ; ಕಡಿಮೆ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಇನ್ನಷ್ಟು ಪ್ರಮಾಣದಲ್ಲಿ ಮುದ್ರಿಸಿ ಚಲಾವಣೆಗೆ ತರುವ ಆಲೋಚನೆ ಮಾತ್ರವೇ ಸರಕಾರಕ್ಕೆ ಇದೆ.
ಎಟಿಎಂ ಗಳಲ್ಲಿ ಕೆಲವೆಡೆ ನಗದು ಕೊರತೆ ಇರುವ ದೂರುಗಳು ಬರುತ್ತಿವೆ. ಈ ಸಮಸ್ಯೆಯನ್ನು ನಿವಾರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಜನರು ಅನಗತ್ಯವಾಗಿ ಎಟಿಎಂನಿಂದ ದೊಡ್ಡ ಪ್ರಮಾಣದ ಹಣ ತೆಗೆಯುವ ಚಾಳಿಯನ್ನು ಕಡಿಮೆ ಮಾಡಬೇಕು.
ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ದಿನವಹಿ ನೆಲೆಯಲ್ಲಿ ನಗದು ಪೂರೈಕೆಯನ್ನು ಆರ್ ಬಿ ಐ ನೋಡಿಕೊಳ್ಳುತ್ತಿದೆ. ನಗದು ಕೊರತೆಗೆ ಅವಕಾಶವಾಗದಂತೆ ನಿಗಾ ವಹಿಸಲಾಗುತ್ತಿದೆ.