Advertisement

ಪೆಟ್ರೋಲ್, ಡೀಸೆಲ್ ವಾಹನ ನಿಷೇಧ ಇಲ್ಲ: ಗಡ್ಕರಿ

08:39 AM Sep 24, 2019 | Team Udayavani |

ಹೊಸದಿಲ್ಲಿ: ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಪುನರುಚ್ಚರಿಸಿದ್ದಾರೆ.

Advertisement

ಎಲೆಕ್ಟ್ರಾನಿಕ್ ವಾಹನಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತದೆ. ಆದರೆ ಇದರರ್ಥ ಪೆಟ್ರೋಲ್ ಡೀಸೆಲ್ ವಾಹನಗಳನ್ನು ರಸ್ತೆಯಿಂದ ಹೊರ ಇಡುವುದಲ್ಲ. ಇಂಧನದ ಕೊರತೆ ಎದುರಾಗಲಿರುವ ಕಾರಣಕ್ಕೆ ಅದನ್ನು ತಪ್ಪಿಸಲು ದೇಶದಲ್ಲಿ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ ವಾಹನಗಳನ್ನು ಪರಿಚಯಿಸಿ, ಉತ್ತೇಜಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಕುಸಿಯುತ್ತಿರುವ ಅಟೋಮೊಬೈಲ್ ಸೆಕ್ಟರ್ ಕುರಿತು ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ಚೇತರಿಕೆ ಕಾಣುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ 2 ವರ್ಷಗಳಲ್ಲಿ ಎಲೆಕ್ಟ್ರಾನಿಕ್ ವಾಹನಗಳು ಹೆಚ್ಚು ಬಳಕೆಗೆ ಬರಲಿದೆ. 2 ವರ್ಷಗಳಲ್ಲಿ ಎಲೆಕ್ಟ್ರಿಕ್ ಬಸ್ಗಳು ನಮ್ಮ ರಸ್ತೆಯಲ್ಲಿ ಓಡಾಡಲಿವೆ. ಎಲೆಕ್ಟ್ರಿಕ್ ವಾಹನಗಳ ಜತೆಗೆ ಬಯೋ ಇಥೆನಾಲ್ ಮತ್ತು ಸಿಎನ್ಜಿ ಇಂಧನಗಳ ಮೂಲಕ ಓಡಾಡುವ ವಾಹನಗಳನ್ನೂ ಗಮನದಲ್ಲಿರಿಸಿಕೊಳ್ಳಲಾಗಿದೆ ಎಂದಿದ್ದಾರೆ.

2030ರಲ್ಲಿ ಎಲೆಕ್ಟ್ರಿಕ್ ವಾಹನ ಮಾತ್ರ
ನೀತಿ ಆಯೋಗ ಈಗಾಗಲೇ ತಿಳಿಸಿರುವಂತೆ ಮುಂಬರು 2030ರಲ್ಲಿ ಕೇವಲ ಎಲೆಕ್ಟ್ರಿಕ್ ವಾಹನಗಳಷ್ಟೇ ಭಾರತದ ಮಾರುಕಟ್ಟೆ ಮಾರಾಟಕ್ಕೆ ಇಡಲಾಗುತ್ತದೆ. ಈ ಗುರಿಯನ್ನು ತಲುಪಲು ಸರಕಾರ ಹೆಚ್ಚು ಕಾರ್ಯೋನ್ಮುಖವಾಗಿದೆ ಎಂದಿದ್ದಾರೆ. ಇಂಧನಕ್ಕೆ ಹೋಲಿಸಿದರೆ ಎಲೆಕ್ಟ್ರಾನಿಕ್ ವಾಹನಗಳು ಅಗ್ಗವಾಗಲಿದೆ. ಇದರಿಂದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಇಂಧನದ ಜಾಗದಲ್ಲಿ ನಾವು ಎಲೆಕ್ಟ್ರಿಕ್ ವಾಹನಗಳನ್ನು ಬಳಸಿದರೆ ಒಂದು ಲೀಟರ್ ಇಂಧನ ಬಳಸುವ ಬದಲು 15 ರೂ.ನಲ್ಲಿ ಎಲೆಕ್ಟ್ರಾನಿಕ್ ವಾಹನ ಸೇವೆ ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next